ಸೇವೆಯಿಂದ ಮಾಲೀಕನಿಗೆ ಅತೃಪ್ತಿ: ಹೊಸ ಟಾಟಾ ಸಫಾರಿ ಕಸ ಸಂಗ್ರಹಿಸಲು!!
Team Udayavani, Nov 17, 2021, 6:44 PM IST
ಜೈಪುರ:ಅಚ್ಚರಿಯ ಘಟನೆಯೊಂದರಲ್ಲಿ,ಟಾಟಾ ಸಫಾರಿಯ ಮಾಲೀಕರೊಬ್ಬರು ತಮ್ಮ ದುಬಾರಿ ಯಸ್ ಯುವಿ ಕಾರನ್ನು ಕಸ ಸಂಗ್ರಹಿಸುವ ವಾಹನವಾಗಿ ಸೇವೆ ಸಲ್ಲಿಸಲು ಮುನ್ಸಿಪಲ್ ಕಾರ್ಪೊರೇಷನ್ ಗೆ ನೀಡಿದ ವಿದ್ಯಮಾನ ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದೆ.
ಮಾಲೀಕ ಟಾಟಾ ಸಫಾರಿಯ ಬ್ರೇಕ್ಗಳಿಗೆ ಸಂಬಂಧಿಸಿದಂತೆ ಪುನರಾವರ್ತಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಈ ವಿಚಿತ್ರ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಹರ್ಷ ವ್ಲಾಗ್ಸ್ ಅಪ್ಲೋಡ್ ಮಾಡಿರುವ ಯು ಟ್ಯೂಬ್ ವೀಡಿಯೊದಲ್ಲಿ, ಮಾಲೀಕ ತಮ್ಮ ತೊಂದರೆಕೊಡುತ್ತಿದ್ದ ಟಾಟಾ ಸಫಾರಿ ಕುರಿತು ಮಾತನಾಡುವುದನ್ನು ನೋಡಬಹುದಾಗಿದೆ
ತನ್ನ ಟಾಟಾ ಸಫಾರಿ ಎಸ್ಯುವಿಯ ಬ್ರೇಕ್ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಒಂದೆರಡು ಬಾರಿ ಬ್ರೇಕ್ಗಳನ್ನು ಬದಲಾಯಿಸಿದೆ ಆದಾಗ್ಯೂ, ಬ್ರೇಕ್ಗಳು ನಿರೀಕ್ಷೆಗಿಂತ ಬೇಗ ಹಾಳಾಗುತ್ತಲೇ ಇದ್ದವು, ಇದು ಮತ್ತೆ ಮತ್ತೆ ನನ್ನನ್ನು ಸರ್ವಿಸ್ ಸೆಂಟರ್ ಗೆ ಅಲೆಯುವಂತೆ ಮಾಡಿತು.
ಈ ಸಮಸ್ಯೆಗೆ ತಂತ್ರಜ್ಞರಿಂದ ಶಾಶ್ವತ ಪರಿಹಾರವನ್ನು ಪಡೆಯಲು ವಿಫಲವಾದ ನಂತರ ಅದನ್ನು ಕಸ ಸಂಗ್ರಹಿಸುವ ವಾಹನವಾಗಿ ಬಳಸಲು ನಿರ್ಧರಿಸಿದೆ ಎಂದು ಮಾಲೀಕ ಹೇಳಿಕೊಂಡಿದ್ದಾರೆ.
ಈ ಹಿಂದೆಯೂ ಕಾರುಗಳ ಇಂತಹ ಕೆಲ ಪ್ರಕರಣಗಳು ನಡೆದಿವೆ. ಟಾಟಾ ಸಫಾರಿ ಮಾತ್ರವಲ್ಲದೆ ಈ ಹಿಂದೆ, ಎಂಜಿ ಹೆಕ್ಟರ್, ಸ್ಕೋಡಾ ಆಕ್ಟೇವಿಯಾ ಮತ್ತು ಫೋರ್ಡ್ ಎಂಡೀವರ್ನಂತಹ ಕಾರುಗಳು ಸಹ ಇಂತಹ ಸಮಸ್ಯೆಯನ್ನು ಎದುರಿಸಿ, ಮಾಲೀಕರು ಕತ್ತೆಗಳನ್ನು ಕಟ್ಟಿ ಎಳೆಸಿ ಸುದ್ದಿಯಾಗಿದ್ದೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್