Udayavni Special

ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ನಮ್ದೇ ಆಗಲಿ…:ಭಾರತ-ನ್ಯೂಜಿಲ್ಯಾಂಡ್‌ ಮುಖಾಮುಖೀಗೆ ಕ್ಷಣಗಣನೆ


Team Udayavani, Jun 18, 2021, 7:00 AM IST

ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ನಮ್ದೇ ಆಗಲಿ…:ಭಾರತ-ನ್ಯೂಜಿಲ್ಯಾಂಡ್‌ ಮುಖಾಮುಖೀಗೆ ಕ್ಷಣಗಣನೆ

ಸೌತಾಂಪ್ಟನ್‌: ಕ್ರಿಕೆಟ್‌ ಇತಿಹಾಸದ ಪ್ರಪ್ರಥಮ ವಿಶ್ವಕಪ್‌ ಟೆಸ್ಟ್‌ ಫೈನಲ್‌ಗೆ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಕ್ಷಣಗಣನೆ ಆರಂಭಿಸಿವೆ. ಇಲ್ಲಿನ “ಏಜಸ್‌ ಬೌಲ್‌ ಸ್ಟೇಡಿಯಂ’ನಲ್ಲಿ ಶುಕ್ರವಾರ ಐತಿಹಾಸಿಕ ಮುಖಾಮುಖೀ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್‌ ವಿಶ್ವಕಪ್‌ ಕಿರೀಟ ಏರಿಸಿಕೊಳ್ಳಲು ಎರಡೂ ತಂಡಗಳು ತುದಿಗಾಲಲ್ಲಿ ನಿಂತಿವೆ. ಕೊಹ್ಲಿ ಪಡೆಯೇ ಗೆದ್ದು ಬರಲಿ ಎಂಬುದು ಭಾರತದ ಕ್ರಿಕೆಟ್‌ ಪ್ರೇಮಿಗಳ ಹಾರೈಕೆ.

ಕೇವಲ 45 ವರ್ಷಗಳ ಅವಧಿಯಲ್ಲಿ ಸಾಕಷ್ಟು ಏಕದಿನ ಹಾಗೂ ಟಿ20 ವಿಶ್ವಕಪ್‌ಗ್ಳನ್ನು ಕಂಡ ಕ್ರಿಕೆಟ್‌ ಪ್ರಿಯರಿಗೆ, 144 ವರ್ಷಗಳ ಸುದೀರ್ಘ‌ ಇತಿಹಾಸ ಹೊಂದಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವಕಪ್‌ ಸಹಜ ವಾಗಿಯೇ ಕುತೂಹಲ ಹುಟ್ಟಿಸಿದೆ, ಕೌತುಕ ಮೂಡಿಸಿದೆ. ಭಾರತ-ಕಿವೀಸ್‌ ಕ್ರಿಕೆಟಿಗರಿಗೂ ಇದು ವಿಶೇಷ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ. ತಟಸ್ಥ ತಾಣದಲ್ಲಿ ನಡೆಯುವ ಪಂದ್ಯವಾದ್ದರಿಂದ ಎರಡೂ ತಂಡಗಳು ಒತ್ತಡ ರಹಿತವಾಗಿ ಆಡಬಹುದು ಎಂಬ ನಿರೀಕ್ಷೆ ಇದೆ.

ಭಾರತಕ್ಕೆ ಅಭ್ಯಾಸ ಕೊರತೆ
ವರ್ಷಾರಂಭದಲ್ಲಿ ವಿರಾಟ್‌ ಕೊಹ್ಲಿ ಗೈರಲ್ಲಿ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಐತಿಹಾಸಿಕ ಸರಣಿ ಜಯಿಸಿದ್ದು, ಅನಂತರ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಹಿನ್ನಡೆ ಅನುಭವಿಸಿಯೂ ಸರಣಿ ವಶಪಡಿಸಿಕೊಂಡದ್ದೆಲ್ಲ ಭಾರತದ ಟೆಸ್ಟ್‌ ಯಶೋಗಾಥೆಯನ್ನು ಸಾರುತ್ತವೆ. ಈ ಸಾಧನೆಯನ್ನು ಪರಿಗಣಿಸಿದರೆ ಭಾರತವೇ ಫೈನಲ್‌ ಪಂದ್ಯದ ಫೇವರಿಟ್‌.
ಆದರೆ ಅನಂತರ ಟೀಮ್‌ ಇಂಡಿಯಾ ಯಾವುದೇ ಟೆಸ್ಟ್‌ ಪಂದ್ಯಗಳಲ್ಲಿ ಆಡದಿರುವುದು, ಕೇವಲ ಸೀಮಿತ ಓವರ್‌ಗಳ ಪಂದ್ಯಗಳಲ್ಲೇ ತೊಡಗಿಸಿಕೊಂಡದ್ದು, ಇಂಗ್ಲೆಂಡಿಗೆ ಬಂದಿಳಿದ ಬಳಿಕವೂ ಯಾವುದೇ ಪ್ರ್ಯಾಕ್ಟೀಸ್‌ ಮ್ಯಾಚ್‌ ಇಲ್ಲದಿದ್ದುದ್ದನ್ನೆಲ್ಲ ಗಂಭೀರವಾಗಿ ಪರಿಗಣಿಸಿದಾಗ ಭಾರತ ಈ ಪಂದ್ಯದಲ್ಲಿ ಹಿನ್ನಡೆ ಕಂಡೀತು ಎಂಬ ಆತಂಕವೂ ಕಾಡದಿರದು.

ಓಪನರ್‌ ಪಾತ್ರ ನಿರ್ಣಾಯಕ
ಭಾರತದ ಆಡುವ ಬಳಗ‌ ಅಂತಿಮಗೊಂಡಿದೆ. ರೋಹಿತ್‌-ಗಿಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಅಕಸ್ಮಾತ್‌ ಮೊದಲು ಬ್ಯಾಟಿಂಗ್‌ ಅವಕಾಶ ಸಿಕ್ಕಿದರೆ ಇವರು ಬೌಲ್ಟ್- ಸೌಥಿ ಜೋಡಿಯ ವೇಗದ ದಾಳಿಯನ್ನು ಮೆಟ್ಟಿ ನಿಲ್ಲುವುದರ ಮೇಲೆ ಭಾರತದ ನಡೆಯನ್ನು ಗುರುತಿಸಬಹುದು.

ಕೊಹ್ಲಿ ಬ್ಯಾಟಿಂಗ್‌ ಫಾರ್ಮ್ ಕೂಡ ಭಾರತದ ಪಾಲಿಗೆ ನಿರ್ಣಾಯಕವಾಗಲಿದೆ. ಅವರ ಇತ್ತೀಚಿನ ಟೆಸ್ಟ್‌ ಇನ್ನಿಂಗ್ಸ್‌ ಗಳಲ್ಲಿ ದೊಡ್ಡ ಮೊತ್ತ ಬಂದದ್ದಿಲ್ಲ. ಪೂಜಾರ, ರಹಾನೆ, ಬ್ರಿಸ್ಬೇನ್‌ ಹೀರೋ ಪಂತ್‌, ಆಲ್‌ರೌಂಡರ್‌ ಜಡೇಜ ನಿಂತು ಆಡಬೇಕಾದುದು ಅತ್ಯಗತ್ಯ.
ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಜಡೇಜ ಸೇರಿದಂತೆ 5 ಮಂದಿ ಸ್ಪೆಷಲಿಸ್ಟ್‌ ಬೌಲರ್‌ಗಳನ್ನು ಭಾರತ ಕಣಕ್ಕಿಳಿಸಲಿದೆ. ಇದು ತ್ರಿವಳಿ ವೇಗಿ, ಅವಳಿ ಸ್ಪಿನ್‌ ಕಾಂಬಿನೇಶನ್‌ ಆಗಿರಲಿದೆ. ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ, ಅನುಭವಿ ವೇಗಿಗಳಾದ ಇಶಾಂತ್‌, ಶಮಿ, ಪ್ರಧಾನ ಸ್ಪಿನ್ನರ್‌ ಅಶ್ವಿ‌ನ್‌ ಕಿವೀಸ್‌ ಸರದಿಗೆ ಕಂಟಕವಾದರೆ “ಕಪ್‌ ನಮೆªà’ ಎನ್ನಲಡ್ಡಿಯಿಲ್ಲ.

ಕಿವೀಸ್‌ಗೆ ಬೇಕಿದೆ ಲಕ್‌
ಭಾರತಕ್ಕೆ ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 3 ವಿಶ್ವಕಪ್‌ ಗೆದ್ದಿದೆ. ಆದರೆ ನ್ಯೂಜಿಲ್ಯಾಂಡ್‌ ಈ ವರೆಗೆ ಯಾವ ಮಾದರಿಯಲ್ಲೂ ವಿಶ್ವ ಚಾಂಪಿಯನ್‌ ಆಗಿಲ್ಲ. ಕಳೆದೆರಡು ಏಕದಿನ ವಿಶ್ವಕಪ್‌ ಕೂಟಗಳ ಫೈನಲ್‌ಗೆ ಲಗ್ಗೆ ಇರಿಸಿತಾದರೂ ಚಾಂಪಿಯನ್‌ ಪಟ್ಟ ಒಲಿಯಲಿಲ್ಲ. ಹೀಗಾಗಿ ಯಾವ ಕಾರಣಕ್ಕೂ ಸೌತಾಂಪ್ಟನ್‌ನಲ್ಲಿ ಕಪ್‌ ಜಾರಲು ಬಿಡಬಾರದು ಎಂಬ ಸಂಕಲ್ಪದಲ್ಲಿದೆ ವಿಲಿಯಮ್ಸನ್‌ ಪಡೆ.

ಸೌತಾಂಪ್ಟನ್‌ ಟ್ರ್ಯಾಕ್‌ ನ್ಯೂಜಿಲ್ಯಾಂಡ್‌ ಮಾದರಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವುದು, ಫೈನಲ್‌ ಪಂದ್ಯಕ್ಕೂ ಮುನ್ನ ಆತಿಥೇಯ ಇಂಗ್ಲೆಂಡ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಿ ಭರ್ಜರಿ ಅಭ್ಯಾಸ ಗಳಿಸಿದ್ದು, ಇದಕ್ಕೂ ಮಿಗಿಲಾಗಿ ವಿಲಿಯಮ್ಸನ್‌ ಗೈರಲ್ಲಿ ಸರಣಿ ವಶಪಡಿಸಿಕೊಂಡದ್ದೆಲ್ಲ ನ್ಯೂಜಿಲ್ಯಾಂಡ್‌ಗೆ ಪ್ಲಸ್‌ ಪಾಯಿಂಟ್‌ ಆಗಿ ಪರಿಣಮಿಸಿದೆ.
ಆದರೆ ತಂಡವೊಂದು ಎಷ್ಟೇ ಬಲಿಷ್ಠವಾಗಿರಲಿ, ಎಷ್ಟೇ ಆಭ್ಯಾಸ ನಡೆಸಲಿ, ಟ್ರ್ಯಾಕ್‌ ಅವರಿಗೇ ಫೇವರ್‌ ಆಗಿರಲಿ… ಅದೃಷ್ಟ ಇಲ್ಲದೇ ಹೋದರೆ ಯಾವ ಕಪ್‌ ಕೂಡ ಕೈ ಹಿಡಿಯದು ಎಂಬುದು ಕ್ರಿಕೆಟಿನ ಸಾರ್ವಕಾಲಿಕ ಸತ್ಯ!

ಟಾಪ್ ನ್ಯೂಸ್

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಲೈಂಗಿಕವಾಗಿ ಬಳಸಿ ವಂಚಿಸುವ ಪ್ರಕರಣಗಳಿಗೆ ವಿಶೇಷ ಕಾನೂನು ಬೇಕು: ಅಲಹಾಬಾದ್‌ ಹೈಕೋರ್ಟ್‌

ಲೈಂಗಿಕವಾಗಿ ಬಳಸಿ ವಂಚಿಸುವ ಪ್ರಕರಣಗಳಿಗೆ ವಿಶೇಷ ಕಾನೂನು ಬೇಕು: ಅಲಹಾಬಾದ್‌ ಹೈಕೋರ್ಟ್‌

ನೀಲಕಂಠರಾಯನ ಗಡ್ಡಿ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ: ಈಶ್ವರ ಖಂಡ್ರೆ

ನೀಲಕಂಠರಾಯನ ಗಡ್ಡಿ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ: ಈಶ್ವರ ಖಂಡ್ರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಹಾಕಿ: 4 ದಶಕಗಳ ಪದಕ ಬರ ನೀಗೀತೇ?

ಭಾರತದ ವೇಗಕ್ಕೆ ಕುಸಿದ ಇಂಗ್ಲೆಂಡ್‌

ಭಾರತದ ವೇಗಕ್ಕೆ ಕುಸಿದ ಇಂಗ್ಲೆಂಡ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಮಹಿಳಾ ಗಾಲ್ಫ್: ಮೊದಲ ಸುತ್ತಲ್ಲಿ ಅದಿತಿ ಅದ್ಭುತ

ಮಹಿಳಾ ಗಾಲ್ಫ್: ಮೊದಲ ಸುತ್ತಲ್ಲಿ ಅದಿತಿ ಅದ್ಭುತ

ಒಲಿಂಪಿಕ್ಸ್; ಸೆಮಿಫೈನಲ್ ಕಾದಾಟ-ಭಾರತದ ವನಿತೆಯರ ತಂಡಕ್ಕೆ ಸೋಲು, ಕಂಚಿನ ಪದಕಕ್ಕೆ ಸೆಣಸಾಟ

ಒಲಿಂಪಿಕ್ಸ್; ಸೆಮಿಫೈನಲ್ ಕಾದಾಟ-ಭಾರತದ ವನಿತೆಯರ ತಂಡಕ್ಕೆ ಸೋಲು, ಕಂಚಿನ ಪದಕಕ್ಕೆ ಸೆಣಸಾಟ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

Untitled-1

ಹಾಕಿ: 4 ದಶಕಗಳ ಪದಕ ಬರ ನೀಗೀತೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.