ಇನ್ನು ದಿನದ 24 ಗಂಟೆ ಕೋವಿಡ್ ಲಸಿಕೆ ಲಭ್ಯ
Team Udayavani, Mar 4, 2021, 7:00 AM IST
ಹೊಸದಿಲ್ಲಿ: ಕೊರೊನಾ ಲಸಿಕೆ ನೀಡುವ ಸಂಬಂಧ ನಿಗದಿ ಮಾಡಿದ್ದ ಸಮಯ ಮಿತಿಯನ್ನು ಕೇಂದ್ರ ಸರಕಾರ ತೆಗೆದುಹಾಕಿದ್ದು, ಇನ್ನು ವಾರದ ಏಳು ದಿನವೂ ದಿನದ 24 ಗಂಟೆಯೂ ಪಡೆದುಕೊಳ್ಳಬಹುದು.
ಸದ್ಯ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ನೀಡಲಾಗುತ್ತಿತ್ತು. ಆದರೆ ಲಸಿಕೆ ಪಡೆಯುವವರ ಅನುಕೂಲಕ್ಕೆ ತಕ್ಕಂತೆ ಆಸ್ಪತ್ರೆಗಳು ಸಮಯ ಬದಲಾವಣೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.