ಮಣ್ಣು ಮಾಡಲು ಮುಂದಾದ ಅನಾಥ ಶವದ ಗುರುತು ಹಚ್ಚೆಯಿಂದ ಪತ್ತೆ
Team Udayavani, Dec 24, 2021, 6:05 PM IST
ಶ್ರೀರಂಗಪಟ್ಟಣ: ಅನಾಥ ಶವವೆಂದು ಮಣ್ಣು ಮಾಡಲುಪೊಲೀಸರು ನಿರ್ಧರಿಸಿದ್ದ ವೇಳೆ ಮೃತನ ಸಂಬಂಧಿಕರು ಮೃತ ವ್ಯಕ್ತಿಯ ಕೈಮೇಲಿದ್ದ ಹಚ್ಚೆ ಗುರುತು ಪತ್ತೆ ಹಚ್ಚಿ ಶವವನ್ನು ಕೊಂಡೊಯ್ದ ಘಟನೆ ನಡೆದಿದೆ.
ಇಲ್ಲಿನ ಚೆಕ್ ಪೋಸ್ಟ್ ಬಳಿ ಗುರುವಾರ ಅಪರಿಚಿತ ಗಂಡಸಿನ ಶವವೊಂದು ಪತ್ತೆ ಯಾಗಿತ್ತು.ಅನಾರೋಗ್ಯದಿಂದ ವ್ಯಕ್ತಿ ಮೃತಪಟ್ಟಿದ್ದು, ಸಂಜೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ತಂದು ಶವಾಗಾರದಲ್ಲಿರಿಸಿದ್ದರು.
ಮೃತ ವ್ಯಕ್ತಿಯ ಕೈ ಮೇಲಿದ್ದ ಹಚ್ಚೆಯ ಗುರುತುವ್ಯಕ್ತಿಯ ವಿಳಾಸವನ್ನು ಪತ್ತೆ ಮಾಡಿಕೊಟ್ಟಿದ್ದು, ಬೆಳಗೊಳ ಗ್ರಾಮದ ರಾಮೇಗೌಡ(65) ಎಂದು ಗುರುತಿ ಸಲಾಗಿದ್ದು,ಇವರು ಕಳೆದ 15 ದಿನಗಳಿಂದ ಗ್ರಾಮದಿಂದ ನಾಪತ್ತೆಯಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆ.ಆರ್.ಪೇಟೆ: ಮಗಳ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ಶಿಕ್ಷಕ ವಶಕ್ಕೆ
ವಿವಿಧ ಗ್ರಾಪಂ ಉಪಚುನಾವಣೆ: ನಿಷೇಧಾಜ್ಞೆ ಜಾರಿ
ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್: ಸಿಎಂ ಬಸವರಾಜ ಬೊಮ್ಮಾಯಿ
ಮಂಡ್ಯ : ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ ; ಶಿಕ್ಷಕರ ಸಂಘದ ಉಪಾಧ್ಯಕ್ಷ ಪಾರು
ಈ ಶಾಲೆಗೆ ಸೇರಿದರೆ ಮಕ್ಕಳಿಗೆ ಬೆಳ್ಳಿ ನಾಣ್ಯ ಕೊಡುಗೆ: ಹಾಜರಾತಿ ಹೆಚ್ಚಿಸಲು ವಿವಿಧ ಸೌಲಭ್ಯ