Udayavni Special

ಸುಸ್ಥಿರ ಅಭಿವೃದ್ಧಿಯ ಮುಖ್ಯ ಸಾಧನ ಲಿಂಗ ಸಮಾನತೆ

Team Udayavani, Apr 8, 2021, 6:30 AM IST

ಸುಸ್ಥಿರ ಅಭಿವೃದ್ಧಿಯ ಮುಖ್ಯ ಸಾಧನ ಲಿಂಗ ಸಮಾನತೆ

ಬಾಲ್ಯದಿಂದ ಮುಪ್ಪಿನವರೆಗೆ ಕುಟುಂಬದ ಆರೈಕೆಯಲ್ಲಿ ತೊಡಗಿಸಿಕೊಳ್ಳುವ ಮಹಿಳೆಯು ದೇಶದ ಆರ್ಥಿಕ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದ್ದರೂ ಆಕೆಗೆ ಸಮಾನ ಸ್ಥಾನಮಾನದ ಅವಕಾಶ ದೊರೆಯಲು ಇನ್ನೂ 136 ವರ್ಷ ಕಾಯಬೇಕಾಗಬಹುದು ಎಂಬ ವರದಿ ನಮ್ಮ ಪ್ರಗತಿಯ ವೇಗವನ್ನು ಪ್ರತಿಬಿಂಬಿಸುತ್ತದೆ.

ವಿಶ್ವ ಆರ್ಥಿಕ ವೇದಿಕೆಯು ಮಾರ್ಚ್‌ 30ರಂದು ಬಿಡುಗಡೆ ಮಾಡಿರುವ ಜಾಗತಿಕ ಲಿಂಗ ಅಂತರ 2021ರ ವರದಿಯ ಪ್ರಕಾರ ಮಹಿಳೆಯರು ಲಿಂಗ ಸಮಾನತೆಗಾಗಿ ಸರಿಸುಮಾರು ಒಂದೂವರೆ ಶತನಮಾನದಷ್ಟು ಕಾಯಬೇಕಾಗುತ್ತದೆ. ಜಾಗತಿಕ ಲಿಂಗ ಅಂತರ ಸೂಚ್ಯಂಕವು ಆರೋಗ್ಯದ ತುರ್ತುಸ್ಥಿತಿ ಮತ್ತು ಸಂಬಂಧಿತ ಆರ್ಥಿಕ ಕುಸಿತವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಪ್ರಾಥಮಿಕ ಸಾಕ್ಷ್ಯಗಳು ಸೂಚಿಸುತ್ತವೆ.

ಜಾಗತಿಕವಾಗಿ ಸಮಾನತೆಗೆ ಪೂರ್ಣಗೊಂಡ ಸರಾಸರಿ ಅಂತರವು ಶೇ.68ರಷ್ಟಾಗಿದ್ದು, ಇದು 2020ಕ್ಕೆ ಹೋಲಿಸಿದರೆ ಒಂದು ಹೆಜ್ಜೆ ಹಿಂದಿದೆ(ಶೇ. -0.6). 2020ರ ವರದಿಯು ಮುಂದಿನ 99.5 ವರ್ಷಗಳಲ್ಲಿ ಜಾಗತಿಕವಾಗಿ ಲಿಂಗ ಅಂತರವನ್ನು ತೊಡೆದುಹಾಕಬಹುದಾಗಿದೆ ಎಂದು ಉಹಿಸಲಾಗಿತ್ತು. ಆದರೆ ಪ್ರಸ್ತುತ ದರದಲ್ಲಿ ಈ ಅಂತರವನ್ನು ಮುಚ್ಚಲು 135.6 ವರ್ಷಗಳು ಅಂದರೆ ಹೆಚ್ಚುವರಿಯಾಗಿ 36 ವರ್ಷಗಳು ಬೇಕು ಎಂದು ಅಂದಾಜಿಸಲಾಗಿದೆ.

ಜಾಗತಿಕ ಲಿಂಗ ಅಂತರ ಸೂಚ್ಯಂಕ
ಜಾಗತಿಕ ಲಿಂಗ ಅಂತರ ಸೂಚ್ಯಂಕವು ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ, ಶೈಕ್ಷಣಿಕ ಸಾಧನೆ, ಆರೋಗ್ಯ ಮತ್ತು ಬದುಕುಳಿಯುವಿಕೆ ಮತ್ತು ರಾಜಕೀಯ ಸಶಕ್ತೀಕರಣ ಎಂಬ ನಾಲ್ಕು ಪ್ರಮುಖ ಆಯಾಮಗಳಲ್ಲಿ ಲಿಂಗ ಆಧಾರಿತ ಅಂತರಗಳ ವಿಕಾಸವನ್ನು ಮಾನದಂಡವಾಗಿ ಗುರುತಿ ಸುತ್ತದೆ ಮತ್ತು ಕಾಲಾನಂತರದಲ್ಲಿ ಈ ಅಂತರವನ್ನು ಮುಚ್ಚುವ ಪ್ರಗತಿಯನ್ನು ಪತ್ತೆ ಮಾಡುತ್ತದೆ.

ಕೋವಿಡ್‌-19 ಸಾಂಕ್ರಾಮಿಕವು ಮೊದಲೇ ಅಸ್ತಿತ್ವದಲ್ಲಿರುವ ಲಿಂಗ ಅಂತರವನ್ನು ವೃದ್ದಿಸಿ, ಒಳಗೊಳ್ಳುವ ಹಾಗೂ ಸಮೃದ್ಧ ಆರ್ಥಿಕತೆಯ ಬೆಳವಣಿಗೆಯಲ್ಲಿ ಹೊಸ ಅಡೆತಡೆಗಳನ್ನು ಹುಟ್ಟುಹಾಕಿದೆ ಎಂದು ವರದಿಯು ತಿಳಿಸಿದೆ. ಫಿನ್ಲಂಡ್‌, ನಾರ್ವೆ, ನ್ಯೂಜಿಲ್ಯಾಂಡ್‌, ರುವಾಂಡ, ಸ್ವೀಡನ್‌, ಐರ್ಲೆಂಡ್‌ ಮತ್ತು ಸ್ವಿಟ್ಸರ್‌ಲೆಂಡ್‌ ಮೊದಲ ಲಿಂಗ ಸಮಾನ ದೇಶಗಳಾಗಿದ್ದರೆ ಸಿರಿಯಾ, ಪಾಕಿಸ್ಥಾನ, ಇರಾಕ್‌, ಯಮನ್‌ ಮತ್ತು ಅಫ್ಘಾನಿಸ್ಥಾನ ಪಟ್ಟಿಯಲ್ಲಿರುವ ಕೊನೆಯ ಐದು ದೇಶಗಳು.

ಜಾಗತಿಕ ಮಟ್ಟದಲ್ಲಿ ಕುಸಿದ ಭಾರತದ ಸ್ಥಾನ
ವಿಶ್ವ ಆರ್ಥಿಕ ವೇದಿಕೆಯು ಬಿಡುಗಡೆ ಮಾಡಿದ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ 2010ಕ್ಕೆ ಹೋಲಿಸಿದರೆ ಭಾರತವು 28 ಸ್ಥಾನಗಳನ್ನು ಕಳೆದು ಕೊಂಡು 156 ದೇಶಗಳಲ್ಲಿ 140ನೇ ಸ್ಥಾನದಲ್ಲಿದೆ.

ಲಿಂಗ ಸಮಾನತೆಯು ಮೂಲಭೂತ ಮಾನವ ಹಕ್ಕು ಮಾತ್ರವಲ್ಲ, ಶಾಂತಿಯುತ, ಸಮೃದ್ಧ ಮತ್ತು ಸುಸ್ಥಿರ ಜಗತ್ತಿಗೆ ಅಗತ್ಯವಾದ ಅಡಿಪಾಯವಾಗಿದೆ. ಸ್ತ್ರೀ-ಪುರುಷ ಸಮಾನತೆಯ ವಿಚಾರದಲ್ಲಿ ಮುಖ್ಯವಾಗಿ ಆರ್ಥಿಕ ಅವಕಾಶಗಳು, ಆರೋಗ್ಯ, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಜಾಗತಿಕ ಸ್ಥಾನ ಮೇಲೇರುವ ಬದಲು ಕುಸಿಯುತ್ತಾ ಸಾಗಿರುವುದು ಕಳವಳಕಾರಿ.

ರಾಜಕೀಯ ಸಶಕ್ತೀಕರಣದಲ್ಲಿ ಹೆಚ್ಚಿನ ಕುಸಿತ ಸಂಭವಿಸಿದೆ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ ಮಾನದಂಡದಲ್ಲಿಯೂ ಕುಸಿತ ಕಂಡು ಬಂದಿದೆ. ಮಹಿಳಾ ಕಾರ್ಮಿಕ ಬಲ ಶೇ. 24.8ರಿಂದ 22.3ಕ್ಕೆ ಇಳಿಕೆ ಹಾಗೂ ಮಹಿಳೆಯರ ಅಂದಾಜು ಗಳಿಕೆ ಪುರುಷರ ಗಳಿಕೆಯ ಐದನೇ ಒಂದು ಭಾಗಕ್ಕೆ ಇಳಿದಿರುವುದು ಆಘಾತಕಾರಿ ಅಂಶ.

ಇದಕ್ಕೆ ವ್ಯತಿರಿಕ್ತವಾಗಿ ಶೈಕ್ಷಣಿಕವಾಗಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಮಾನತೆಯನ್ನು ಸಾಧಿಸಿದರೂ ಸಾಕ್ಷರತೆಯ ದೃಷ್ಟಿಯಿಂದ ಲಿಂಗ ಅಂತರವು ಮುಂದುವರಿದಿದೆ. ಪುರುಷರಲ್ಲಿ ಶೇ. 17.6 ಅನಕ್ಷರಸ್ಥರಿದ್ದರೆ, ಮಹಿಳೆಯರಲ್ಲಿ ಶೇ. 34.2 ಅನಕ್ಷರಸ್ಥರಿದ್ದಾರೆ. ಭಾರತದಲ್ಲಿ ಮನೆಗಳು, ಕೆಲಸದ ಸ್ಥಳಗಳು ಮತ್ತು ಸಾಮಾಜಿಕ ಸ್ತರಗಳಲ್ಲಿ ಲಿಂಗ ಅಸಮಾನತೆಯನ್ನು ಕಾಣಬಹುದಾಗಿದೆ. 2011ರ ಅಂಕಿ ಅಂಶದ ಪ್ರಕಾರ, ಪರಿಣಾಮಕಾರಿ ಸಾಕ್ಷರತೆಯ ಪ್ರಮಾಣ(ವಯಸ್ಸು 7 ಮತ್ತು ಮೇಲ್ಪಟ್ಟವರು) ಪುರುಷರಲ್ಲಿ ಶೇ. 82.14 ಆಗಿದ್ದರೆ ಮಹಿಳೆಯರಲ್ಲಿ ಶೇ. 65.46 ಆಗಿರುತ್ತದೆ.

ಮುಂದಿನ ಹೆಜ್ಜೆ
“ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವೋ ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮ ಗೊಳ್ಳದ ಹೊರತು ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸುವುದು ಅಸಾಧ್ಯ’ ಎಂದು ಸ್ವಾಮಿ ವಿವೇಕಾನಂದರು ಅಭಿಪ್ರಾಯಪಟ್ಟಿದ್ದರು.
ಅಸುರಕ್ಷಿತ ವಾತಾವರಣವು ಖಂಡಿತವಾಗಿಯೂ ಅವರ ಬೆಳವಣಿಗೆಗೆ ಮತ್ತು ಮುಖ್ಯವಾಗಿ ದೇಶದ ಬೆಳವಣಿಗೆಗೆ ಅವರು ನೀಡಬಹುದಾದ ಕೊಡುಗೆಗೆ ಬಹುದೊಡ್ಡ ಅಡ್ಡಿಯೇ ಹೌದು. ಲಿಂಗ ಸಮಾನತೆಯ ಸಮ ಸಮಾಜವನ್ನು ಸೃಷ್ಟಿಸುವ ವಿಚಾರದಲ್ಲಿ ಸರಕಾರಗಳ ಮೇಲೆ ಎಷ್ಟು ಜವಾಬ್ದಾರಿ ಇದೆಯೋ, ಅಷ್ಟೇ ಜವಾಬ್ದಾರಿ ಸಮಾಜದ ಮೇಲೆಯೂ ಇದೆ ಎನ್ನುವುದನ್ನು ಮನಗಾಣಬೇಕಾಗಿದೆ.

ಒಂದು ಸಲ ಮಹಿಳೆ ಪ್ರಗತಿಪಥದಲ್ಲಿ ಚಲಿಸಲು ಆರಂಭಿಸಿದರೆ ಇಡೀ ಕುಟುಂಬ, ಹಳ್ಳಿ ಮತ್ತು ಸಂಪೂರ್ಣ ದೇಶ ಪ್ರಗತಿಯಾಗುತ್ತದೆ ಎಂಬುದನ್ನು ತ್ರಿಕರಣಪೂರ್ವಕವಾಗಿ ಒಪ್ಪಿಕೊಂಡು ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಬಲಗೊಳಿಸಬೇಕಾಗಿದೆ.

– ಡಾ| ಎ. ಜಯ ಕುಮಾರ ಶೆಟ್ಟಿ , ಉಜಿರೆ

ಟಾಪ್ ನ್ಯೂಸ್

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ

ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ

5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕ ದ್ವಿತೀಯ

5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

“ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌’ ಆ್ಯಪ್‌ನಲ್ಲಿ ಕನ್ನಡ

“ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌’ ಆ್ಯಪ್‌ನಲ್ಲಿ ಕನ್ನಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ

ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಆಲೂರು ರೇವ್‌ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್‌ ಕಾನ್‌ಸ್ಟೆಬಲ್ ಶ್ರೀಲತಾ ಅಮಾನತು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ

ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.