ಶಾಸಕ ಸಂಗಮೇಶ್ ಸದನ ಪ್ರವೇಶಕ್ಕೆ ಮಾರ್ಷಲ್ ಗಳ ತಡೆ: ಸಿದ್ದರಾಮಯ್ಯ ತರಾಟೆ!
ಸಂಗಮೇಶ್ ಪರ ನಿಂತ ಮಾಜಿ ಸಿಎಂ ಸಿದ್ದರಾಮಯ್ಯ
Team Udayavani, Mar 4, 2021, 5:05 PM IST
ಬೆಂಗಳೂರು : ಅಮಾನತ್ತಾಗಿರುವ ಭದ್ರಾವತಿ ಶಾಸಕ ಸಂಗಮೇಶ್ ಸದನಕ್ಕೆ ತೆರಳುತ್ತಿದ್ದ ವೇಳೆ ಮಾರ್ಷಲ್‍ಗಳು ತಡೆದಿರುವ ಘಟನೆ ನಡೆದಿದೆ. ಮಾರ್ಷಲ್ ಗಳು ತಡೆಯುತ್ತಿದ್ದಂತೆ, ಅಮಾನತು ಆದೇಶ ಪ್ರತಿ ತೋರಿಸುವಂತೆ ಸಂಗಮೇಶ್ ಕೇಳಿದ್ದಾರೆ.
ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಎಂಟ್ರಿ ಕೊಟ್ಟು ಸಂಗಮೇಶ್ ರನ್ನು ಸದನದ ಒಳಗೆ ಕರೆದುಕೊಂಡು ಹೋಗಿದ್ದಾರೆ.
ಇದಾದ ನಂತ್ರ ಮಾರ್ಷಲ್ ಗಳ ಮೇಲೆ ಗರಂ ಆದ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದಬ್ಬಾಳಿಕೆ ಮಾಡುತ್ತಿದ್ದೀರಾ ಎಂದು ಅವಾಜ್ ಹಾಕಿದ್ದಾರೆ.
ಈ ವೇಳೆ ಮಾರ್ಷಲ್ ಗಳು ಸಿದ್ದರಾಮಯ್ಯರನ್ನೂ ತಡೆಯಲು ಮುಂದಾದಾಗ ಸರಿಯಯ್ಯಾ ಎಂದು ಅವಾಜ್ ಹಾಕಿ ಸಂಗಮೇಶ್ ರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.