ಅಮೂಲ್ ಹಾಲಿನ ಬೆಲೆ ಪ್ರತಿ ಲೀಟರ್ಗೆ 2 ರೂ. ಏರಿಕೆ: ಆ.17 ರಿಂದ ಪರಿಷ್ಕೃತ ದರ ಜಾರಿ
Team Udayavani, Aug 16, 2022, 7:38 PM IST
ಗಾಂಧಿನಗರ: ಅಮೂಲ್ ಬ್ರ್ಯಾಂಡ್ ಮೂಲಕ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ(ಜಿಸಿಎಂಎಂಎಫ್)ವು ಶಕ್ತಿ ಹಾಲು, ತಾಜಾ ಹಾಲು ಮತ್ತು ಗೋಲ್ಡ್ ಹಾಲಿನ ಪ್ಯಾಕೆಟ್ಗಳ ಬೆಲೆಯನ್ನು ಲೀಟರ್ಗೆ 2 ರೂ. ಏರಿಸಿದ್ದು, ಬುಧವಾರದಿಂದಲೇ ರಾಷ್ಟ್ರಾದ್ಯಂತ ನೂತನ ಬೆಲೆ ಜಾರಿಯಲ್ಲಿರಲಿದೆ.
ಹಾಲಿನ ತಯಾರಕಾ ವೆಚ್ಚ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆ ಬೆಲೆ ಏರಿಕೆ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ.
ಇದರಿಂದಾಗಿ ಅಹಮದಾಬಾದ್ ಮತ್ತು ಸೌರಾಷ್ಟ್ರದಲ್ಲಿ ಅಮೂಲ್ ಗೋಲ್ಡ್ ಹಾಲಿನ ಬೆಲೆ ಅರ್ಧ ಲೀಟರ್ಗೆ 31 ರೂ. ಆದರೆ, ಅರ್ಧ ಲೀಟರ್ ಅಮೂಲ್ ತಾಜಾ ಹಾಲಿಗೆ 25 ರೂ. ಹಾಗೂ ಅಮೂಲ್ ಶಕ್ತಿ ಹಾಲಿಗೆ 28 ರೂ. ಆಗಲಿದೆ.