ಎರಡನೇ ದಿನವೂ ಚುರುಕುಗೊಂಡ ಲಸಿಕೆ ಅಭಿಯಾನ
Team Udayavani, Mar 3, 2021, 6:20 AM IST
ಬೆಂಗಳೂರು: ಕೊರೊನಾ ಲಸಿಕೆ ಅಭಿಯಾನದ ದ್ವಿತೀಯ ಹಂತದ ಎರಡನೇ ದಿನವಾದ ಮಂಗಳವಾರ ರಾಜ್ಯಾದ್ಯಂತ ಲಸಿಕೆ ನೀಡಿಕೆ ಚುರುಕು ಪಡೆದಿದ್ದು, ಒಟ್ಟು 6,313 ಸಾರ್ವಜನಿಕರು ಲಸಿಕೆ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಲಸಿಕೆ ಪಡೆದರು. ಮೊದಲ ದಿನಕ್ಕೆ ಹೋಲಿಸಿದರೆ ಮಂಗಳವಾರ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು, ಮೈಸೂರು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿಯಲ್ಲಿ ತಲಾ ನೂರಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಅತೀ ಕಡಿಮೆ- ಚಾಮರಾಜನಗರ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿಯಲ್ಲಿ ತಲಾ ನೂರಕ್ಕಿಂತಲೂ ಕಡಿಮೆ ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೆಲವೆಡೆ ಎರಡನೇ ದಿನವೂ ಕೋವಿನ್ ಪೋರ್ಟಲ್ ತಾಂತ್ರಿಕ ಸಮಸ್ಯೆ ಮುಂದು ವರಿದಿದೆ. ಆಗಾಗ ಸರ್ವರ್ ಡೌನ್ ಆಗುತ್ತಿದ್ದುದ ರಿಂದ ಫಲಾನುಭವಿಗಳ ಮಾಹಿತಿ ಸೇರ್ಪಡೆಗೆ, ಪರಿಶೀಲನೆಗೆ ಸಮಸ್ಯೆಯಾಗಿದೆ.
ಮನೆಯಲ್ಲೇ ಲಸಿಕೆ ಪಡೆದ ಬಿ.ಸಿ. ಪಾಟೀಲ್
ಕೃಷಿ ಸಚಿವ ಬಿ.ಸಿ. ಪಾಟೀಲ್ ಮಂಗಳವಾರ ಹಿರೇಕೆರೂರಿನ ತಮ್ಮ ಮನೆಯಲ್ಲೇ ಸರಕಾರಿ ವೈದ್ಯರಿಂದ ಲಸಿಕೆ ಪಡೆದಿದ್ದು, ವಿವಾದದ ಸ್ವರೂಪ ಪಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ. ಪಾಟೀಲ್, ಜನರಿಗೆ ತೊಂದರೆ ಕೊಡಬಾರದೆಂದು ಮನೆಯಲ್ಲೇ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್
ಸಿಬಿಎಸ್ಇ ಪರೀಕ್ಷೆ ರದ್ದತಿಯಿಂದ SSLC ಬಗ್ಗೆ ಗೊಂದಲ! ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್
ರಾಹುಲ್ ಗಾಂಧಿ ಸಿಂಹವೋ, ನರಿಯೋ, ಇಲಿಯೋ ಎಂದು ಉಪಚುನಾವಣೆ ಬಳಿಕ ತಿಳಿಯಲಿದೆ: ಈಶ್ವರಪ್ಪ
ಜಗದೀಶ್ ಶೆಟ್ಟರ್ ಗೆ ಮಾತನಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ: ಸತೀಶ್ ಜಾರಕಿಹೊಳಿ
ಚಂದನವನದ ನವದಂಪತಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್’ಗೆ ಕೋವಿಡ್ ಸೋಂಕು ದೃಢ
MUST WATCH
ಹೊಸ ಸೇರ್ಪಡೆ
ಜೂನ್ ತನಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಒತ್ತಡದಲ್ಲಿರಿಸುವುದು ಸರಿಯಲ್ಲ : ಪ್ರಿಯಾಂಕಾ
ಅತಿಕ್ರಮಣದಾರರಿಗೆ ಕಿರುಕುಳ ನೀಡದಿರಿ
ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?
ಪಶ್ಚಿಮ ಬಂಗಾಳದಲ್ಲಿ 70 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ : ಮಮತಾ ಬ್ಯಾನರ್ಜಿ
ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್