Udayavni Special

ರಾಜ್ಯಕ್ಕೆ ನೀರು ಸಿಗದಂತೆ ಮಾಡುವ ಹುನ್ನಾರ


Team Udayavani, Mar 1, 2021, 6:20 AM IST

ರಾಜ್ಯಕ್ಕೆ ನೀರು ಸಿಗದಂತೆ ಮಾಡುವ ಹುನ್ನಾರ

ಕಾವೇರಿ ಕೊಳ್ಳದ ಕರ್ನಾಟಕ ರಾಜ್ಯದ ಯೋಜ ನೆಗಳಿಗೆ ನೀರು ಸಿಗದಂತೆ ಮಾಡುವ ಹುನ್ನಾರದಿಂದಲೇ ತಮಿಳುನಾಡು ಕಾವೇರಿ ನದಿ ಜೋಡಣೆ ಯೋಜನೆಗಳಿಗೆ ಕೈಹಾಕಿದೆ. ತಮಿಳುನಾಡು ರಾಜ್ಯ ಕೈಗೊಂಡಿರುವ ನೀರಾವರಿ ಯೋಜನೆಗಳಿಂದ ಕರ್ನಾಟಕ ರಾಜ್ಯಕ್ಕೆ ಮಾರಕವಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ರಾಜ್ಯದ ಧೋರಣೆ, ಕಿರುಕುಳಗಳು ಶತ ಮಾನದಿಂದ ನಡೆಯುತ್ತಿದ್ದು ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.

ತಮಿಳುನಾಡು ರಾಜ್ಯ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುವುದು ಚರಿತ್ರೆ ಆಗಿ ಬಿಟ್ಟಿದೆ. 1990ರಲ್ಲಿ ನ್ಯಾಯ ಮಂಡಳಿ ರಚಿತವಾಗಿ 2007ರಲ್ಲಿ ನ್ಯಾಯ ಮಂಡ ಳಿಯ ಅಂತಿಮ ತೀರ್ಪು ನೀಡಿದೆ. 2018 ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯ ಮಂಡಳಿಯ ತೀರ್ಪನ್ನು ಮಾರ್ಪಡಿಸಿ ತೀರ್ಪು ನೀಡಿದೆ. ತೀರ್ಪಿನಂತೆ ಕರ್ನಾಟಕ ರಾಜ್ಯ ಸರಕಾರ‌ ತನ್ನ ಪಾಲಿನ ನೀರಿನ ಸಂಗ್ರಹ, ನೀರಾವರಿ, ಕುಡಿಯುವ ನೀರು ಯೋಜನೆಗಳಿಗೆ ಮೇಕೆದಾಟು ಮತ್ತು ಮಾರ್ಕಂಡೇಯ ಯೋಜನೆಗಳನ್ನು ಪ್ರಾರಂಭ ಮಾಡಲು ಯೋಜನೆ ರೂಪಿ ಸಿತ್ತು. ಇದಕ್ಕೆ ತಮಿಳುನಾಡು ಸರಕಾರ‌ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದೆ. ಆದರೆ ತಮಿಳುನಾಡು ರಾಜ್ಯ ಇದೀಗ ತನ್ನ ರಾಜ್ಯದಲ್ಲಿ ಕೇಂದ್ರ ಸರಕಾರ‌ದ ಆರ್ಥಿಕ ನೆರವಿನೊಂದಿಗೆ 14 ಸಾವಿರ ಕೋಟಿ ರೂ. ವೆಚ್ಚದ ನದಿ ಜೋಡಣೆ ಕಾಮಗಾರಿಗೆ ಪ್ರಾರಂಭಿಸುತ್ತಿರುವುದು ಕರ್ನಾಟಕ ಯೋಜನೆಗಳಿಗೆ ನೀರು ಸಿಗದಂತೆ ತಡೆ ಮಾಡುವ ಹುನ್ನಾರ ಆಗಿದೆ.

ಮೇಕೆದಾಟು ಹಾಗೂ ಮಾರ್ಕಂ ಡೇಯ ಯೋಜನೆಗಳಿಗೆ ತಡೆವೊಡ್ಡಿರುವ ತಮಿಳುನಾಡು ಧೋರಣೆಯಿಂದ ಮುಂದಿನ ದಿನಗಳಲ್ಲಿ ನಮ್ಮ ಕಾವೇರಿ ಕೊಳ್ಳದ ಕೃಷಿ ಭೂಮಿಗೆ ನೀರು ಸಿಗದಂ ತಾಗಲಿದೆ. ಅವರ ಯೋಜನೆಗಳಿಗೆ ಯಾವುದೇ ಅಡ್ಡಿ ಇಲ್ಲದೆ ಜಾರಿಗೊಳಿಸುತ್ತಿವೆ. ಇದರಿಂದ ನಮ್ಮ ರಾಜ್ಯದ ನೀರಾವರಿ ಯೋಜನೆ, ಕೃಷಿ ಹಾಗೂ ಕುಡಿ ಯುವ ನೀರಿಗೂ ನದಿ ಜೋಡಣೆಯಿಂದ ದೊಡ್ಡ ಹೊಡೆತ ಬೀಳಲಿದೆ.

ಮೇಕೆದಾಟು ಜಾರಿಗೊಳಿಸಲೇಬೇಕು: ಈ ಎಲ್ಲ ಅಪಾಯಗಳಿಂದ ತಪ್ಪಿಸಿ ಕೊಳ್ಳ ಬೇಕಾದರೆ ರಾಜ್ಯದಲ್ಲಿ ಮೇಕೆದಾಟು ಹಾಗೂ ಮಾರ್ಕಂಡೇಯ ಯೋಜನೆ ಜಾರಿಗೊಳಿಸಬೇಕು. ನಮಗೆ ಸಿಗುವ ಹೆಚ್ಚುವರಿ ನೀರು ಬಳಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ಜಾರಿಗೊಳಿಸಬೇಕು. ಕೆರೆಕಟ್ಟೆ ಗಳನ್ನು ತುಂಬಿಸಲು ಮುಕ್ತ ಅವಕಾಶವಿದೆ. ಇದಕ್ಕೆ ಯಾವುದೇ ಕಾನೂನು ಬರಲ್ಲ. ಹಾಗೆಯೇ, ರಾಜ್ಯದ ಸಂಸತ್‌ ಸದ ಸ್ಯರೂ ಈ ವಿಚಾ ರ ದಲ್ಲಿ ಧ್ವನಿ ಎತ್ತ ಬೇ ಕಾ ಗಿದೆ. ಆಗ ರಾಜ್ಯಕ್ಕೆ ನ್ಯಾಯ ಸಿಗಲಿದೆ.

– ಸುನಂದಜಯರಾಂ, ರೈತ ನಾಯಕಿ

ಟಾಪ್ ನ್ಯೂಸ್

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಮೇಯಲ್ಲಿ ಹೆಚ್ಚು ಕೇಸ್‌!

ಮೇಯಲ್ಲಿ ಹೆಚ್ಚು ಕೇಸ್‌!

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..

ಕೋವಿಡ್ ಮಾರ್ಗಸೂಚಿ: ಪದೇ ಪದೆ ಎಡವುತ್ತಿರುವ ಸರಕಾರ

ಕೋವಿಡ್ ಮಾರ್ಗಸೂಚಿ: ಪದೇ ಪದೆ ಎಡವುತ್ತಿರುವ ಸರಕಾರ

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

ಬದುಕೆಂಬ ದಟ್ಟ ಕಾಡೂ..ಜ್ಞಾನವೆಂಬ ಬೆಳಕೂ..

ಬದುಕೆಂಬ ದಟ್ಟ ಕಾಡೂ..ಜ್ಞಾನವೆಂಬ ಬೆಳಕೂ..

life journey of shashikanth

ಶಶಿಕಾಂತ್‌ ಬತ್ತಳಿಕೆಯಲ್ಲಿ ನೂರಾರು ನೆನಪುಗಳು

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಕೋವಿಡ್‌ ನಿಯಂತ್ರಣ: ಸರಕಾರಕ್ಕೆ  ಸೂಚನೆ

ಕೋವಿಡ್‌ ನಿಯಂತ್ರಣ: ಸರಕಾರಕ್ಕೆ  ಸೂಚನೆ

ಆಮಂತ್ರಣ ಕೊಟ್ಟು ಆಧಾರ್‌ ಪಡೆಯಿರಿ!

ಆಮಂತ್ರಣ ಕೊಟ್ಟು ಆಧಾರ್‌ ಪಡೆಯಿರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.