ಸಾಲ ಮರಳಿಸುವಂತೆ ಕೇಳುವುದರಲ್ಲಿ ತಪ್ಪಿಲ್ಲ


Team Udayavani, Mar 28, 2021, 6:20 AM IST

ಸಾಲ ಮರಳಿಸುವಂತೆ ಕೇಳುವುದರಲ್ಲಿ ತಪ್ಪಿಲ್ಲ

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆ ಗಳಿಗೆ ಸಾಲ ವಸೂಲಾತಿ ಬಲುದೊಡ್ಡ ತಲೆನೋವಿನ ವಿಷಯವಾಗಿದೆ. ಸಾಲ ವಸೂಲಾತಿಗಾಗಿ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಹಲವಾರು ಮಾರ್ಗಗಳನ್ನು ಅನುಸರಿಸುತ್ತವೆ. ಇವು ಗಳಲ್ಲಿ ವಸೂಲಾತಿ ಏಜೆಂಟರ (Reco very agents) ನೇಮಕವೂ ಒಂದು. ಪಾರಂಪರಿಕ ವಿಧಾನಗಳಲ್ಲಿ ಮತ್ತು ನ್ಯಾಯಾಲಯದ ಮೊರೆಹೋದ ಸಂದರ್ಭಗಳಲ್ಲಿ ವಸೂಲಾತಿ ವಿಳಂಬ ವಾಗುವುದರಿಂದ ಕೆಲವು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಏಜೆಂಟರನ್ನು ನೇಮಿ ಸುತ್ತವೆ. ಈ ಏಜೆಂಟರು ಬ್ಯಾಂಕ್‌ನ ಪರವಾಗಿ ಸಾಲಗಾರರಿಂದ ಸಾಲ ಬಾಕಿ ಯನ್ನು ವಸೂಲು ಮಾಡುತ್ತಾರೆ.

ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿಯೂ ವಸೂಲಾತಿ ಏಜೆಂಟರು ಗಳು ಇರುವರಾದರೂ ಇವರ ಬಳಕೆ ತೀರಾ ಕಡಿಮೆಯಾಗಿದ್ದು ಎಲ್ಲ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕವಷ್ಟೇ ಇವರು ಸಾಲ ವಸೂ ಲಾತಿಗೆ ಮುಂದಾಗುತ್ತಾರೆ. ಆದರೆ ಖಾಸಗಿ ಬ್ಯಾಂಕ್‌ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ವಸೂಲಾತಿ ಏಜೆಂಟರುಗಳನ್ನು ಸಾಲ ವಸೂಲಾತಿಗೆ ಬಳಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಸಾಲ ಬಾಕಿದಾರರ ವಿಚಾರದಲ್ಲಿ ಖಾಸಗಿ ಸಂಸ್ಥೆಗಳು ತುಸು ನಿರ್ದಾಕ್ಷಿಣ್ಯ ಧೋರಣೆ ಅನುಸರಿಸುವುದರಿಂದ ಏಜೆಂಟರುಗಳ ಪಾತ್ರ ಬಲು ಮಹತ್ವದ್ದಾಗಿರುತ್ತದೆ. ಆದರೆ ವಸೂಲಾತಿ ಏಜೆಂಟರರ ವರ್ತನೆ, ದಾಷ್ಟ್ಯತನದ ಬಗೆಗೆ ಪದೇ ಪದೆ ದೂರುಗಳು ಕೇಳಿಬರುತ್ತಿರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಏಜೆಂಟ ರರು ಅತಿರೇಕದ ವರ್ತನೆ ತೋರುವುದು ನಿಜವಾದರೂ ಬಹುತೇಕ ಪ್ರಕರಣಗಳಲ್ಲಿ ಅವರು ತಮ್ಮನ್ನು ಕೆಲಸಕ್ಕೆ ನೇಮಿಸಿಕೊಂಡ ಸಂಸ್ಥೆಗಳು ತಮಗೆ ವಹಿಸಿದ ಕರ್ತವ್ಯವನ್ನು ನಿಭಾಯಿಸುತ್ತಿರುತ್ತಾರೆ ಅಷ್ಟೆ.

ಇತ್ತೀಚೆಗೆ ಒಂದು ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ಒಂದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ 6.21 ಲಕ್ಷ ರೂ. ವಾಹನ ಸಾಲ ಪಡೆದಿದ್ದ. ಆತ ನಾಲ್ಕು ವರ್ಷಗಳ ಕಾಲ ಪ್ರತೀ ತಿಂಗಳು 17,800 ರೂ. ಇಎಂಐ ಪಾವತಿಸಬೇಕಾಗಿತ್ತು. ಮರುಪಾವತಿ ಸರಿಯಾಗಿ ಮಾಡದಿದ್ದಾಗ ವಸೂಲಿ ಏಜೆಂಟರು ಪದೇ ಪದೆ ಫೋನಾಯಿಸಿ ಮರುಪಾವತಿಗೆ ಒತ್ತಾಯಿಸಿದರೆಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದನು.

ಅವನ ಆತ್ಮಹತ್ಯೆಗೆ ವಸೂಲಿ ಏಜೆಂಟರ ಒತ್ತಡ ಮತ್ತು ಪ್ರಚೋದನೆಯೇ ಕಾರಣ ಎಂದು ಆರೋಪಿಸಿ, ಐಪಿಸಿ ಸೆಕ್ಷನ್‌ 306ರ ಅಡಿಯಲ್ಲಿ ಎಫ್ಐಆರ್‌ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಹಣಕಾಸು ಸಂಸ್ಥೆ ನೀಡಿದ ಸಾಲವನ್ನು ವಸೂಲು ಮಾಡಿಕೊಳ್ಳಲು ಸಂಸ್ಥೆಯಿಂದ ನೇಮಕಗೊಂಡ ಸಿಬಂದಿ ಮುಂದಾಗಿದ್ದನು. ಇಲ್ಲಿ ಹಣಕಾಸು ಸಂಸ್ಥೆಯ ಸಿಬಂದಿ ತನಗೆ ನಿರ್ದೇಶಿಸಿದ ಕರ್ತವ್ಯ ಮಾಡಿದ್ದಾನೆಯೇ ವಿನಾ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎನ್ನಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಸಾಲ ಬಾಕಿ ಇರಿಸಿಕೊಂಡಿರುವ ಸಾಲಗಾರನ ಬಳಿ ಸಾಲ ಮರು ಪಾವತಿಸುವಂತೆ ಕೇಳುವುದನ್ನು ಆತ್ಮ ಹತ್ಯೆಗೆ ಪ್ರಚೋದನೆ ಎನ್ನುವುದು ಸರಿಯಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ. ಸಾಲಗಾರನು ಬಾಕಿದಾರ ನಾಗಿದ್ದು, ಸಂಸ್ಥೆಯ ಸಾಲ ಮರು ಪಾವತಿಗೆ ಕೇಳಿರುವುದು ಕ್ರಮಬದ್ಧ ವಾಗಿದೆ ಎಂದೂ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಹಲ್ಲೆ ನಡೆಸುವಂತಿಲ್ಲ
ಸಾಲ ವಸೂಲಾತಿ ಪ್ರಕ್ರಿಯೆಯು ಹಲವು ಕಟ್ಟುಪಾಡು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಸಾಲ ವಸೂಲಾತಿ ಸಂದರ್ಭದಲ್ಲಿ ಏಜೆಂಟರು ಮೀಟರ್‌ ಬಡ್ಡಿ ವಸೂಲಿದಾರರ ಮಾರ್ಗವನ್ನು ಅನುಸರಿಸುವಂತಿಲ್ಲ. ಸಾಲ ವಸೂಲಾತಿಗೆ ಹೋದಾಗ ಸಾಲಗಾರರ ಮೇಲೆ ದೈಹಿಕ ಹಲ್ಲೆ ನಡೆಸುವಂತಿಲ್ಲ. ಮೂರನೇ ವ್ಯಕ್ತಿಯ ಎದುರು ಅವರ ಗೌರವಕ್ಕೆ ಕುಂದು ಬರುವಂತೆ ನಡೆದುಕೊಳ್ಳುವ ಹಾಗಿಲ್ಲ.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.