ತಾತ್ಕಾಲಿಕ ಸಂಸತ್ಗೆ ಚುನಾವಣೆ : ಜಗತ್ತಿನ 26 ದೇಶಗಳಲ್ಲಿರುವ ಟಿಬೆಟಿಯನ್ನರಿಂದ ಮತದಾನ
Team Udayavani, Apr 11, 2021, 7:35 PM IST
ಧರ್ಮಶಾಲಾ: ಧರ್ಮಶಾಲಾ ಮೂಲದ ತಾತ್ಕಾಲಿಕ ಸಂಸತ್ಗೆ ನಡೆದ ಸಾರ್ವತ್ರಿಕ ಚುನಾವಣೆಯ ಅಂತಿಮ ಹಂತದಲ್ಲಿ ಭಾರತ ಸೇರಿದಂತೆ ಜಗತ್ತಿನ 26 ದೇಶಗಳಲ್ಲಿರುವ ಟಿಬೆಟಿಯನ್ನರು ಭಾನುವಾರ ಹಕ್ಕು ಚಲಾವಣೆ ಮಾಡಿದ್ದಾರೆ. ಮುಂದಿನ
ಸಿಕ್ಯಾಂಗ್(ಅಧ್ಯಕ್ಷ)ರನ್ನು ಹಾಗೂ ಸೆಂಟ್ರಲ್ ಟಿಬೆಟನ್ ಅಡ್ಮಿನಿಸ್ಟ್ರೇಷನ್(ಸಿಟಿಎ)ನ 45 ಸದಸ್ಯರನ್ನು ಚುನಾಯಿಸುವ ನಿಟ್ಟಿನಲ್ಲಿ ಈ ಮತದಾನ ನಡೆದಿದೆ.
ಮೇ 14ರಂದು ಟಿಬೆಟ್ನ ತಾತ್ಕಾಲಿಕ ಸಂಸತ್ ತಮ್ಮ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸುಮಾರು 1.3 ಲಕ್ಷ ಟಿಬೆಟಿಯನ್ನರಿದ್ದಾರೆ. ಅಧ್ಯಕ್ಷರ ಹುದ್ದೆಗೆ ಪೆಂಪಾ ಸೆರಿಂಗ್ ಮತ್ತು ಔಕಾತ್ಸಂಗ್ ಕೆಲ್ಸಾಂಗ್ ಡಾರ್ಜೀ ನಡುವೆ ಪ್ರಬಲ ಪೈಪೋಟಿಯಿದೆ.
ಇದನ್ನೂ ಓದಿ :ಕೂಚ್ ಬೆಹಾರ್ ಹಿಂಸಾಚಾರಕ್ಕೆ ದೀದಿ ಕಾರಣ : ಕೇಂದ್ರ ಸಚಿವ ಅಮಿತ್ ಶಾ