
ನಾಳೆ June 1: ನಾಳೆಯಿಂದ ಏನೇನು ಬದಲಾವಣೆ?
Team Udayavani, May 31, 2023, 7:34 AM IST

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿ
ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಿ ಮೇ 21ರಂದೇ ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಜೂ.1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದುಬಾರಿಯಾಗಲಿವೆ. ಇವುಗಳ ಬೆಲೆಯಲ್ಲಿ ಹೆಚ್ಚುವರಿ 25 ಸಾವಿರ ರೂ.ಗಳಿಂದ 30 ಸಾವಿರ ರೂ.ವರೆಗೆ ಹೆಚ್ಚಳವಾಗಲಿದೆ.
100 ದಿನ, 100 ಪಾವತಿ
ವಾರಸುದಾರರಿಲ್ಲದ ಠೇವಣಿ ಮೊತ್ತವನ್ನು ಸೂಕ್ತ ವಾರಸುದಾರರಿಗೆ ಪಾವತಿಸುವ ನಿಟ್ಟಿನಲ್ಲಿ ಪ್ರತೀ ಜಿಲ್ಲೆಯ ಪ್ರತಿ ಬ್ಯಾಂಕ್‌ಗಳು ಜೂ.1ರಿಂದಲೇ “100 ದಿನಗಳು, 100 ಪಾವತಿ’ ಎಂಬ ಅಭಿಯಾನ ಆರಂಭಿಸಲಿವೆ. ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮಾಡದೇ ಉಳಿದಿರುವ ಠೇವಣಿಯ ಮೊತ್ತವನ್ನು ಸೂಕ್ತ ವಾರಸುದಾರರನ್ನು ಪತ್ತೆಹಚ್ಚಿ, ಪಾವತಿಸಲಾಗುತ್ತದೆ.
ಕಫ್ ಸಿರಪ್ ಪರೀಕ್ಷೆ
ಇನ್ನು ಮುಂದೆ ಕೆಮ್ಮಿನ ಔಷಧ ತಯಾರಿಸುವ ಎಲ್ಲ ಕಂಪೆನಿಗಳೂ ಔಷಧ ರಫ್ತು ಮಾಡುವ ಮುನ್ನ ಅವುಗಳನ್ನು ಪರೀಕ್ಷಿಸಬೇಕಾದ್ದು ಕಡ್ಡಾಯ. ಜೂ.1ರಿಂದಲೇ ಈ ನಿಯಮ ಜಾರಿಯಾಗಲಿದೆ. ಸರಕಾರಿ ಪ್ರಯೋಗಾಲಯದಲ್ಲಿ ಕಫ್ ಸಿರಪ್ ಪರೀಕ್ಷೆಗೊಳಗಾದ ಅನಂತರವೇ ರಫ್ತಿಗೆ ಅನುಮತಿ ಸಿಗಲಿದೆ.
ಎಲ್‌ಪಿಜಿ ಬೆಲೆ ಪರಿಷ್ಕರಣೆ
ಪ್ರತೀ ತಿಂಗಳ ಆರಂಭದಂದು ಎಲ್‌ಪಿಜಿ ಬೆಲೆ ಪರಿಷ್ಕರಣೆಯಾಗುತ್ತದೆ. ಅದರಂತೆ ಜೂನ್ 1ರಂದು ಬೆಲೆ ಹೆಚ್ಚಳವಾಗಲೂಬಹುದು, ಕಡಿಮೆಯಾಗಲೂಬಹುದು. ಎಪ್ರಿಲ್ ಮತ್ತು ಮೇ ತಿಂಗಳ ಆರಂಭದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿತ್ತು. ಅದೇ ರೀತಿ, ಸಿಎನ್‌ಜಿ- ಪಿಎನ್‌ಜಿ ಬೆಲೆಯೂ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
