ಯುಎಇ: ಉದ್ಯಮ ಸ್ಥಾಪನೆ, ಹೂಡಿಕೆ ನಿಯಮದಲ್ಲಿ ಸಡಿಲಿಕೆ
Team Udayavani, Nov 23, 2020, 9:49 PM IST
ದುಬೈ: ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಸುಧಾರಣ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಪ್ರಸ್ತುತ ವಿದೇಶೀ ಒಡೆತನದ ಕಂಪೆನಿಗಳ ನಿಯಂತ್ರಣಕ್ಕಿರುವ ಹಲವು ಕಾನೂನುಗಳನ್ನು ಸಡಿಲಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ಸೋಮವಾರ ವರದಿ ಮಾಡಿದೆ. ತನ್ನ ಜಾಗತಿಕ ವರ್ಚಸ್ಸು ವೃದ್ಧಿಸಲು ಮತ್ತು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಯುಎಇ ಈ ನಿರ್ಧಾರ ತೆಗೆದುಕೊಂಡಿದೆ.
ಸಡಿಲಿಕೆ ನಿರ್ಧಾರಗಳ ಪೈಕಿ, ಸ್ಥಳೀಯ ಪಾಲುದಾರರನ್ನು ಸೇರಿಸಿಕೊಳ್ಳದೆ ಉದ್ಯಮ ಸ್ಥಾಪನೆ ಮತ್ತು ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು ಪ್ರಮುಖವಾದುದಾಗಿದೆ.
ಇದುವರೆಗೆ ಯುಎಇಯಲ್ಲಿ ಅಲ್ಲಿನ ನಾಗರಿಕರನ್ನು ಪಾಲುದಾರರನ್ನಾಗಿ ಹೊಂದಿದ್ದರೆ ಮಾತ್ರ ಉದ್ಯಮ ಸ್ಥಾಪನೆಗೆ ಅವಕಾಶ ಇತ್ತು. ಇದುವರೆಗೆ ಮುಕ್ತ ವಲಯಗಳಿಂದ ಹೊರಗೆ ವಿದೇಶೀಯರು ಶೇ. 49ರಷ್ಟು ಮಾತ್ರ ಹೂಡಿಕೆ ಮಾಡಲು ಅವಕಾಶವಿತ್ತು. ಇದನ್ನೂ ಸಡಿಲಿಸಲಾಗಿದೆ. ಆಡಳಿತ ಮಂಡಳಿಗಳಲ್ಲಿ ಎಮಿರೇಟ್ಸ್ ನಾಗರಿಕರು ಹೆಚ್ಚು ಸಂಖ್ಯೆಯಲ್ಲಿ ಸದಸ್ಯರಾಗಿರಬೇಕು ಎಂಬ ನಿಯಮವನ್ನೂ ಕೈಬಿಡಲಾಗಿದೆ.
ಇದನ್ನೂ ಓದಿ:ಚುನಾವಣೆಯಲ್ಲಿ ಒವೈಸಿಗೆ ನೀಡುವ ಪ್ರತಿ ಮತವೂ ಭಾರತ ವಿರೋಧಿ ಮತವಾಗಿರಲಿದೆ : ತೇಜಸ್ವಿ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444