ಉಡುಪಿ ಜಿಲ್ಲೆಯಲ್ಲಿ 72 ಮಂದಿಯಲ್ಲಿ ಕೋವಿಡ್ ಸೋಂಕು ದೃಢ
Team Udayavani, Jul 14, 2020, 6:25 PM IST
ಉಡುಪಿ ; ಜಿಲ್ಲೆಯಲ್ಲಿ ಇಂದು 72 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ, ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1733ಕ್ಕೆ ಏರಿಕೆಯಾಗಿದೆ .
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ಗುಣಮುಖರಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಿದೆ ಎನ್ನಲಾಗಿದೆ.
ಇಂದು ದೃಢ ಪಟ್ಟಿರುವ ಪ್ರಕರಣಗಳಲ್ಲಿ ಉಡುಪಿಯಲ್ಲಿ 16, ಕುಂದಾಪುರದಲ್ಲಿ 41 ಮಂದಿ, ಹಾಗೂ ಕಾರ್ಕಳದಲ್ಲಿ 15 ಮಂದಿ ಸೇರಿದ್ದಾರೆ.
ಜಿಲ್ಲೆಯಲ್ಲಿ ಇಂದು 40 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 1360 ಮಂದಿ ಗುಣಮುಖರಾಗಿದ್ದು 370 ಸಕ್ರೀಯ ಪ್ರಕರಣಗಳು ಇವೆ.