ಉಡುಪಿ ಜಿಲ್ಲೆಯಲ್ಲಿ 421 ಮಂದಿಗೆ ಕೋವಿಡ್ ಸೋಂಕು ದೃಢ !
Team Udayavani, Aug 18, 2020, 7:08 PM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 421 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. 1,200 ವರದಿಗಳು ನೆಗೆಟಿವ್ ಬಂದಿದೆ. ಉಡುಪಿ ತಾಲೂಕಿನ 203, ಕುಂದಾಪುರದ 158, ಕಾರ್ಕಳದ 50, ಇತರ ಜಿಲ್ಲೆಯ 10 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ರೋಗಲಕ್ಷಣ ಇರುವ 101 ಪುರುಷರು, 41 ಮಹಿಳೆಯರು ಸೋಂಕುಲಕ್ಷಣ ಇಲ್ಲದ 123 ಪುರುಷರು, 156 ಮಂದಿ ಮಹಿಳೆಯರು ಸೇರಿದ್ದಾರೆ.
ಕೋವಿಡ್ ಕೇರ್ ಸೆಂಟರ್ ಹಾಗೂ ಇತರ ಆಸ್ಪತ್ರೆಗಳಲ್ಲಿ 126 ಮಂದಿ ಹಾಗೂ 295 ಮಂದಿ ಹೋಂ ಐಸೋಲೇಷನ್ಗೆ ದಾಖಲಾಗಿದ್ದಾರೆ.
1,837 ಮಾದರಿ ಸಂಗ್ರಹ
ಸೋಂಕು ಲಕ್ಷಣವುಳ್ಳ 1098, ಸೋಂಕಿತರ ಸಂಪರ್ಕವುಳ್ಳ 327, ಸುಸ್ತು ಸಹಿತ ಇತರ ಕಾರಣಗಳಿರುವ 58, ಹಾಟ್ಸ್ಪಾಟ್ ಸಂಪರ್ಕದ 354 ಸಹಿತ ಒಟ್ಟು 1,837 ಮಂದಿ ಮಾದರಿ ಸಂಗ್ರಹಿಸಲಾಗಿದೆ. ಆಸ್ಪತ್ರೆಯಿಂದ 177 ಹಾಗೂ ಹೋಂ ಐಸೋಲೇಷನ್ನಲ್ಲಿದ್ದ 144 ಮಂದಿ ಸಹಿತ ಒಟ್ಟು 321 ಮಂದಿ ಬಿಡುಗಡೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ