
ಉದ್ಯಾವರ : ಅಪರಿಚಿತ ವಾಹನ ಢಿಕ್ಕಿ : ವ್ಯಕ್ತಿ ಗಂಭೀರ
Team Udayavani, Mar 30, 2023, 5:21 AM IST

ಕಾಪು : ರಾ.ಹೆ. 66ರ ಉದ್ಯಾವರ ಟೊಯೋಟಾ ಶೋ ರೂಂ ಬಳಿ ಅಪರಿಚಿತ ವಾಹನ ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಮಾ. 28ರಂದು ರಾತ್ರಿ ನಡೆದಿದೆ.
ಉಡುಪಿಯಿಂದ ಬಂದು ಉದ್ಯಾವರದಲ್ಲಿ ಬಸ್‌ನಿಂದ ಇಳಿದು ಹೆದ್ದಾರಿ ಬಳಿ ನಿಂತುಕೊಂಡಿದ್ದಾಗ ಉದ್ಯಾವರ ನಿವಾಸಿ ಸುಂದರ ಕಾಮತ್ (58) ಅವರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ.
ವಾಹನ ಢಿಕ್ಕಿ ಹೊಡೆದ ಪರಿಣಾಮಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಸುಂದರ ಕಾಮತ್ ಅವರನ್ನು ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
