Udayavni Special

ಕೋಮುದ್ವೇಷಕ್ಕೆ ಕಾರಣವಾದ ವಿಡಿಯೋ ವೈರಲ್‌ : ಟ್ವಿಟರ್‌ ಎಂಡಿಗೆ ಪೊಲೀಸರಿಂದ ಸಮನ್ಸ್‌!

7 ದಿನಗಳ ಒಳಗಾಗಿ ಹಾಜರಾಗಿ ಹೇಳಿಕೆ ನೀಡಿ

Team Udayavani, Jun 18, 2021, 7:44 PM IST

ಕೋಮುದ್ವೇಷಕ್ಕೆ ಕಾರಣವಾದ ವಿಡಿಯೋ ವೈರಲ್‌ : ಟ್ವಿಟರ್‌ ಎಂಡಿಗೆ ಪೊಲೀಸರಿಂದ ಸಮನ್ಸ್‌!

ಘಾಜಿಯಾಬಾದ್‌ (ಉತ್ತರಪ್ರದೇಶ): ಕೆಲವು ದಿನಗಳ ಹಿಂದೆ ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ಕೋಮುಸಂಘರ್ಷ ಎಂದು ಬಿಂಬಿಸಲಾದ ಘಟನೆಯೊಂದು ನಡೆದಿತ್ತು. ಅದು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಪ್ರಚಾರ ಪಡೆದುಕೊಂಡಿತ್ತು. ಈ ಸಂಬಂಧ ಘಾಜಿಯಾಬಾದ್‌ ಪೊಲೀಸರು, ಟ್ವಿಟರ್‌ನ ಭಾರತೀಯ ಎಂಡಿ ಮನೀಷ್‌ ಮಹೇಶ್ವರಿಗೆ ಸಮನ್ಸ್‌ ನೀಡಿದ್ದಾರೆ!

ಸಮನ್ಸ್‌ ಸ್ವೀಕರಿಸಿದ 7 ದಿನಗಳ ಒಳಗಾಗಿ ಲೋನಿ ಪೊಲೀಸ್‌ ಠಾಣೆಗೆ ಆಗಮಿಸಿ, ಹೇಳಿಕೆ ನೀಡಬೇಕು ಎಂದು ತಿಳಿಸಿದ್ದಾರೆ. ಇದೇ ಘಟನೆಯಲ್ಲಿ ಕೆಲವು ಪತ್ರಕರ್ತರು, ಕಾಂಗ್ರೆಸ್‌ ನಾಯಕರು, ಟ್ವಿಟರ್‌ ಇಂಕ್‌ ಮತ್ತು ಟ್ವಿಟರ್‌ ಕಮ್ಯುನಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಗಿದ್ದೇನು?: ಘಾಜಿಯಾಬಾದ್‌ನ ಅಬ್ದುಲ್‌ ಸಮದ್‌ ಸೈಫಿ ಎಂಬಾತ, ತನ್ನನ್ನು ವ್ಯಕ್ತಿಯೊಬ್ಬರು ಸುತ್ತಾಡಿಸುತ್ತೇವೆಂದು ಹೇಳಿ ಆಟೋದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶವೊಂದಕ್ಕೆ ಒಯ್ದು, ಜೈಶ್ರೀರಾಮ್‌ ಎನ್ನಲು ಒತ್ತಾಯಿಸಿದರು. ಅದಕ್ಕೆ ಒಪ್ಪದಿದ್ದಾಗ ತನ್ನ ಮೇಲೆ ಹಲ್ಲೆ ಮಾಡಿದರು ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದೆ.

ಈ ಹಿನ್ನೆಲೆಯಲ್ಲಿ, ಕೆಲವು ಪತ್ರಕರ್ತರು ಹಾಗೂ ಟ್ವಿಟರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮನ್ಸ್‌ ಜಾರಿ ಮಾಡಲಾಗಿದೆ.

ಇದನ್ನೂ ಓದಿ :ಯುಪಿ: ಹತ್ರಾಸ್ ಗೆ ತೆರಳುವ ವೇಳೆ ಬಂಧಿಸಲ್ಪಟ್ಟ ಕೇರಳ ಪತ್ರಕರ್ತ ಸಿದ್ಧಿಖ್ ತಾಯಿ ವಿಧಿವಶ

ಇದರ ಬಗ್ಗೆ ಪೊಲೀಸರು ಬೇರೆಯೇ ವಿವರಣೆ ನೀಡಿದ್ದಾರೆ. “ಹಲ್ಲೆ ಮಾಡಿದ್ದು ಆತ ಜೈಶ್ರೀರಾಮ್‌ ಎನ್ನಲಿಲ್ಲ ಎಂಬ ಕಾರಣಕ್ಕಲ್ಲ. ಹಲ್ಲೆಗೊಳಗಾದ ವ್ಯಕ್ತಿ ನೀಡಿದ್ದ ತಾಯಿತವೊಂದು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಹಲ್ಲೆಗಾರರಿಗೆ ಅನಿಸಿದ್ದರಿಂದ ಹಾಗಾಗಿದೆ. ಕೋಮುದಳ್ಳುರಿಗೆ ಕಾರಣವಾಗುವ ಇಂತಹ ವಿಡಿಯೊವನ್ನು ಟ್ವಿಟರ್‌ ವೈರಲ್‌ ಆಗಲು ಬಿಟ್ಟಿದೆ. ಇದು ಜನರ ನಡುವೆ ದ್ವೇಷವನ್ನು ಹಬ್ಬಿಸುತ್ತದೆ ಎಂದು ಪರಿಗಣಿಸಿಯೇ ಇಲ್ಲ’ ಎಂದು ಪೊಲೀಸರು ಆರೋಪಿಸಿದ್ದಾರೆ.

ಟಾಪ್ ನ್ಯೂಸ್

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

iiu

ಬಿಗ್ ಬಾಸ್ ಮನೆಯಲ್ಲಿ ಬೆತ್ತಲೆ ಯೋಗ ಮಾಡಲು ಆಫರ್

ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳೀನ್ ಕುಮಾರ್ ಕಟೀಲು

ಕಾಸರಗೋಡಿಗೆ ಸರ್ಕಾರಿ,  ಖಾಸಗಿ ಬಸ್ ಸಂಚಾರವಿಲ್ಲ:  ನಳೀನ್ ಕುಮಾರ್ ಕಟೀಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

erte’

ಪ್ರತಿಪಕ್ಷದವರು ರೌಡಿಗಳಂತೆ ವರ್ತಿಸಿದ್ದಾರೆ : ಸಿಎಂ ಪ್ರಮೋದ್ ಸಾವಂತ್

jail

ಮಧ್ಯಪ್ರದೇಶ : ಕಾರಾಗೃಹದ ಗೋಡೆ ಕುಸಿದು 22 ಕೈದಿಗಳಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಜನರಿಗೆ NDRF ಮೇಲೆ ಗೌರವ ಇದೆ, ಆದರೆ ಪೊಲೀಸ್ ಇಲಾಖೆ ಮೇಲೆ ಯಾಕಿಲ್ಲ? ಮೋದಿ

ಜನರಿಗೆ NDRF ಮೇಲೆ ಗೌರವ ಇದೆ, ಆದರೆ ಪೊಲೀಸ್ ಇಲಾಖೆ ಮೇಲೆ ಯಾಕಿಲ್ಲ? ಮೋದಿ

ಪುಲ್ವಾಮಾ ಭಯೋತ್ಪಾದಕ ದಾಳಿ ರೂವಾರಿ; ಜೈಶ್ ಉಗ್ರ ಸೈಫುಲ್ಲಾ ಎನ್ ಕೌಂಟರ್ ನಲ್ಲಿ ಹತ್ಯೆ

ಪುಲ್ವಾಮಾ ಭಯೋತ್ಪಾದಕ ದಾಳಿ ರೂವಾರಿ; ಜೈಶ್ ಉಗ್ರ ಸೈಫುಲ್ಲಾ ಎನ್ ಕೌಂಟರ್ ನಲ್ಲಿ ಹತ್ಯೆ

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್

rreewrre

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಕ್ಕೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದ ಸಿಎಂ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.