ಒಮಿಕ್ರಾನ್: ಅಮೆರಿಕಾದಲ್ಲಿ ರೂಪಾಂತರಿ ಮೊದಲ ಪ್ರಕರಣ ವರದಿ
Team Udayavani, Dec 2, 2021, 12:08 PM IST
ಸ್ಯಾನ್ ಫ್ರಾನ್ಸಿಸ್ಕೋ: ಕೋವಿಡ್ ವೈರಸ್ನ ಹೊಸ ರೂಪಾಂತರಿಯ ಒಮಿಕ್ರಾನ್ ಮೊದಲ ಪ್ರಕರಣ ಅಮೆರಿಕಾದಲ್ಲಿ ಬುಧವಾರ ದಾಖಲಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕ್ಯಾಲಿಫೋರ್ನಿಯಾಗೆ ಹಿಂದಿರುಗಿದ ಲಸಿಕೆ ಹಾಕಿದ ಪ್ರಯಾಣಿಕನಲ್ಲಿ ಓಮಿಕ್ರಾನ್ ರೂಪಾಂತರದ ವೈರಸ್ ಪತ್ತೆಯಾಗಿದೆ.
ಅಮೆರಿಕಾದ ಅಗ್ರ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಶ್ವೇತಭವನದಲ್ಲಿ ಸಂಶೋಧನೆಯ ವರದಿಯನ್ನು ಘೋಷಿಸಿದ್ದಾರೆ.
ಸೋಂಕಿತ ವ್ಯಕ್ತಿಯನ್ನು ನವೆಂಬರ್ 22 ರಂದು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಪ್ರಯಾಣಿಕ ಎಂದು ಗುರುತಿಸಲಾಗಿದ್ದು, ರೋಗಲಕ್ಷಣಗಳು ಕಂಡು ಬಂದ ಬಳಿಕ ಸೋಮವಾರ ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮಂಗಳವಾರ ಸಂಜೆ ರೋಗಿಯಿಂದ ಮಾದರಿಯನ್ನು ಪಡೆದು ರಾತ್ರಿಯಿಡಿ ಸಂಶೋಧನೆ ಮಾಡಿ ಓಮಿಕ್ರಾನ್ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸೋಂಕಿತ ವ್ಯಕ್ತಿ ಈಗಾಗಲೇ ಮಾಡರ್ನಾ ಲಸಿಕೆಯ ಪೂರ್ಣ ಎರಡು ಡೋಸ್ಗಳನ್ನು ಪಡೆದಿದ್ದು, ಬೂಸ್ಟರ್ ಶಾಟ್ ಪಡೆಯಬೇಕಾಗಿತ್ತು. ವ್ಯಕ್ತಿ ಸುಧಾರಿಸುತ್ತಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?