
‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು:ಸಿ.ಟಿ.ರವಿ
Team Udayavani, Jan 21, 2022, 2:37 PM IST

ಚಿಕ್ಕಮಗಳೂರು : ಯೂಸ್ ಅಂಡ್ ಥ್ರೋ ಪಾಲಿಟಿಕ್ಸ್ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರ ಪರ್ರಿಕರ್ ಕುಟುಂಬವನ್ನು ಬಿಜೆಪಿ ಯೂಸ್ ಅಂಡ್ ಥ್ರೋ ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗೀಂದ್ರ ಯಾದವ್, ಪ್ರಶಾಂತ್ ಭೂಷಣ್, ಕುಮಾರ್ ವಿಶ್ವಾಸ್ ಅವರೆಲ್ಲಾ ಯೂಸ್ ಅಂಡ್ ಥ್ರೋನಾ ಎಂದು ಪ್ರಶ್ನಿಸಿದರು.
ಮನೋಹರ್ ಪರ್ರಿಕರ್ ಬದುಕಿದ್ದಾಗ ಆಮ್ ಆದ್ಮಿ ಪಾರ್ಟಿಯವರು ಅಪಮಾನ ಮಾಡಿದರು. ಯೋಗೀಂದ್ರ ಯಾದವ್, ಪ್ರಶಾಂತ್ ಭೂಷಣ್, ಕುಮಾರ್ ವಿಶ್ವಾಸ್ ನೋಡಿದಾಗ ಕೇಜ್ರಿವಾಲ್‍ಗೆ ಆ ಪದದ ಅರ್ಥ ಗೊತ್ತಾಗಿದೆ ಎಂದರು.
ಅವರಿಗೆ ಅಧಿಕಾರ ಇಲ್ಲದಾಗ ಯಾರಿದ್ದರು, ಈಗ ಯಾರಿದ್ದಾರೆ. ಅದನ್ನ ನೋಡಿದಾಗ ಯೂಸ್ ಅಂಡ್ ಥ್ರೋ ಪಾಲಿಟಿಕ್ಸ್ ಗೊತ್ತಾಗುತ್ತದೆ. ಪರ್ರಿಕರ್ ಅವರಿಗೆ ನಾವು ಎಲ್ಲಾ ಗೌರವ ನೀಡಿದ್ದೇವೆ, ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದಾರೆ. ಗೋವಾ ಬಿಜೆಪಿ ಬೆಳವಣಿಗೆಯಲ್ಲಿ ಪರ್ರಿಕರ್ ಪಾತ್ರ ಬಹಳ ದೊಡ್ಡದಿದೆ, ಅವರನ್ನ ಎತ್ತರದ ಸ್ಥಾನದಲ್ಲೇ ಇಡುತ್ತೇವೆ, ಅವರ ಮಗ ನಮ್ಮ ಕಾರ್ಯಕರ್ತ, ನಾವು ಅವರನ್ನ ಸಂಬಾಳಿಸುತ್ತೇವೆ ನಮಗೆ ಗೊತ್ತಿದೆ ಎಂದರು.
ಟಾಪ್ ನ್ಯೂಸ್
