ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ
Team Udayavani, Mar 1, 2021, 10:20 PM IST
ನವದೆಹಲಿ: ಕಾಂಗ್ರೆಸ್ ನಾಯಕತ್ವದ ಕೂಗೆತ್ತಿರುವ ಜಿ-23 ತಂಡದಲ್ಲಿ ತಾವಿಲ್ಲವೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಫೆ. 27ರಂದು ಇದೇ ತಂಡದ ಸದಸ್ಯರು, ಕಾಶ್ಮೀರದಲ್ಲಿ ಸಮಾವೇಶ ನಡೆಸಿದ್ದಾರೆ. ಇದಕ್ಕೆ ಮೊಯ್ಲಿ ಗೈರಾಗಿದ್ದರು. ಈ ಬಗ್ಗೆ ಪಿಟಿಐ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ತಾವು ಜಿ-23 ಗುಂಪಿನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರಲ್ಲದೆ, ರಾಹುಲ್ ಅವರೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿಂದಿರುಗಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೂಂದೆಡೆ, ಜಿ-23ಯ ಮತ್ತೂಬ್ಬ ಸದಸ್ಯ ಆನಂದ್ ಶರ್ಮಾ ಅವರು ಪಶ್ಚಿಮ ಬಂಗಾಳ ಚುನಾವಣೆಗಾಗಿ ಕಾಂಗ್ರೆಸ್ ಹೆಣೆಯುತ್ತಿರುವ ಕಾರ್ಯತಂತ್ರ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲಿ, ಎಡಪಕ್ಷಗಳೊಂದಿಗೆ ಕೈ ಜೋಡಿಸಿರುವುದು ಕಾಂಗ್ರೆಸ್‌ನ ಮೂಲ ಪರಿಕಲ್ಪನೆಯನ್ನೇ ಅಲುಗಾಡಿಸಲಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ: ಪ್ರಧಾನಿ ನರೇಂದ್ರ ಮೋದಿ
4 ದಿನಗಳಲ್ಲಿ 12 ಉಗ್ರರ ಸಂಹಾರ; ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ
ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ
ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’
ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್