ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ : 20 ಜಿಲೆಟಿನ್ ಕಡ್ಡಿಗಳು ವಶ
Team Udayavani, Feb 25, 2021, 10:18 PM IST
ನವದೆಹಲಿ: ಮುಂಬೈನಲ್ಲಿರುವ ಏಷ್ಯಾದ ಅತಿ ಶ್ರೀಮಂತ ಉದ್ಯಮಿಯೆಂದೇ ಖ್ಯಾತಿ ಪಡೆದಿರುವ ಮುಕೇಶ್ ಅಂಬಾನಿಯವರ ನಿವಾಸ “ಆ್ಯಂಟಿಲಿಯಾ’ದ ಸಮೀಪದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ವಾಹನವೊಂದು ಪತ್ತೆಯಾಗಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ.
ನಿವಾಸಕ್ಕೆ ತೀರಾ ಹತ್ತಿರದಲ್ಲಿರುವ ಕಾರ್ಮಿಚೆಲ್ ರಸ್ತೆಯಲ್ಲಿ ಈ ವಾಹನ ಗುರುವಾರ ಸಂಜೆಯ ಹೊತ್ತಿಗೆ ಬಂದು ನಿಂತಿದ್ದು, ತುಂಬಾ ಹೊತ್ತಾದರೂ ಅಲ್ಲಿಂದ ಕದಲಲಿಲ್ಲ. ಇದನ್ನು ಗಮನಿಸಿದ ಆ್ಯಂಟಿಲಿಯಾದ ಗಾರ್ಡ್‌ಗಳು ಪೊಲೀಸರಿಗೆ ಸುದ್ದಿ ತಿಳಿಸಿದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳಗಳನ್ನು ಕರೆಯಿಸಿ ತಪಾಸಣೆ ನಡೆಸಿ, ವಾಹನದಲ್ಲಿದ್ದ 20 ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ಪಡೆದುಕೊಂಡರು. ಅವುಗಳನ್ನು ಮುಂಬೈನಲ್ಲಿರುವ ಪ್ರಯೋಗಾಲಯಕ್ಕೆ ತಪಾಸಣೆಗಾಗಿ ಕಳುಹಿಸಲಾಯಿತು. ಸ್ಥಳಕ್ಕೆ ಉಗ್ರ ನಿಗ್ರಹ ದಳ (ಎಟಿಎಸ್) ಹಿರಿಯ ಅಧಿಕಾರಿಗಳೂ ಆಗಮಿಸಿದರು.
ಇದನ್ನೂ ಓದಿ:ಐಸ್ ಕ್ರೀಮ್ ಸೇವಿಸಿ ಮಗ,ಸಹೋದರಿ ಸಾವು:ನೈಜ ಕಾರಣ ಗೊತ್ತಿದ್ರೂ ತಾಯಿ ಸುಮ್ಮನಿದ್ದಿದ್ದೇಕೆ ?
ಆನಂತರ, ಆ್ಯಂಟಿಲಿಯಾ ನಿವಾಸದ ಕಡೆಗೆ ಹೋಗುವ ಎಲ್ಲಾ ಮಾರ್ಗಗಳನ್ನೂ ಮುಚ್ಚಲಾಗಿದ್ದು, ನಿವಾಸದ ಸುತ್ತಲಿನ ಪ್ರಾಂತ್ಯದಲ್ಲಿ ತೀವ್ರ ಶೋಧ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಅಗತ್ಯಬಿದ್ದರೆ ಮುಕೇಶ್ ಕುಟುಂಬ ಸದಸ್ಯರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ
ನಿರ್ಬಂಧಗಳ ಬಿಸಿ ಕೈಗಾರಿಕೆಗೆ ತಟ್ಟದಿರಲಿ: ಸಿಇಒಗಳ ಮನವಿ
ಕ್ವಾರಂಟೈನ್ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ
ವಿರಾಟ್ ನೌಕೆಯನ್ನು ಗುಜರಿಗೆ ಹಾಕದಂತೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ
ದೇಶೀಯ ವಿಮಾನಗಳಲ್ಲಿ ಲಂಚ್ಗೆ “ಬ್ರೇಕ್’! ಕೇಂದ್ರ ಸರ್ಕಾರ ಸೂಚನೆ