ಹಿರಿಯ ನಟಿ ತಾರಾ ಅವರ ತಾಯಿ ಟಿ. ಪುಷ್ಪಾ ನಿಧನ
Team Udayavani, Apr 27, 2022, 7:45 PM IST
ತಾಯಿ ಪುಷ್ಪಾ ಅವರ ಜತೆ ಚಲನಚಿತ್ರ ನಟಿ ತಾರಾ
ಮೈಸೂರು:ಚಲನಚಿತ್ರ ನಟಿ ತಾರಾ ಅವರ ಜತೆ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ತಾರಾ ಅವರ ತಾಯಿ ಟಿ. ಪುಷ್ಪಾ (76) ಶೂಟಿಂಗ್ ವೇಳೆ ನಿಧನ ಹೊಂದಿದ್ದಾರೆ.
ತೀವ್ರವಾಗಿ ವಾಂತಿಯಾದ ಹಿನ್ನೆಲೆ ತಕ್ಷಣ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧಾ ಅವರ ತಾಯಿ ಪುಷ್ಪಾ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸೇರಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.