ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪೃಥ್ವಿ ಶಾ ಶತಕ; ಮುಂಬಯಿಗೆ ಸುಲಭ ಜಯ


Team Udayavani, Feb 21, 2021, 11:35 PM IST

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪೃಥ್ವಿ ಶಾ ಶತಕ; ಮುಂಬಯಿಗೆ ಸುಲಭ ಜಯ

ಜೈಪುರ: ಬಿಗಿಯಾದ ಬೌಲಿಂಗ್‌ ಹಾಗೂ ಆರಂಭಕಾರ ಪೃಥ್ವಿ ಶಾ ಅವರ ಶತಕ ಸಾಹಸದಿಂದ ಈ ಬಾರಿಯ “ವಿಜಯ್‌ ಹಜಾರೆ ಟ್ರೋಫಿ’ ಕೂಟ ವನ್ನು ಮುಂಬಯಿ ಗೆಲುವಿನೊಂದಿಗೆ ಆರಂಭಿಸಿದೆ. ರವಿವಾರ ಜೈಪುರದಲ್ಲಿ ನಡೆದ ದಿಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬಯಿ 7 ವಿಕೆಟ್‌ಗಳ ಸುಲಭ ಜಯ ಗಳಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ದಿಲ್ಲಿಗೆ 50 ಓವರ್‌ಗಳಲ್ಲಿ ಗಳಿಸಲು ಸಾಧ್ಯವಾದದ್ದು 7ಕ್ಕೆ 211 ರನ್‌ ಮಾತ್ರ. ಮುಂಬಯಿ ಕೇವಲ 31.5 ಓವರ್‌ಗಳಲ್ಲಿ 3 ವಿಕೆಟಿಗೆ 216 ರನ್‌ ಹೊಡೆದು ಗೆದ್ದು ಬಂದಿತು. ಪೃಥ್ವಿ ಶಾ 89 ಎಸೆತಗಳಿಂದ ಅಜೇಯ 105 ರನ್‌ (15 ಬೌಂಡರಿ, 2 ಸಿಕ್ಸರ್‌), ಭಾರತದ ಟಿ20 ತಂಡಕ್ಕೆ ಆಯ್ಕೆಯಾದ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಿಂದ 50 ರನ್‌ (6 ಬೌಂಡರಿ, 2 ಸಿಕ್ಸರ್‌), ನಾಯಕ ಶ್ರೇಯಸ್‌ ಅಯ್ಯರ್‌ 39 ರನ್‌ ಹೊಡೆದರು.

ದಿಲ್ಲಿ ಆರಂಭ ಅತ್ಯಂತ ಶೋಚನೀಯವಾಗಿತ್ತು. ಆರಂಭಿಕರಾದ ಶಿಖರ್‌ ಧವನ್‌ ಮತ್ತು ಅನುಜ್‌ ರಾವತ್‌ ಖಾತೆ ತೆರೆಯದೆ ರನೌಟ್‌ ಆದರು. 32 ರನ್‌ ಆಗುವಷ್ಟರಲ್ಲಿ 6 ವಿಕೆಟ್‌ ಹಾರಿ ಹೋಯಿತು. ಆದರೆ ವನ್‌ಡೌನ್‌ ಬ್ಯಾಟ್ಸ್‌ಮನ್‌ ಹಿಮ್ಮತ್‌ ಸಿಂಗ್‌ ಅಜೇಯ 106 ರನ್‌ ಬಾರಿಸಿದ್ದರಿಂದ (145 ಎಸೆತ, 6 ಬೌಂಡರಿ, 2 ಸಿಕ್ಸರ್‌) ತಂಡದ ಮೊತ್ತ ಇನ್ನೂರರ ಗಡಿ ದಾಟಿತು. ಕೆಳ ಕ್ರಮಾಂಕದಲ್ಲಿ ಶಿವಾಂಕ್‌ ವಶಿಷ್ಠ 55 ರನ್‌ ಮಾಡಿ ಹಿಮ್ಮತ್‌ ಸಾಹಸದಲ್ಲಿ ಕೈ ಜೋಡಿಸಿದರು.

ಮುಂಬಯಿ ಪರ ಧವಳ್‌ ಕುಲಕರ್ಣಿ 3, ಶಮ್ಸ್‌ ಮುಲಾನಿ 2 ವಿಕೆಟ್‌ ಕಿತ್ತರು.

ಉಳಿದ ಪಂದ್ಯಗಳ ಫ‌ಲಿತಾಂಶ
– ಜಮ್ಮು ಕಾಶ್ಮೀರ ವಿರುದ್ಧ ಸೌರಾಷ್ಟ್ರಕ್ಕೆ 3 ವಿಕೆಟ್‌ ಜಯ
– ಸರ್ವೀಸಸ್‌ ವಿರುದ್ಧ ಬಂಗಾಲಕ್ಕೆ 70 ರನ್‌ ಜಯ
– ಹರ್ಯಾಣ ವಿರುದ್ಧ ಚಂಡೀಗಢಕ್ಕೆ 3 ವಿಕೆಟ್‌ ಜಯ
– ಹಿಮಾಚಲ ವಿರುದ್ಧ ಮಹಾರಾಷ್ಟ್ರಕ್ಕೆ 59 ರನ್‌ ಜಯ
– ಪುದುಚೆರಿ ವಿರುದ್ಧ ರಾಜಸ್ಥಾನಕ್ಕೆ 6 ವಿಕೆಟ್‌ ಜಯ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.