ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ
Team Udayavani, Oct 26, 2020, 7:01 PM IST
ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಸಾಲದಲ್ಲಿ 3,600 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದ್ದು, 11 ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಮಲ್ಯ ಮತ್ತು ಯುಬಿಎಚ್ಎಲ್ನಿಂದ ಮತ್ತಷ್ಟು ಮೊತ್ತ ವಸೂಲಿ ಮಾಡಬೇಕಿದೆ ಎಂದು ಬ್ಯಾಂಕುಗಳ ಒಕ್ಕೂಟವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟಗಿ ಸುಪ್ರೀಂಗೆ ಮಾಹಿತಿ ನೀಡಿದ್ದಾರೆ.
ಬಾಕಿ ಉಳಿದ ಸಾಲವನ್ನು ಕಿಂಗ್ಫಿಶರ್ ಲಿ. ಆಸ್ತಿ ಜಪ್ತಿ ಮೂಲಕ ಪಡೆಯುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಯುಬಿಎಚ್ಎಲ್ ಅರ್ಜಿಯನ್ನು ಸುಪ್ರೀಂ ಸೋಮವಾರ ವಜಾಗೊಳಿಸಿದೆ. ಆಸ್ತಿ ಜಪ್ತಿಗೆ ಅವಕಾಶ ನೀಡಬಾರದು ಎಂದು ಮಲ್ಯ ಒಡೆತನದ ಯುಬಿಎಚ್ಎಲ್ ಸುಪ್ರೀಂನ ಮೆಟ್ಟಿಲೇರಿತ್ತು. ನ್ಯಾಯಮೂರ್ತಿ ಯುಬಿಗ್ರೂಪ್ನ ಮನವಿ ತಿರಸ್ಕರಿಸಿದ್ದಾರೆ.
ಅರ್ಜಿ ವಿಚಾರಣೆ ವೇಳೆ ರೋಹಟಗಿ “ಜಾರಿ ನಿರ್ದೇಶನಾಲಯಕ್ಕಿಂತ (ಇಡಿ) ಬ್ಯಾಂಕುಗಳು ಮೊದಲು ಮಲ್ಯ ಆಸ್ತಿ ಜಪ್ತಿ ಮೇಲೆ ಹಕ್ಕು ಹೊಂದಿವೆ’ ಎಂದು ವಾದಿಸಿದರು. ಯುಬಿಎಚ್ಎಲ್ ಪರ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ