31ನೇ ಜಿಲ್ಲೆಯಾಗಿ ವಿಜಯನಗರ : ವಿಜಯನಗರಕ್ಕೆ 6, ಬಳ್ಳಾರಿಗೆ 5 ತಾಲೂಕು


Team Udayavani, Nov 28, 2020, 6:30 AM IST

31ನೇ ಜಿಲ್ಲೆಯಾಗಿ ವಿಜಯನಗರ : ವಿಜಯನಗರಕ್ಕೆ 6, ಬಳ್ಳಾರಿಗೆ 5 ತಾಲೂಕು

ಗಣಿನಾಡು ಬಳ್ಳಾರಿ ಜಿಲ್ಲೆ ವಿಭಜಿಸಿ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಕಳೆದ ವಾರವಷ್ಟೇ ತಾತ್ವಿಕ ಒಪ್ಪಿಗೆ ನೀಡಿದ್ದ ರಾಜ್ಯ ಸರಕಾರ, ಶುಕ್ರವಾರ ವಿರೋಧದ ನಡುವೆಯೂ ಅನುಮೋದನೆ ನೀಡುವ ಮೂಲಕ ರಾಜ್ಯದ 31ನೇ ಜಿಲ್ಲೆಗೆ ಅ ಧಿಕೃತ ಮುದ್ರೆ ಒತ್ತಿದೆ. ಗಣಿನಾಡು ಬಳ್ಳಾರಿ ಜಿಲ್ಲೆ ವಿಭಜನೆಗೆ ಬಳ್ಳಾರಿಯಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಗಡಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ 24,45,351 ಎಕರೆ ವಿಸ್ತೀರ್ಣವನ್ನು ಹೊಂದಿದೆ. 11 ತಾಲೂಕು ಹಾಗೂ 10 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ವಿಸ್ತೀರ್ಣವೇ ಇಂದು ಜಿಲ್ಲೆ ವಿಭಜನೆಗೆ ಪ್ರಮುಖ ಕಾರಣವಾಗಿದೆ.

ನೂತನ ವಿಜಯನಗರ ಜಿಲ್ಲೆ
ನೂತನ ವಿಜಯನಗರ ಜಿಲ್ಲೆಗೆ ಹೊಸಪೇಟೆಯೇ ಜಿಲ್ಲಾ ಕೇಂದ್ರ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಹಂಪಿ, ಸಮೀಪದ ಕಮಲಾಪುರ ಬಳಿ ನೂತನವಾಗಿ ನಿರ್ಮಾಣವಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನ, ಏಷ್ಯಾದಲ್ಲೇ ಅತೀ ದೊಡ್ಡ ಕರಡಿಧಾಮ ಬರಲಿವೆ. ವಿಜಯನಗರ ಜಿಲ್ಲಾ ಕೇಂದ್ರಕ್ಕೆ ರಾಷ್ಟ್ರೀಯ ಹೆದ್ದಾರಿ 63 ಮತ್ತು 50 ರಸ್ತೆಗಳು ಹಾದು ಹೋಗಿದ್ದು, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ರೈಲು ಮಾರ್ಗ, ಕೇವಲ 30 ಕಿಮೀ ದೂರದಲ್ಲಿ ಜಿಂದಾಲ್‌ ವಿಮಾನ ನಿಲ್ದಾಣ ಹೊಂದಿದ್ದು, ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ.

 ಕೊಟ್ಟೂರು ತಾಲೂಕು
ಬ್ರಿಟಿಷರ ಆಡಳಿತಾವ ಧಿಯಲ್ಲಿ ಕೊಟ್ಟೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಕೊಟ್ಟೂರಿನ ಲ್ಲಿ ನ, ಜಗದ್ಗುರು ಮರುಳಾರಾಧ್ಯರು ಸ್ಥಾಪಿಸಿದ ಉಜ್ಜಯಿನಿ ಸದ್ಧರ್ಮ ಪೀಠ ವೀರಶೈವ ಪಂಚಪೀಠಗಳಲ್ಲಿ ಪ್ರಮುಖವಾಗಿದೆ. ಇಲ್ಲಿನ ಕೊಟ್ಟೂರೇಶ್ವರ ದೇವಸ್ಥಾನ ಮತ್ತೂಂದು ಧಾರ್ಮಿಕ ಕ್ಷೇತ್ರವಾಗಿದೆ. ಕನ್ನಡ ಮೊದಲ ಗದ್ಯ ಕೃತಿ ಬರೆದ ಶಿವಕೋಟಾಚಾರ್ಯ ಕೊಟ್ಟೂರಿನ ಕೋಗಳಿಯವರು.

 ಕೂಡ್ಲಿಗಿ ತಾಲೂಕು
ಅವಿಭಜಿತ ಬಳ್ಳಾರಿಯಲ್ಲಿ ಕೂಡ್ಲಿಗಿ ಎರಡನೇ ಅತೀದೊಡ್ಡ ತಾಲೂಕಾಗಿತ್ತು. ಅತೀಹೆಚ್ಚು ಮಳೆಯಾಶ್ರಿತ ಪ್ರದೇಶವನ್ನು ಹೊಂದಿದೆ. ತಾಲೂಕು ಕೇಂದ್ರದಲ್ಲಿ ಗಾಂ ಧೀಜಿಯವರ ಚಿತಾಭಸ್ಮ ಪ್ರಮುಖ ಆಕರ್ಷಣೆಯಾಗಿದೆ. ಗುಡೇ ಕೋಟೆಯಲ್ಲಿ ಕರಡಿ ಧಾಮವಿದೆ.

 ಹಗರಿಬೊಮ್ಮನಹಳ್ಳಿ
ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರವು ಪ್ರಮುಖ ವಾಣಿಜ್ಯ ಕೇಂದ್ರ. ವಿಜಯನಗರ ಕಾಲದಲ್ಲಿ ಇಲ್ಲಿನ ಮೋರಿಗೇರಿ ಗ್ರಾಮ ದಲ್ಲಿ ಎಲ್ಲ ನಾಣ್ಯಗಳನ್ನು ಇಲ್ಲಿಂದಲೇ ಮಾಡಿಕೊಡಲಾಗುತ್ತಿತ್ತು. ತಾಲೂಕಿನ ಕೋಗಳಿ ದೇವಸ್ಥಾನಗಳು ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದ್ದು, ಪ್ರಮುಖ ಪ್ರವಾಸಿ ತಾಣವಾಗಿದೆ.

 ಹಡಗಲಿ ತಾಲೂಕು
ಅವಿಭಜಿತ ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಹೂವಿನ ಹಡಗಲಿ ತಾಲೂಕು 144 ಕಿಮೀ ದೂರದಲ್ಲಿದೆ. ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಶಿಲ್ಪಕಲಾ ವೈಭವ ಹೊಂದಿರುವ ಕಲ್ಲೇಶ್ವರ ದೇವಸ್ಥಾನವಿದ್ದು, ಚಕಣಾಚಾರ್ಯ ಕೆತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಹೊಳಲು ಗ್ರಾಮದ ಅನಂತಶಯನ ದೇವಸ್ಥಾನವನ್ನು ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದ್ದು, ಧಾರ್ಮಿಕವಾಗಿ ಪ್ರಸಿದ್ಧಿ ಪಡೆದಿದೆ. ಇನ್ನು ತುಂಗಭದ್ರಾ ನದಿ ದಡದಲ್ಲಿರುವ ಮೈಲಾರ ಲಿಂಗೇಶ್ವರ ದೇವಸ್ಥಾನ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.

 ಹರಪನಹಳ್ಳಿ ತಾಲೂಕು
ಹರಪನಹಳ್ಳಿ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಚಾಲುಕ್ಯರ ಶೆ„ಲಿಯ ನೀಲಗುಂದ ಭೀಮೇಶ್ವರ ದೇವಾಲಯ, ಬಾಗಳಿಯ ಕಲ್ಲೇಶ್ವರ ದೇವಾಲಯಗಳು ಶಿಲ್ಪಕಲಾ ವೈಭವದಿಂದ ಪ್ರಸಿದ್ಧಿ ಪಡೆದಿವೆ. ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನವು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಹೆಚ್ಚು ಶೆ„ಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ಬೀಚಿ ಎಂದೇ ಖ್ಯಾತರಾದ ರಾಯಸಂ ಭೀಮಸೇನರಾವ್‌ ಅವರು ಹರಪನಹಳ್ಳಿಯಲ್ಲಿ ಜನಿಸಿದವರು.

ವಿಭಜಿತ ಬಳ್ಳಾರಿ ಜಿಲ್ಲೆ
ಅತ್ಯಂತ ಹೇರಳವಾಗಿ ನೈಸರ್ಗಿಕ ಸಂಪತ್ತು ಹೊಂದಿರುವ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿನ ತಾಲೂಕುಗಳು ಭಾಗಶಃ ನೀರಾವರಿ ಪ್ರದೇಶ ಹೊಂದಿವೆ.

 ಬಳ್ಳಾರಿ ತಾಲೂಕು
ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ವಿಶ್ವದ ಎರಡನೇ ಏಕಶಿಲಾ ಬೆಟ್ಟ ಎಂದು ಹೇಳಲಾಗುತ್ತಿರುವ ಬಳ್ಳಾರಿ ಬೆಟ್ಟ ನಗರದ ಹೃದಯ ಭಾಗದಲ್ಲಿದ್ದು ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದಲ್ಲಿ ಪ್ರಮುಖ ಪ್ರವಾಸಿ ತಾಣವಾಗಲಿದೆ. ಬಳ್ಳಾರಿಯ ಕೋಟೆ ಮಲ್ಲೇಶ್ವರ, ಕನಕ ದುರ್ಗಮ್ಮ ಪ್ರಮುಖ ದೇವಸ್ಥಾನಗಳಾಗಿವೆ. ಬಳ್ಳಾರಿ ತಾಲೂಕು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶವನ್ನು ಸಹ ಹೊಂದಿದೆ. ಅಲ್ಪ ಪ್ರಮಾಣದಲ್ಲಿ ಗಣಿಗಾರಿಕೆಯೂ ತಾಲೂಕು ವ್ಯಾಪ್ತಿಯಲ್ಲಿ ಬರಲಿದೆ.

 ಸಂಡೂರು ತಾಲೂಕು
ಸಂಡೂರು ತಾಲೂಕನ್ನು ದಕ್ಷಿಣದ ಸಸ್ಯಕಾಶಿ ಎಂದೇ ಕರೆಯಲಾಗುತ್ತದೆ. ಅತ್ಯಂತ ಹೇರಳವಾಗಿ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಇಲ್ಲಿನ ಬೆಟ್ಟಗಳಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಸಂಪತ್ತು ಹೊಂದಿದ್ದು, ಇಲ್ಲಿ ಔಷ ಧೀಯ ಸಸ್ಯಗಳನ್ನು ಬೆಳೆಯಲಾಗುತ್ತದೆ. ಕುಮಾರಸ್ವಾಮಿ ದೇವಸ್ಥಾನ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ನಾರೀಹಳ್ಳಿ ಜಲಾಶಯ ಆಕರ್ಷಣೀಯ ಸ್ಥಳವಾಗಿದ್ದು, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಹಾತ್ಮಾಗಾಂ ಧೀಜಿಯವರೇ ಮನಸೋತು ಸೀ ಸೆಪ್ಟೆಂಬರ್‌ ಇನ್‌ ಸಂಡೂರು’ ಎಂದು ಹೇಳಿದ್ದಾರೆ. ಏಷ್ಯಾದಲ್ಲೇ ಅತಿದೊಡ್ಡ ಜಿಂದಾಲ್‌ ಕಾರ್ಖಾನೆ, ವಿದ್ಯುತ್‌ ಉತ್ಪಾದಿಸುವ ಬಳ್ಳಾರಿ ಥರ್ಮಲ್‌ ಪವರ್‌ ಸ್ಟೇಷನ್‌ ಸಂಡೂರು ತಾಲೂಕಿನಲ್ಲಿದೆ.

 ಸಿರುಗುಪ್ಪ ತಾಲೂಕು
ಸಿರುಗುಪ್ಪ ತಾಲೂಕು ಜಿಲ್ಲೆಯಲ್ಲೇ ಅತಿಹೆಚ್ಚು ನೀರಾವರಿ ಪ್ರದೇಶವನ್ನು ಹೊಂದಿದೆ. ತಾಲೂಕಿನ ಕೆಂಚನಗುಡ್ಡ ಬಳಿಯ ತುಂಗಭದ್ರಾ ನದಿ ಜನಾಕರ್ಷಣೆ ಹೊಂದಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಕೊರತೆ ಎದುರಿಸುತ್ತಿದೆ. ಹೆಚ್ಚಾಗಿ ಭತ್ತ ಬೆಳೆಯುತ್ತಿರುವುದರಿಂದ ಅಕ್ಕಿ ಗಿರಣಿಗಳ ಸಂಖ್ಯೆಯೂ ಹೆಚ್ಚಾಗಿದೆ.nಕುರುಗೋಡು ತಾಲೂಕು ಕುರುಗೋಡು ನೀರಾವರಿ ಪ್ರದೇಶವಾಗಿದೆ. ಭತ್ತ, ಮೆಣಸಿನಕಾಯಿಯ ಜತೆಗೆ ಅಂಜೂರ, ದಾಳಿಂಬೆ, ಪಪ್ಪಾಯಿ ಪ್ರಮುಖ ತೋಟಗಾರಿಕೆ ಬೆಳೆಗಳಾಗಿವೆ. ಇಲ್ಲಿ ವಿಜಯನಗರ ಕಾಲದ ದೊಡ್ಡ ಬಸವೇಶ್ವರ ದೇವಸ್ಥಾನ ಪ್ರಮುಖ ಧಾರ್ಮಿಕ ಸ್ಥಳವಾಗಿದೆ.

 ಕಂಪ್ಲಿ ತಾಲೂಕು
ಕಂಪ್ಲಿ ತಾಲೂಕು ತುಂಗಭದ್ರಾ ನದಿ ದಡದಲ್ಲಿದೆ. ನೀರಾವರಿ ಸೌಲಭ್ಯ ಹೊಂದಿರುವ ಈ ತಾಲೂಕು ಕೃಷಿಯಿಂದ ಸಂಪದ್ಭರಿತವಾಗಿದೆ. ಬಾಳೆ ಹಣ್ಣು ಪ್ರಮುಖ ತೋಟಗಾರಿಕೆ ಬೆಳೆಯಾಗಿದ್ದರೆ, ಭತ್ತ ಪ್ರಮುಖ ಬೆಳೆಯಾಗಿದೆ. ಕಂಪ್ಲಿಯು ಸಹ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಕಂಪ್ಲಿ ಕೋಟೆಯನ್ನು ಹೊಂದಿದೆ. 3 ಜಿಪಂ, 9 ತಾ.ಪಂ. ಕ್ಷೇತ್ರಗಳು, 10 ಗ್ರಾ.ಪಂ., 1 ಪುರಸಭೆ ಇಲ್ಲಿವೆ.

ವಿಜಯನಗರಕ್ಕೆ ಸಿಂಗ್‌ ಕಿಂಗ್‌!
ಅವಿಭಜಿತ ಬಳ್ಳಾರಿ ಜಿಲ್ಲೆ 10 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ಇನ್ನು ಬಳ್ಳಾರಿ ಲೋಕಸಭೆ ಕ್ಷೇತ್ರ ಎರಡೂ ಜಿಲ್ಲೆಗಳ ವ್ಯಾಪ್ತಿ ಹೊಂದಲಿದೆ. ಈಗ ನೂತನ ವಿಜಯನಗರ ವ್ಯಾಪ್ತಿಗೆ ಬರುವ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 2 ಸಾಮಾನ್ಯ, 2 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಹೊಸಪೇಟೆ, ಹರಪನಹಳ್ಳಿ ಹಾಗೂ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಹೂವಿನ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಈ ಮೊದಲು ಬಳ್ಳಾರಿ ರೆಡ್ಡಿ ಸಹೋದರರ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಆನಂದ್‌ಸಿಂಗ್‌, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಿಂದ ರಾಜಕೀಯವಾಗಿ ಮತ್ತಷ್ಟು ಬಲಿಷ್ಠವಾಗಲಿದ್ದಾರೆ. ರೆಡ್ಡಿಗಳ ಕಪಿಮುಷ್ಠಿಯಿಂದ ಸಂಪೂರ್ಣವಾಗಿ ಮುಕ್ತರಾಗಲಿದ್ದಾರೆ. ಜತೆಗೆ ರಾಜಕೀಯವಾಗಿ ಸಾಕಷ್ಟು ಪಳಗಿರುವ ಆನಂದ್‌ಸಿಂಗ್‌, ವಿಜಯನಗರ ಜಿಲ್ಲೆಯ ಮೇಲೆ ಸಂಪೂರ್ಣ ಹಿಡಿತ ಸಾ ಧಿಸುವ ಸಾಧ್ಯತೆಯಿದೆ. ಹೊಸಪೇಟೆ ವಿಧಾನಸಭಾ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಸಾ ಧಿಸಿರುವ ಸಿಂಗ್‌, ಎದುರಾಳಿ ಪಕ್ಷಗಳಿಗೆ ಅಭ್ಯರ್ಥಿಗಳು ಸಿಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ಗೆ ಹೋಗಿ ವಾಪಸ್‌ ಬಿಜೆಪಿಗೆ ಬರುವ ಮೂಲಕ ಇದ್ದ ಒಬ್ಬ ಪ್ರತಿಸ್ಪಧಿ ìಗೂ ಅತಂತ್ರ ಪರಿಸ್ಥಿತಿಯನ್ನು ತಂದೊಡ್ಡಿದ್ದಾರೆ. ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲೆಯ ಇನ್ನುಳಿದ ಐದು ಕ್ಷೇತ್ರಗಳಲ್ಲೂ ತನ್ನದೇ ಆದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಶ್ರೀರಾಮುಲು ಕೈಮೇಲಾಗುತ್ತಾ ?
ವಿಭಜಿತ ಬಳ್ಳಾರಿ ಜಿಲ್ಲೆ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಪರಿಶಿಷ್ಟ ಪಂಗಡಕ್ಕೆ, ಒಂದು ಸಾಮಾನ್ಯಕ್ಕೆ ಮೀಸಲಾಗಿದೆ. ಬಳ್ಳಾರಿ ಗ್ರಾಮೀಣ, ಕಂಪ್ಲಿ ಹಾಗೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಬಳ್ಳಾರಿ ನಗರ ಮತ್ತು ಸಿರುಗುಪ್ಪ ಕ್ಷೇತ್ರಗಳು ಬಿಜೆಪಿ ಶಾಸಕರನ್ನು ಹೊಂದಿ ವೆ. ಆರಂಭದಿಂದಲೂ ಬಳ್ಳಾರಿಯಲ್ಲಿ ಮುಂಡೂÉರು, ಸಂಡೂರಿನಲ್ಲಿ ಘೋರ್ಪಡೆ ಕುಟುಂಬದವರು ರಾಜಕೀಯ ವಾಗಿ ಪ್ರಾಬಲ್ಯ ಮೆರೆದಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಿಂದ ಬಳ್ಳಾರಿ ಯಲ್ಲಿ ರೆಡ್ಡಿ ಸಹೋದರರು (ಬಿ.ಶ್ರೀರಾಮುಲು ಸೇರಿ) ಸಂಡೂರಿನಲ್ಲಿ ಲಾಡ್‌ ಸಹೋದರರ ಪ್ರಾಬಲ್ಯ ಬಲಿಷ್ಠ ವಾಯಿತು. ಇನ್ನು ಮುಂದೆ ವಾಲ್ಮೀಕಿ ಸಮುದಾಯದ ಸಚಿವ ಬಿ.ಶ್ರೀರಾಮುಲು, ರೆಡ್ಡಿ ಸಹೋದರರನ್ನು ಮೀರಿ ರಾಜಕೀಯ ವಾಗಿ ಬಲಿಷ್ಠವಾಗಬಹುದು. ನೆರೆಯ ಆಂಧ್ರಪ್ರದೇಶದಲ್ಲಿ ಒಬಿಸಿಯಲ್ಲಿ ಬರುವ ವಾಲ್ಮೀಕಿ ಸಮುದಾಯದವರು ಶಿಕ್ಷಣ, ಉದ್ಯೋಗ ಪಡೆಯಲು ಮಾತ್ರ ಬಳ್ಳಾರಿಗೆ ಬರುತ್ತಿದ್ದು, ಇನ್ನು ಮುಂದೆ ರಾಜಕೀಯ ಲಾಭ ಪಡೆದುಕೊಳ್ಳಲು ಸಹ ವಲಸೆ ಬಂದರೂ ಅಚ್ಚರಿ ಪಡುವಂತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಟಾಪ್ ನ್ಯೂಸ್

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

Ranu Mondal sings trending song Kacha Badam

ವೈರಲ್ ಸಾಂಗ್ ‘ಕಚಾ ಬದಾಮ್’ ಹಾಡಿ ಟ್ರೋಲಾದ ರಾನು ಮಂಡಲ್: ವಿಡಿಯೋ ನೋಡಿ

13gold

ಹಾಡ ಹಗಲೇ ಜ್ಯುವೆಲರಿ ಅಂಗಡಿ ಮಾಲೀಕನ ಮನೆ ದರೋಡೆ ಯತ್ನ: ಮಹಿಳೆ ಪೊಲೀಸ್ ವಶಕ್ಕೆ

Gandhi

ಇಸ್ರೇಲ್ ಜತೆ ಒಪ್ಪಂದ- ಪೆಗಾಸಸ್ ಬಳಸಿ ಗೂಢಚಾರಿಕೆ; ಮೋದಿ ಸರ್ಕಾರದಿಂದ ದೇಶದ್ರೋಹ; ರಾಹುಲ್

12CTravi

ಶಾಸಕ ಸಿ.ಟಿ.ರವಿ ತಂದೆ ತಿಮ್ಮೇಗೌಡ ನಿಧನ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಲಸಿಕೆ:  ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ

ಕೋವಿಡ್ ಲಸಿಕೆ: ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ

ಅಸ್ತಮಾ, ಅಲರ್ಜಿಗೆ ನೈಸರ್ಗಿಕ ಬದುಕೇ ಪರಿಹಾರ!

ಅಸ್ತಮಾ, ಅಲರ್ಜಿಗೆ ನೈಸರ್ಗಿಕ ಬದುಕೇ ಪರಿಹಾರ!

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಗಣರಾಜ್ಯಕ್ಕೆ ಸಂವಿಧಾನದ ಬಲ

ಗಣರಾಜ್ಯಕ್ಕೆ ಸಂವಿಧಾನದ ಬಲ

ಸಂವಿಧಾನ ರಾಷ್ಟ್ರದ ವ್ಯವಸ್ಥೆಯ ಭದ್ರ ಬುನಾದಿ

ಸಂವಿಧಾನ ರಾಷ್ಟ್ರದ ವ್ಯವಸ್ಥೆಯ ಭದ್ರ ಬುನಾದಿ

MUST WATCH

udayavani youtube

ಉಳ್ಳಾಲ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

ಹೊಸ ಸೇರ್ಪಡೆ

ಮೂರು ತಿಂಗಳಲ್ಲಿ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಕ್ರಮ: ಗೋವಿಂದ ಕಾರಜೋಳ

ಮೂರು ತಿಂಗಳಲ್ಲಿ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಕ್ರಮ: ಗೋವಿಂದ ಕಾರಜೋಳ

16sports

ಆರೋಗ್ಯಕರ ಜೀವನಕ್ಕೆ ಕ್ರೀಡೆ ಅಗತ್ಯ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

15covid

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.