ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ ಈ ಫೋಟೋ !
Team Udayavani, Nov 18, 2021, 6:53 PM IST
ಹೊಸದಿಲ್ಲಿ: ಭಾರತೀಯ ಕಾಡುಗಳು ಇಂತಹ ಹಲವಾರು ವೈವಿಧ್ಯಮಯ ಜೀವಿಗಳನ್ನು ತನ್ನ ಒಡಲೊಳಗೆ ಹೊಂದಿದೆ.ಹಾವುಗಳು ಗಾಂಭೀರ್ಯದ ಮೂಲಕ
ಭಯಂಕರವಾದ ಭಯವನ್ನೂ ಉತ್ಪತ್ತಿ ಮಾಡಬಲ್ಲ ಜೀವಿಗಳು. ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಜಗತ್ತನ್ನು ಹತ್ತಿರಕ್ಕೆ ತಂದಂತೆ ಪ್ರಾಣಿ ಪ್ರಪಂಚದ ವಿಡಿಯೋಗಳು, ಫೋಟೋಗಳು ಕೂಡ ಸಂವೇದನೆಯಾಗಿ ಮಾರ್ಪಟ್ಟಿದ್ದು, ಅದಕ್ಕೆ ಹೊಸ ಸೇರ್ಪಡೆಯಾಗಿ ಒಟ್ಟಿಗೆ ಇರುವ ಕಪ್ಪು ಬಣ್ಣದ ಮೂರು ಹಾವುಗಳ ಈ ಫೋಟೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.
ಮಹಾರಾಷ್ಟ್ರದಲ್ಲಿ ಕಂಡು ಬಂಡ ಮೂರು ಕಪ್ಪು ನಾಗರ ಹಾವುಗಳ ಚಿತ್ರವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಅವರು ಟ್ವಿಟ್ಟರ್ನಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಅಮರಾವತಿ ಜಿಲ್ಲೆಯ ಹರಿಸಲ್ ಕಾಡಿನಲ್ಲಿ ಮರದ ತೊಗಟೆಯ ಸುತ್ತಲೂ ಮೂರು ನಾಗರಹಾವುಗಳು ಸುತ್ತಿರುವುದನ್ನು ಕಾಣಬಹುದಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಈ ಚಿತ್ರಗಳನ್ನು ಮೊದಲು ಭಾರತೀಯ ವನ್ಯಜೀವಿ ಹೆಸರಿನ ಫೇಸ್ಬುಕ್ ಗುಂಪಿನಲ್ಲಿ ಹಂಚಿಕೊಳ್ಳಲಾಯಿತು ಮತ್ತು ಹಾವುಗಳನ್ನು ರಕ್ಷಿಸಿ ಹರಿಸಲ್ ಕಾಡಿನಲ್ಲಿ ಬಿಡುಗಡೆ ಮಾಡಿದ ನಂತರ ತೆಗೆಯಲಾಗಿದೆ.
ಐಎಫ್ಎಸ್ ಅಧಿಕಾರಿ ನಂದಾ ಅವರು ನವೆಂಬರ್ 16 ರಂದು ಟ್ವೀಟ್ ಮಾಡಿ, “ಆಶೀರ್ವಾದಗಳು… ಒಂದೇ ಸಮಯದಲ್ಲಿ ಮೂರು ನಾಗರ ಹಾವುಗಳು ನಿಮ್ಮನ್ನು ಆಶೀರ್ವದಿಸಿದಾಗ.” ಎಂದು ಬರೆದಿದ್ದರು.
Blessings…
When three cobras bless you at the same time.
?:Rajendra Semalkar. pic.twitter.com/EZCQTumTwT— Susanta Nanda IFS (@susantananda3) November 16, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್