Udayavni Special

ಪಶ್ಚಿಮ ಬಂಗಾಲ: ಹೇಗಿದೆ ಚುನಾವಣ ಲೆಕ್ಕಾಚಾರ?


Team Udayavani, Mar 31, 2021, 7:05 AM IST

ಪಶ್ಚಿಮ ಬಂಗಾಲ: ಹೇಗಿದೆ ಚುನಾವಣ ಲೆಕ್ಕಾಚಾರ?

ಪಶ್ಚಿಮ ಬಂಗಾಲದಲ್ಲಿ ಚುನಾವಣ ಕಾವು ಜೋರಾಗಿದೆ. ತೃಣಮೂಲ ಕಾಂಗ್ರೆಸ್‌, ಬಿಜೆಪಿ, ಹಳೇ ಪಕ್ಷಗಳಾದ ಎಡಪಕ್ಷಗಳು ಮತ್ತು ಕಾಂಗ್ರೆಸ್‌ ತಮ್ಮದೇ ರೀತಿಯಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಿವೆ. ಆದರೂ ಈ ಚುನಾವಣೆ ಯಲ್ಲಿ ಗಮನ ಸೆಳೆಯಬಹುದಾದ ಅಂಶಗಳು ಇಲ್ಲಿವೆ…

ಪಶ್ಚಿಮ ಬಂಗಾಲದಲ್ಲಿ ಪ್ರಥಮ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತಕ್ಕೆ ವೇದಿಕೆ ಸಿದ್ಧವಾಗಿದೆ. ಬಂಗಾಲದ ಮಗಳು ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಈ ಬಾರಿ ಬ್ಯಾಂಡೇಜ್‌ ಧರಿಸಿ ವ್ಹೀಲ್‌ ಚೇರ್‌ ನಲ್ಲಿಯೇ ಪ್ರಚಾರ ನಡೆಸಿದ್ದಾರೆ. ರಾಜ್ಯ ದಲ್ಲಿ ಭದ್ರ ನೆಲೆ ಸ್ಥಾಪಿಸಲು ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿರುವ ಬಿಜೆಪಿಯೂ ಎಲ್ಲ ತಂತ್ರಗಳನ್ನೂ ಅನುಸರಿಸುತ್ತಿದೆ. ಇನ್ನೊಂದೆಡೆ ಎಡರಂಗ ಹಾಗೂ ಕಾಂಗ್ರೆಸ್‌ ಮೈತ್ರಿ ಏನಕೇನ ಈ ಎರಡೂ ಪಕ್ಷಗಳನ್ನು ಸೋಲಿಸಬೇಕೆಂದು ಪ್ರಯತ್ನಿಸುತ್ತಿದೆ. ಹಾಗಿದ್ದರೆ ಮತದಾರರು ಯಾರಿಗೆ ಗೆಲುವಿನ ಹಾರ ಹಾಕಲಿದ್ದಾರೆ?

ಮಮತಾ ಜನಪ್ರಿಯತೆ
ಅನೇಕ ಪರಿಣತರು, ಚುನಾವಣ ಪಂಡಿತರು ಹಾಗೂ ತೃಣಮೂಲ ಕಾಂಗ್ರೆಸ್‌ನ ರಾಜ ಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಅಂತೂ ಮಮತಾ ಬ್ಯಾನರ್ಜಿಯವರ ವರ್ಚಸ್ಸು ಬೃಹತ್ತಾಗಿದ್ದು, ಅವರೇ ಗೆಲ್ಲಲಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಚುನಾವಣ ಪೂರ್ವ ಸಮೀಕ್ಷೆಗಳೂ ಸಹ, ಬಿಜೆಪಿ ತೃಣಮೂಲಕ್ಕೆ ಪ್ರಬಲ ಪೈಪೋಟಿ ಒಡ್ಡಬಹುದು, ಆದರೆ ದೀದಿಯದ್ದೇ ಮೇಲುಗೈಯಾಗಲಿದೆ ಎಂದಿವೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಮತಾಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿತ್ತು. ಅದೇ ಜನಪ್ರಿಯತೆ ವಿಧಾನಸಭಾ ಚುನಾವಣೆಯಲ್ಲೂ ಅದಕ್ಕೆ ದಕ್ಕಬಹುದೇ ಎನ್ನುವ ಬಗ್ಗೆ ಉತ್ತರಗಳಿಲ್ಲ.

ರಾಜವಂಶಿ ಮತ್ತು ಮಥುವಾ ಫ್ಯಾಕ್ಟರ್‌
ಅತ್ತ ತೃಣಮೂಲ ಕಾಂಗ್ರೆಸ್‌ ಮತ್ತು ಇತ್ತ ಬಿಜೆಪಿಯು ಮುಖ್ಯವಾಗಿ ಕೋಚ್‌ ರಾಜವಂಶಿ ಮತವರ್ಗದ ಮೇಲೆಯೇ ಗಮನಹರಿಸಿವೆ. ಪಶ್ಚಿಮ ಬಂಗಾಲದಲ್ಲಿ ಅತೀ ದೊಡ್ಡ ಎಸ್‌ಸಿ ವರ್ಗವಾಗಿರುವ ರಾಜವಂಶಿಗಳ ಸಂಖ್ಯೆ 18.4 ಪ್ರತಿಶತವಿರುವುದು ಇದಕ್ಕೆ ಮುಖ್ಯ ಕಾರಣ. ಈ ಕಾರಣಕ್ಕಾಗಿಯೇ, ಈ ಸಮುದಾಯದ ವೀರ ಸೈನಿಕರ ಹೆಸರನ್ನು ಪ್ಯಾರಾಮಿಲಿಟರಿ ಪಡೆಗೆ ಇಡುವುದಾಗಿ ಬಿಜೆಪಿ ಹೇಳುತ್ತಿದ್ದರೆ, ಮಮತಾ ಬ್ಯಾನರ್ಜಿ ರಾಜವಂಶಿ ಸಮುದಾಯದ 16ನೇ ಶತಮಾನದ ವೀರ ರಾಜಾ ನರನಾರಾಯಣರ ಹೆಸರಲ್ಲಿ ನಾರಾಯಣಿ ಎಂಬ ಪೊಲೀಸ್‌ ಬೆಟಾಲಿಯನ್‌ ಅನ್ನು ಸ್ಥಾಪಿಸಿದೆ.

ರಾಜವಂಶಿಗಳ ಅನಂತರ ಪಶ್ಚಿಮ ಬಂಗಾಲದಲ್ಲಿ ಪ್ರಮುಖ ಮತದಾರ ವರ್ಗವೆಂದು ಕರೆಸಿಕೊಂಡಿರುವುದು ಮಥುವಾ ಸಮುದಾಯ. ಎಸ್‌ಸಿ ವರ್ಗದಲ್ಲಿ 17.4 ಪ್ರತಿಶತದಷ್ಟಿರುವ ಮಥುವಾಗಳು ಬಾಂಗ್ಲಾದೇಶದಲ್ಲಿ ಧಾರ್ಮಿಕ ಹಿಂಸೆಯಿಂದ ತಪ್ಪಿಸಿಕೊಂಡು ಪಶ್ಚಿಮ ಬಂಗಾಲಕ್ಕೆ ನಿರಾಶ್ರಿತರಾಗಿ ಬಂದವರು. ಮಥುವಾಗಳ ಮುಖ್ಯ ಆಗ್ರಹ ನಾಗರಿಕತೆಯ ಹಕ್ಕು ಗಳಾಗಿದ್ದು,ತಾನು ಅಧಿಕಾರಕ್ಕೆ ಬಂದರೆ ಅವರ ಸಮಸ್ಯೆಗಳಿಗೆ ಧ್ವನಿಯಾಗುವುದಾಗಿ ಬಿಜೆಪಿ ಹೇಳುತ್ತಿದೆ. ಇದಷ್ಟೇ ಅಲ್ಲದೇ, ನೇರಹಣ ವರ್ಗಾವಣೆಯ ಮೂಲಕ ಐದು ವರ್ಷಗಳವರೆಗೆ ಮಥುವಾ ಸಮುದಾಯದ ಕುಟುಂಬಗಳಿಗೆ 10 ಸಾವಿರ ರೂ. ಹಣ ನೀಡುವ ಭರವಸೆಯನ್ನೂ ನೀಡುತ್ತಿದೆ ಬಿಜೆಪಿ.

ಆರೋಗ್ಯದ ಲೆಕ್ಕಾಚಾರ
ಕೋವಿಡ್‌ ವಿಚಾರವೂ ಪ.ಬಂಗಾಲ ಚುನಾವಣೆಯಲ್ಲಿ ಈ ಬಾರಿ ಮುನ್ನೆಲೆಯಲ್ಲಿದ್ದು, ಬಿಜೆಪಿ ಹಾಗೂ ತೃಣಮೂಲದಿಂದ ಆರೋಪ ಪ್ರತ್ಯಾರೋಪಗಳು ನಡೆದೇ ಇವೆ. ತಾನು ಅಧಿಕಾರಕ್ಕೆ ಬಂದರೆ, ಬುಡಕಟ್ಟು ಸಮುದಾಯಗಳು ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಬಿಜೆಪಿ ಹೇಳಿದರೆ, ಇತ್ತ ಮಮತಾ ದೀದಿ, ನವ ಸ್ವಾಸ್ಥ್ಯ ಯೋಜನೆಯನ್ನು ಪರಿಚಯಿಸಿದ್ದು, ಈ ಕಾರ್ಡ್‌ ಕುಟುಂಬದ ಹಿರಿಯ ಮಹಿಳಾ ಸದಸ್ಯೆಯ ಹೆಸರಿನಲ್ಲಿರುವುದು ವಿಶೇಷ. ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿಯೂ ಪ್ರಯತ್ನಿಸುತ್ತಿದ್ದು, ತಾನು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದಾಗಿ ಅದು ಹೇಳುತ್ತಿದೆ.

ಆಂಫಾನ್‌ ವಿಚಾರ ಯಾರ ಪರ?
ಮೇ 2020ರಲ್ಲಿ ಆಂಫಾನ್‌ ಚಂಡಮಾರುತ ಭಾರತಕ್ಕೆ ಬಂದಪ್ಪಳಿಸಿದಾಗ ಪಶ್ಚಿಮ ಬಂಗಾಲದ ಕರಾವಳಿ ಭಾಗಗಳು ಅತೀ ಹೆಚ್ಚು ಹಾನಿಗೀಡಾದವು. ಬೃಹತ್‌ ಪ್ರಮಾಣದಲ್ಲಿ ಸ್ವತ್ತು-ಆಸ್ತಿಗಳು ನಾಶವಾದವು. ರಾಜ್ಯ ರಾಜಧಾನಿಯಲ್ಲೂ ವಿದ್ಯುತ್‌ ಸಂಪರ್ಕ ಮರುಸ್ಥಾಪಿಸಲು ನಾಲ್ಕು ದಿನಗಳು ಹಿಡಿದವು. ಈ ವೇಳೆಯಲ್ಲಿ ಮಮತಾ ತ್ವರಿತವಾಗಿ ಸ್ಪಂದಿಸಲಿಲ್ಲ ಎಂದು ಬಿಜೆಪಿ ದೂರುತ್ತದೆ. ಆದರೆ ಬಿಜೆಪಿ ಅಸ್ಸಾಂಗೆ ಹೆಚ್ಚು ಮಹತ್ವ ನೀಡಿ ಪಶ್ಚಿಮ ಬಂಗಾಲವನ್ನು ಅವಗಣಿಸಿತು ಎನ್ನುವ ಆರೋಪ ತೃಣಮೂಲದ್ದು. ಅದರಲ್ಲೂ ಆಂಫಾನ್‌ ಪರಿಹಾರ ವಿತರಣೆಯ ವಿಷಯದಲ್ಲಿ ತೃಣಮೂಲ ನಾಯಕರು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ, ಇದು ಆಂಫಾನ್‌ ದುನೀìತಿ ಎಂದೇ ಬಿಜೆಪಿ ಪ್ರಚಾರ ಮಾಡುತ್ತಾ ಬಂದಿದೆ. ಗಮನಾರ್ಹ ಸಂಗತಿ ಯೆಂದರೆ, ಆಂಫಾನ್‌ ಪೀಡಿತ ಪ್ರದೇಶಗಳೆಲ್ಲವೂ 2019ರ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಹಾಕಿದ್ದವು, ಈಗ ಈ ಪ್ರದೇಶಗಳ ಜನರು ಬಿಜೆಪಿ ಅಥವಾ ಎಡ ಮೈತ್ರಿಯ ಪರ ವಾಲಿದರೆ ಹೇಗೆ ಎಂಬ ಭಯ ತೃಣಮೂಲಕ್ಕೆ ಇದೆ.

ಎಡರಂಗದ ಲೆಕ್ಕಾಚಾರ
ಬಿಜೆಪಿ ಪಶ್ಚಿಮ ಬಂಗಾಲದಲ್ಲಿ ಬೆಳೆದದ್ದಕ್ಕೆ ಎಡರಂಗವು ತನ್ನ ಶಕ್ತಿಯನ್ನು ಕಳೆದುಕೊಂಡು ಅದರ ಮತವರ್ಗವೆಲ್ಲ ಹರಿದು ಹಂಚಿ ಹೋಗಿದ್ದೂ ಪ್ರಮುಖ ಕಾರಣ. 2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗಕ್ಕೆ ದಕ್ಕಿದ್ದು ಕೇವಲ 7.5 ಪ್ರತಿಶತ ಮತಗಳಷ್ಟೇ, ಹತ್ತು ವರ್ಷಗಳ ಹಿಂದೆ ಈ ಪ್ರಮಾಣ 35.8 ಪ್ರತಿಶತದಷ್ಟಿತ್ತು. ಆದಾಗ್ಯೂ ಎಡ ರಂಗವು ಚುನಾವಣ ದೃಷ್ಟಿ ಯಿಂದ ಅಪ್ರಸ್ತುತ ಎಂದು ಕೆಲವು ಪರಿಣತರು ಹೇಳುತ್ತಾರಾದರೂ, ಎಡರಂಗದ ಈಗಿನ ಮತ್ತು ಪರಿತ್ಯಕ್ತ ಮತವರ್ಗ 2021ರ ಫಲಿತಾಂಶವನ್ನು ರೂಪಿಸುವಲ್ಲಿ ಪಾತ್ರ ವಹಿಸಬಲ್ಲದು ಎನ್ನುವ ನಿರೀಕ್ಷೆಯೂ ಇದೆ. ಎಡರಂಗವು ಈ ಬಾರಿ ಕಾಂಗ್ರೆಸ್‌ ಹಾಗೂ ಇಂಡಿಯನ್‌ ಸೆಕ್ಯೂಲರ್‌ ಫ್ರಂಟ್‌ ಜತೆ ಮೈತ್ರಿ ಮಾಡಿಕೊಂಡಿದ್ದು, ಅತ್ತ ತೃಣಮೂಲವನ್ನು ಇತ್ತ ಬಿಜೆಪಿಯನ್ನು ಟಾರ್ಗೆಟ್‌ ಮಾಡುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಮುಸ್ಲಿಂ ಮತವರ್ಗದ ಸಂಖ್ಯೆ 30 ಪ್ರತಿಶತದಷ್ಟಿದ್ದು, ಅವರು ನಿರ್ಣಾಯಕ ಪಾತ್ರ ವಹಿಸಬಲ್ಲರು. ಈ ಕಾರಣಕ್ಕಾಗಿಯೇ ಎಡ ಮೈತ್ರಿಯು ಇಂಡಿಯನ್‌ ಸೆಕ್ಯೂಲರ್‌ ಫ್ರಂಟ್‌ ಜತೆ ಕೈಜೋಡಿಸಿರುವುದು. ಮುಸ್ಲಿಂ ಮತವರ್ಗ ತೃಣಮೂಲದ ಕಡೆ ಹೋಗುವುದೋ ಅಥವಾ ಎಡ ಮೈತ್ರಿಯೆಡೆಗೋ ನೋಡಬೇಕಿದೆ.

ಬೆಂಗಾಲಿ ವರ್ಸಸ್‌ ಹೊರಗಿನವರು
ಪಶ್ಚಿಮ ಬಂಗಾಲದಲ್ಲಿ ಈಗ ಪ್ರಚಾರಗಳಲ್ಲಿ ಹರಿದಾಡುತ್ತಿರುವ ಪ್ರಮುಖ ಘೋಷಣೆಯೆಂದರೆ ಬೆಂಗಾಲಿ ವರ್ಸಸ್‌ ಹೊರಗಿನವರು ಎನ್ನುವ ಮಾತು. ತೃಣಮೂಲವಷ್ಟೇ ಅಲ್ಲ, ಎಡ ಮೈತ್ರಿಯೂ ಹೀಗೆಯೇ ಹೇಳುತ್ತಿದೆ. ಐಡೆಂಟಿಟಿ ರಾಜಕೀಯ ಈಗ ತಿರುವು ಪಡೆದಿದ್ದು, ಇದೇ ವಿಷಯವನ್ನು ಮುನ್ನೆಲೆ ಯಲ್ಲಿಟ್ಟು ಬಿಜೆಪಿ, ಪಶ್ಚಿಮ ಬಂಗಾಲದಲ್ಲಿರುವ 30 ಪ್ರತಿಶತಕ್ಕೂ ಅಧಿಕ ಬಂಗಾಲೇತರ ಜನಸಂಖ್ಯೆಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಡಾರ್ಜಿಲಿಂಗ್‌, ಜಲ್ಪಾಯಿಗುರಿ, ಉತ್ತರ ದಿನಾಜು³ರ ಮತ್ತು ರಾಜಧಾನಿ ಕೋಲ್ಕತಾದಲ್ಲೂ ಅನ್ಯ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಟಾಪ್ ನ್ಯೂಸ್

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 226 ಅಂಕ ಏರಿಕೆ, 15,850ರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 226 ಅಂಕ ಏರಿಕೆ, 15,850ರ ಗಡಿ ದಾಟಿದ ನಿಫ್ಟಿ

shambo shiva shankara kannada film

ಮಾತಿನ ಮನೆಯಲ್ಲಿ ‘ಶಂಭೋ ಶಿವಶಂಕರ’

07

ನಟಿ ಮಿನಿಶಾ ಮೇಲೆ ಹಣ ಕಳುವು ಆರೋಪ ಕೇಳಿ ಬಂದಿತ್ತು: ಅಷ್ಟಕ್ಕೂ ಅಂದು ನಡೆದಿದ್ದೇನು ?

ಕುಲಹಳ್ಳಿಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ವಶ: ಬನಹಟ್ಟಿ ಪೊಲೀಸರಿಂದ ಇಬ್ಬರ ಬಂಧನ

ಕುಲಹಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ವಶ: ಇಬ್ಬರ ಬಂಧನ

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಸಿ.ಪಿ.ಯೋಗೇಶ್ವರ್

ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕೆ ಕಾಯೋಣ: ಬಿಜೆಪಿ ಬೆಳವಣಿಗೆ ಬಗ್ಗೆ ಯೋಗೇಶ್ವರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

sದ್ಗಹಗ್ದಸದ್ಗಹಜಜಹಗ್ದದ

ಡೆಲ್ಟಾ ಹಿನ್ನೆಲೆ : ಗೋವಾದಲ್ಲಿ ಕೆಲ ದಿನಗಳ ಕಾಲ ಕರ್ಫ್ಯೂ ಸಾಧ್ಯತೆ : ಪ್ರಮೋದ ಸಾವಂತ್

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

MUST WATCH

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

ಹೊಸ ಸೇರ್ಪಡೆ

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ಜು.7ರಿಂದ ಕೇರಳ – ದುಬೈ ವಿಮಾನ ಸಂಚಾರ ಆರಂಭ

ertytrfdfgh

ಕೃಷಿ ಚಟುವಟಿಕೆ ಜತೆ ಕಾರಹುಣ್ಣಿಮೆ ಸಡಗರ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 226 ಅಂಕ ಏರಿಕೆ, 15,850ರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 226 ಅಂಕ ಏರಿಕೆ, 15,850ರ ಗಡಿ ದಾಟಿದ ನಿಫ್ಟಿ

rಗಹಗರ್ಗನಬಗ್ನಹಗ್

ಸಚಿವರ ವಿರುದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ

shambo shiva shankara kannada film

ಮಾತಿನ ಮನೆಯಲ್ಲಿ ‘ಶಂಭೋ ಶಿವಶಂಕರ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.