ಕೋವಿಡ್ ಲಸಿಕೆ: ಯಾರಿಗೆ ಕೋವ್ಯಾಕ್ಸಿನ್ ಸೂಕ್ತ, ಯಾರು ಲಸಿಕೆ ತೆಗೆದುಕೊಳ್ಳಬಾರದು?
ಫ್ಯಾಕ್ಟ್ ಚೆಕ್ ಬಳಿಕ ಭಾರತ್ ಬಯೋಟೆಕ್ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
Team Udayavani, Jan 19, 2021, 2:03 PM IST
ನವದೆಹಲಿ: ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಅಥವಾ ಅನಾರೋಗ್ಯಕ್ಕೆ ಒಳಗಾಗಿದ್ದರೆ ಮತ್ತು ಅಲರ್ಜಿ ಹೊಂದಿರುವ ವ್ಯಕ್ತಿಗಳು ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳುವುದು ಬೇಡ ಎಂದು ಲಸಿಕೆ ತಯಾರಿಕಾ ಭಾರತ್ ಬಯೋಟೆಕ್ ಎಚ್ಚರಿಕೆ ನೀಡಿದೆ.
ದೇಶಾದ್ಯಂತ ಕೋವಿಡ್ ವಿರುದ್ಧ ಲಸಿಕೆ ಅಭಿಯಾನ ಆರಂಭಿಸಿದ ಎರಡು ದಿನದ ನಂತರದ ಫ್ಯಾಕ್ಟ್ ಚೆಕ್ ಬಳಿಕ ಭಾರತ್ ಬಯೋಟೆಕ್ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಈಗಾಗಲೇ ಭಾರತದಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭಗೊಂಡಿದ್ದು, ಕೇವಲ 580 ಮಂದಿಯಲ್ಲಿ ಅಡ್ಡಪರಿಣಾಮ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಪರಿಶೀಲನೆ ನಡೆಸಿದ ನಂತರ ಕೋವಿಡ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬಹುದು, ಯಾರು ಲಸಿಕೆ ತೆಗೆದುಕೊಳ್ಳಬಾರದು ಎಂಬ ಬಗ್ಗೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಮಂಗಳೂರು ಗೋಲಿಬಾರ್ ಗೆ ಪ್ರತೀಕಾರ: ಪೊಲೀಸ್ ಸಿಬ್ಬಂದಿ ಕೊಲೆ ಯತ್ನದ ಹಿಂದೆ ‘ಮಾಯಾ ಗ್ಯಾಂಗ್’
- ನೀವು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೀರಾ? ಹೌದು ಎಂದಾದರೆ ಎಷ್ಟು ಸಮಯದಿಂದ ಮತ್ತು ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸಬೇಕು. ಈ ನಿಟ್ಟಿನಲ್ಲಿ ಕೆಳಗೆ ನಮೂದಿಸಿದ ಯಾವುದೇ ಲಕ್ಷಣಗಳಿದ್ದರೂ ಲಸಿಕೆ ಪಡೆಯದಂತೆ ಸೂಚನೆ ನೀಡಿದೆ.
- ಯಾವುದೇ ಅಲರ್ಜಿ ಇದ್ದರೆ ಲಸಿಕೆ ತೆಗೆದುಕೊಳ್ಳಬೇಡಿ
- ಜ್ವರದಿಂದ ಬಳಲುತ್ತಿದ್ದರೆ ಲಸಿಕೆ ಹಾಕಿಸಿಕೊಳ್ಳಬೇಡಿ
- ರಕ್ತಸ್ರಾವ ಸಮಸ್ಯೆ ಅಥವಾ ತೆಳು ರಕ್ತ ಹೊಂದಿರುವವರು ಲಸಿಕೆ ತೆಗೆದುಕೊಳ್ಳಬೇಡಿ
- ರೋಗ ನಿರೋಧಕ ಶಕ್ತಿ ಹೊಂದಾಣಿಕೆಯಾಗದ ಅಥವಾ ರೋಗ ನಿರೋಧ ಶಕ್ತಿ ಕಡಿಮೆ ಇದ್ದಲ್ಲಿ ಲಸಿಕೆ ಬೇಡ
- ಗರ್ಭಿಣಿಯರಿಗೆ ಲಸಿಕೆ ಬೇಡ
- ಮಗುವಿಗೆ ಸ್ತನಪಾನ ಮಾಡಿಸುವ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳುವುದು ಬೇಡ
- ಕೋವಿಡ್ 19 ಸೋಂಕಿಗೆ ಬೇರೆ ಲಸಿಕೆ ಹಾಕಿಸಿಕೊಂಡಿದ್ದರೆ ಕೋವ್ಯಾಕ್ಸಿನ್ ಲಸಿಕೆ ಪಡೆಯುವುದು ಬೇಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೂಗಲ್ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು
ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ : ಮಮತಾ ಬ್ಯಾನರ್ಜಿ ವ್ಯಂಗ್ಯ
‘2008 ಬಾಟ್ಲಾ ಹೌಸ್’ ಎನ್ಕೌಂಟರ್ : ಉಗ್ರ ಅರಿಜ್ ಖಾನ್ ಮೇಲಿನ ಆರೋಪ ಸಾಬೀತು
ಮತಾಂತರ ತಡೆ : ಮಧ್ಯಪ್ರದೇಶದಲ್ಲೂ ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಅಂಗೀಕಾರ..!
ಪ್ರಧಾನಿ ಮೋದಿಯವರ #WomensDay ಶಾಪಿಂಗ್ ಪಟ್ಟಿಯಲ್ಲಿ ಏನೇನಿದೆ..? ಇಲ್ಲಿದೆ ಮಾಹಿತಿ