ವಿಂಬಲ್ಡನ್: ಜೊಕೋವಿಕ್, ಕೊಕೊ ಗಾಫ್, ಜೆಲೆನಾ ಒಸ್ಟಾಪೆಂಕೊ ಮುನ್ನಡೆ
Team Udayavani, Jul 1, 2022, 11:22 PM IST
ಲಂಡನ್: ಅಮೆರಿಕದ ನೆಚ್ಚಿನ ಆಟಗಾರ್ತಿ ಕೊಕೊ ಗಾಫ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ, ಟ್ಯುನೀಶಿಯಾದ ಓನ್ಸ್ ಜೇಬರ್, ಜರ್ಮನಿಯ ತಜಾನಾ ಮರಿಯಾ ವಿಂಬಲ್ಡನ್ ವನಿತಾ ಸಿಂಗಲ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿ 4ನೇ ಸುತ್ತಿಗೆ ಏರಿದ್ದಾರೆ.
ಹಾಲಿ ಚಾಂಪಿಯನ್ ಜೊಕೋವಿಕ್ ತಮ್ಮದೇ ದೇಶದ ಮಿಯೋಮಿರ್ ಕೆಮಾನೋವಿಕ್ ವಿರುದ್ಧ 6-0, 6-3, 6-4 ಅಂತರದ ಜಯ ಸಾಧಿಸಿದರು.
ಕೊಕೊ ಗಾಫ್ 6-2, 6-3 ಅಂತರದಿಂದ ರೊಮೇನಿಯಾದ ಮೈಕಲ್ ಬುಝನೆಸ್ಕಾ ಅವರನ್ನು ಕೆಡವಿದರೆ, ಓನ್ಸ್ ಜೇಬರ್ ಇಷ್ಟೇ ಅಂತರದಿಂದ ಫ್ರಾನ್ಸ್‌ನ ಡಯಾನಾ ಪರ್ರಿ ಅವರನ್ನು ಪರಾಭವಗೊಳಿಸಿದರು.
ಆತಿಥೇಯ ನಾಡಿನ ಹೀತರ್ ವಾಟ್ಸನ್ 7-6 (8-6), 6-2ರಿಂದ ಸ್ಲೊವೇನಿಯಾದ ಕಾಜಾ ಜುವಾನ್ ವಿರುದ್ಧ ಮೇಲುಗೈ ಸಾಧಿಸಿದರು. ತಜಾನಾ ಮರಿಯಾ 6-3, 7-5ರಿಂದ ಮರಿಯಾ ಸಕ್ಕರಿ ಆಟವನ್ನು ಕೊನೆಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕಲಿ ಸುದ್ದಿ ಹರಡುತ್ತಿದ್ದ ಭಾರತದ 7 ಮತ್ತು ಪಾಕ್ ನ 1 ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಕೇಂದ್ರ
ಅಕ್ರಮ ಹುಲಿ ಉಗುರು ಮಾರಾಟಕ್ಕೆ: ಇಬ್ಬರ ಬಂಧನ
ಮೂಡಿಗೆರೆ: ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ : ಆರು ಮಂದಿ ಬಂಧನ, ನಗದು ವಶ
ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ
ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್