ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ; 24 ಗಂಟೆಯಲ್ಲಿ 2.55 ಲಕ್ಷ ಪ್ರಕರಣ ಪತ್ತೆ
ದೇಶಾದ್ಯಂತ ಈವರೆಗೆ 71.88 ಕೋಟಿಗೂ ಅಧಿಕ ಪರೀಕ್ಷೆ ನಡೆಸಲಾಗಿದೆ.
Team Udayavani, Jan 25, 2022, 10:43 AM IST
ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,55,874 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ 50,190 ಪ್ರಕರಣಗಳು ಇಳಿಕೆ ಕಂಡಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ(ಜನವರಿ 25) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಬ್ರಿಟಿಷರಿಗೆ ಗುಲಾಮರಾದವರಿಂದ ಕಲಿಯಬೇಕಾದ್ದಿಲ್ಲ: ಬಿ.ಕೆ. ಹರಿಪ್ರಸಾದ್
ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 22,36,842ಕ್ಕೆ ಇಳಿಕೆಯಾಗಿದೆ. ಭಾರತದಲ್ಲಿ ಒಂದೇ ದಿನ ಒಟ್ಟು 16,49,108 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಈವರೆಗೆ 71.88 ಕೋಟಿಗೂ ಅಧಿಕ ಪರೀಕ್ಷೆ ನಡೆಸಲಾಗಿದೆ.
ಭಾರತದ ವಾರದ ಪಾಸಿಟಿವಿಟಿ ದರ ಶೇ.17.17ರಷ್ಟಿದ್ದು, ಪ್ರತಿದಿನದ ಪಾಸಿಟಿವಿಟಿ ದರ ಶೇ.15.52ರಷ್ಟಿದೆ. 24ಗಂಟೆಯಲ್ಲಿ ಕೋವಿಡ್ ನಿಂದ 614 ಮಂದಿ ಸಾವನ್ನಪ್ಪಿದ್ದು, ಭಾರತದಲ್ಲಿ ಒಟ್ಟು ಕೋವಿಡ್ ನಿಂದ 4,90,462 ಮಂದಿ ಸಾವನ್ನಪ್ಪಿದ್ದಾರೆ.
ಒಂದೇ ದಿನದಲ್ಲಿ 2,67,753 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ದೇಶಾದ್ಯಂತ ಈವರೆಗೆ ಒಟ್ಟು 3,70,71,898ಮಂದಿ ಚೇತರಿಸಿಕೊಂಡಿದ್ದಾರೆ. 24ಗಂಟೆಯಲ್ಲಿ 62 ಲಕ್ಷ ಕೋವಿಡ್ ಡೋಸ್ ನೀಡಲಾಗಿದೆ. ಈವರೆಗೆ ಭಾರತದಲ್ಲಿ 162.92 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ