Udayavni Special

ವನಿತಾ ಏಕದಿನ; ಮಿಥಾಲಿ ದಾಖಲೆಗೆ ಮುಸುಕೆಳೆದ ಲಿಜೆಲ್‌ ಲೀ


Team Udayavani, Mar 13, 2021, 6:50 AM IST

ವನಿತಾ ಏಕದಿನ; ಮಿಥಾಲಿ ದಾಖಲೆಗೆ ಮುಸುಕೆಳೆದ ಲಿಜೆಲ್‌ ಲೀ

ಲಕ್ನೋ: ಭಾರತದ ಚಾಂಪಿಯನ್‌ ಆಟಗಾರ್ತಿ ಮಿಥಾಲಿ ರಾಜ್‌ ಅವರ 10 ಸಾವಿರ ರನ್‌ ಸಾಧನೆಯ ಸಂಭ್ರಮ ಕೆಲವೇ ಗಂಟೆಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆ ತಂಡದ ಓಪನರ್‌ ಲಿಜೆಲ್‌ ಲೀ ಅವರಿಂದ ಕಳೆಗುಂದಿತು. ತೃತೀಯ ಏಕದಿನ ಪಂದ್ಯವನ್ನು ಡಿ-ಎಲ್‌ ನಿಯಮದಂತೆ 6 ರನ್ನುಗಳಿಂದ ಗೆದ್ದ ಹರಿಣಗಳ ಪಡೆ ಮತ್ತೆ ಸರಣಿ ಯಲ್ಲಿ ಮುನ್ನಡೆ ಸಾಧಿಸಿತು.
ಶುಕ್ರವಾರದ 3ನೇ ಏಕದಿನ ಪಂದ್ಯದಲ್ಲಿ ಲಿಜೆಲ್‌ ಲೀ ಅಜೇಯ 132 ರನ್‌ ಬಾರಿಸಿ ಭಾರತವನ್ನು ಗೆಲುವಿನಿಂದ ದೂರಕ್ಕಟ್ಟಿದರು. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟಿಗೆ 248 ರನ್‌ ಪೇರಿಸಿತು. ದಿಟ್ಟ ರೀತಿಯಲ್ಲಿ ಜವಾಬಿತ್ತ ದಕ್ಷಿಣ ಆಫ್ರಿಕಾ 46.3 ಓವರ್‌ಗಳಲ್ಲಿ 4 ವಿಕೆಟಿಗೆ 223 ರನ್‌ ಗಳಿಸಿದ ವೇಳೆ ಮಳೆ ಸುರಿಯಿತು. ಪಂದ್ಯ ಇಲ್ಲಿಗೇ ನಿಂತಿತು. ಆಗ ಪ್ರವಾಸಿ ತಂಡ ಡಕ್‌ವರ್ತ್‌-ಲೂಯಿಸ್‌ ನಿಯಮದಂತೆ 6 ರನ್‌ ಮುನ್ನಡೆಯಲ್ಲಿತ್ತು.

ಜೀವನಶ್ರೇಷ್ಠ ಸಾಧನೆ
88ನೇ ಏಕದಿನ ಪಂದ್ಯವಾಡಲಿಳಿದ ಓಪನರ್‌ ಲಿಜೆಲ್‌ ಲೀ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಆಫ್ರಿಕಾ ಸರದಿಯನ್ನು ಬೆಳೆಸುತ್ತ ಹೋದರು. ಭಾರತದ ಬೌಲರ್‌ಗಳಿಗೆ ಈ ವಿಕೆಟ್‌ ಮರೀಚಿಕೆಯೇ ಆಗಿ ಉಳಿಯಿತು. ಲಿಜೆಲ್‌ ಆಟವೇ ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಎನಿಸಿತು. ಅವರ ಅಜೇಯ 132 ರನ್ನುಗಳ ಜೀವನಶ್ರೇಷ್ಠ ಇನ್ನಿಂಗ್ಸ್‌ 131 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 16 ಬೌಂಡರಿ, 2 ಸಿಕ್ಸರ್‌. ಇದು ಅವರ 3ನೇ ಶತಕ.

ಭಾರತದ ಸರದಿಯಲ್ಲಿ ಪೂನಂ ರಾವತ್‌ 77 ರನ್‌ ಬಾರಿಸಿ ಮಿಂಚಿದರು (108 ಎಸೆತ, 11 ಬೌಂಡರಿ). ಮಿಥಾಲಿ, ಕೌರ್‌, ದೀಪ್ತಿ ಶರ್ಮ ತಲಾ 36 ರನ್‌ ಮಾಡಿದರು.

ರವಿವಾರ ನಡೆಯುವ 4ನೇ ಮುಖಾಮುಖೀ ಭಾರತದ ಪಾಲಿಗೆ ಮಹತ್ವದ್ದಾಗಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ-5 ವಿಕೆಟಿಗೆ 248 (ಪೂನಂ 77, ಮಿಥಾಲಿ 36, ಕೌರ್‌ 36, ದೀಪ್ತಿ ಔಟಾಗದೆ 36, ಶಬಿ°ಮ್‌ 46ಕ್ಕೆ 2). ದಕ್ಷಿಣ ಆಫ್ರಿಕಾ-46.3 ಓವರ್‌ಗಳಲ್ಲಿ 4 ವಿಕೆಟಿಗೆ 223 (ಲೀ ಔಟಾಗದೆ 132, ಡು ಪ್ರೀಝ್ 37, ಜೂಲನ್‌ 20ಕ್ಕೆ 2, ದೀಪ್ತಿ 39ಕ್ಕೆ 1, ರಾಜೇಶ್ವರಿ 39ಕ್ಕೆ 1).

ಪಂದ್ಯಶ್ರೇಷ್ಠ: ಲಿಜೆಲ್‌ ಲೀ.

ಮಿಥಾಲಿ ರಾಜ್‌ 10,000 ರನ್‌ ಸಾಧನೆ
ಭಾರತದ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಶುಕ್ರವಾರದ 3ನೇ ಏಕದಿನ ಪಂದ್ಯದ ವೇಳೆ ವಿಶಿಷ್ಟ ಸಾಧನೆಯೊಂದಿಗೆ ನೂತನ ಎತ್ತರ ತಲುಪಿದರು. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ ಕೇವಲ ದ್ವಿತೀಯ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಮುಖಾಮುಖೀಯಲ್ಲಿ 35 ರನ್‌ ಗಳಿಸಿದ ವೇಳೆ ಮಿಥಾಲಿ 10 ಸಾವಿರ ರನ್‌ ಗಡಿ ತಲುಪಿದರು. ಮೂರೂ ಮಾದರಿಯ ಕ್ರಿಕೆಟ್‌ ಪಂದ್ಯಗಳಿಂದ ಮಿಥಾಲಿ ರನ್‌ ಗಳಿಕೆ 10,001ಕ್ಕೆ ಏರಿದೆ. ಆಡಿದ ಒಟ್ಟು ಇನ್ನಿಂಗ್ಸ್‌ 291.

ಇಂಗ್ಲೆಂಡಿನ ಮಾಜಿ ನಾಯಕಿ ಚಾರ್ಲೋಟ್‌ ಎಡ್ವರ್ಡ್ಸ್‌ ಈ ಯಾದಿಯ ಮೊದಲಿಗರು. ಅವರು 316 ಇನ್ನಿಂಗ್ಸ್‌ಗಳಿಂದ 10,273 ರನ್‌ ಪೇರಿಸಿದ್ದಾರೆ.

22 ವರ್ಷಗಳ ಅನುಭವ
38 ವರ್ಷದ, ರಾಜಸ್ಥಾನ್‌ ಮೂಲದ ಮಿಥಾಲಿ ದೊರೈ ರಾಜ್‌ ಭಾರತದ ಅತ್ಯಂತ ಅನುಭವಿ ಹಾಗೂ ಹಿರಿಯ ಕ್ರಿಕೆಟ್‌ ಆಟಗಾರ್ತಿ. 1999ರಲ್ಲಿ ಐರ್ಲೆಂಡ್‌ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ್ದರು. ಕಳೆದ 22 ವರ್ಷಗಳಿಂದಲೂ ಅವರು ಜಾಗತಿಕ ಕ್ರಿಕೆಟಿನ ಸ್ಟಾರ್‌ ಆಟಗಾರ್ತಿಯಾಗಿ ಮೆರೆಯುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಥಾಲಿ 8 ಶತಕ (ಟೆಸ್ಟ್‌ನಲ್ಲಿ 1, ಏಕದಿನದಲ್ಲಿ 7), 75 ಅರ್ಧ ಶತಕ ಬಾರಿಸಿದ್ದಾರೆ (ಟೆಸ್ಟ್‌ನಲ್ಲಿ 4, ಏಕದಿನದಲ್ಲಿ 54, ಟಿ20ಯಲ್ಲಿ 17).

ಮಿಥಾಲಿ ರಾಜ್‌ ಅನಂತರದ ಸ್ಥಾನದಲ್ಲಿರುವ ಆಟಗಾರ್ತಿಯರೆಂದರೆ ನ್ಯೂಜಿಲ್ಯಾಂಡಿನ ಸುಝೀ ಬೇಟ್ಸ್‌ (7,849), ವೆಸ್ಟ್‌ ಇಂಡೀಸಿನ ಸ್ಟೆಫಾನಿ ಟೇಲರ್‌ (7,816) ಮತ್ತು ಆಸ್ಟ್ರೇಲಿಯದ ಮೆಗ್‌ ಲ್ಯಾನಿಂಗ್‌ (6,900).

ಟಾಪ್ ನ್ಯೂಸ್

ghdyt

ಉತ್ತರದ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ?  

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಗೆ ಗಾಯ : ಮೈಸೂರು KSOU ವಿವಿ ಆವರಣದಲ್ಲಿ ಘಟನೆ

ಮೈಸೂರು : ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

fgrte

ಗಡಿ ನುಸುಳಲು ಉಗ್ರರ ಯತ್ನ : ‘ಉರಿ’ಯಲ್ಲಿ ಮೊಬೈಲ್-ಇಂಟರ್ನೆಟ್ ಸೇವೆ ಸ್ಥಗಿತ

ಬಂಗಾರ ಲೇಪಿತ ಮೋದಕಕ್ಕೆ ಭಾರೀ ಬೇಡಿಕೆ ! ಒಂದು ಕೆಜಿಗೆ 12,000 ರೂ.

ಬಂಗಾರ ಲೇಪಿತ ಮೋದಕಕ್ಕೆ ಭಾರೀ ಬೇಡಿಕೆ ! ಒಂದು ಕೆಜಿಗೆ 12,000 ರೂ.

cfhdrtr

133 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ತಂಡಗಳು

ಇಂದು ಬೆಂಗಳೂರು ವರ್ಸಸ್ ಕೋಲ್ಕತ್ತಾ ಕಾಳಗ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಬೇರೆ ತಂಡದಲ್ಲಿ ಆಡುವುದನ್ನು ಯೋಚಿಸಲೂ ಸಾಧ್ಯವಿಲ್ಲ: ವಿರಾಟ್ ಕೊಹ್ಲಿ

ಬೇರೆ ತಂಡದಲ್ಲಿ ಆಡುವುದನ್ನು ಯೋಚಿಸಲೂ ಸಾಧ್ಯವಿಲ್ಲ: ವಿರಾಟ್ ಕೊಹ್ಲಿ

ಗಾಯಕಾಡ್‌, ಬ್ರಾವೋ ಆಟಕ್ಕೆ ಮಣಿದ ಮುಂಬೈ

ಗಾಯಕ್ವಾಡ್‌, ಬ್ರಾವೋ ಆಟಕ್ಕೆ ಮಣಿದ ಮುಂಬೈ

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

ghdyt

ಉತ್ತರದ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ?  

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಗೆ ಗಾಯ : ಮೈಸೂರು KSOU ವಿವಿ ಆವರಣದಲ್ಲಿ ಘಟನೆ

ಮೈಸೂರು : ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

fgrte

ಗಡಿ ನುಸುಳಲು ಉಗ್ರರ ಯತ್ನ : ‘ಉರಿ’ಯಲ್ಲಿ ಮೊಬೈಲ್-ಇಂಟರ್ನೆಟ್ ಸೇವೆ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.