ಚನ್ನಪಟ್ಟಣ ಗೊಂಬೆಗೆ ವಿಶ್ವ ಮಾನ್ಯತೆ : ಆನ್‌ಲೈನ್‌ ಮೂಲಕ ವಿಶ್ವಕ್ಕೆ ಪರಿಚಯ

Team Udayavani, Feb 28, 2021, 6:50 AM IST

ಚನ್ನಪಟ್ಟಣ ಗೊಂಬೆಗೆ ವಿಶ್ವ ಮಾನ್ಯತೆ : ಆನ್‌ಲೈನ್‌ ಮೂಲಕ ವಿಶ್ವಕ್ಕೆ ಪರಿಚಯ

ಚನ್ನಪಟ್ಟಣ: ಪಾರಂಪರಿಕ ಗೊಂಬೆ ಉದ್ಯಮದಲ್ಲಿ ಹೊಸ ಆಲೋಚನೆ, ಹೊಸತನವನ್ನು ಅಳವಡಿಸಿಕೊಂಡು ವಿಶ್ವದ ಮಕ್ಕಳನ್ನು ಸೆಳೆಯುವ ಗೊಂಬೆಗಳನ್ನು ಆವಿಷ್ಕರಿಸುವಂತೆ ಪ್ರಧಾನಿ ಮೋದಿ ಗೊಂಬೆ ತಯಾರಕರಿಗೆ ಸಲಹೆ ನೀಡಿದ್ದಾರೆ.
ಆತ್ಮನಿರ್ಭರ ಭಾರತ ಯೋಜನೆಯಡಿ ಶನಿವಾರ ಆರಂಭವಾದ “ದಿ ಇಂಡಿಯಾ ಟಾಯ್ಸ್ ಫೇರ್‌ 2021′ ವರ್ಚುವಲ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಚನ್ನಪಟ್ಟಣವೂ ಸೇರಿದಂತೆ ದೇಶದ ಗೊಂಬೆ ತಯಾರಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಚನ್ನಪಟ್ಟಣದ ಗೊಂಬೆಗಳನ್ನು ಕೇವಲ ಆ ಕ್ಷೇತ್ರ, ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳಿಸದೆ ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಭರವಸೆ ನೀಡಿರುವ ಮೋದಿ, ಈ ನಿಟ್ಟಿನಲ್ಲಿ ಬೆಂಗಳೂರಿನ ಐಟಿ ಉದ್ಯಮಿಗಳು ಮತ್ತು ಸ್ಟಾರ್ಟ್‌ ಅಪ್‌ಗ್ಳ ಜತೆ ಕರಕುಶಲಕರ್ಮಿಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರಕಾರದ ಜತೆ ಚರ್ಚಿಸಿ ಮುನ್ನಡೆಯುತ್ತೇವೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಖುದ್ದು ನಿಗಾ ವಹಿಸಲಿದೆ ಎಂದಿದ್ದಾರೆ.

ಸ್ಪರ್ಧೆ ಆಯೋಜಿಸಿ
ಚನ್ನಪಟ್ಟಣದಲ್ಲಿ ಗೊಂಬೆ ಉದ್ಯಮದಲ್ಲಿ ತೊಡಗಿರುವ 2 ಸಾವಿರ ಮಂದಿಗೆ ಒಂದು ಸ್ಪರ್ಧೆ ಆಯೋಜಿಸಬೇಕು. ಯಾರು ಹೊಸ ವಿಧಾನದಲ್ಲಿ ಗೊಂಬೆ ಉತ್ಪಾದನೆ ಮಾಡುತ್ತಾರೆಯೋ ಅವರಿಗೆ ಬಹುಮಾನ ನೀಡುವ ಮೂಲಕ ಹೊಸ ಪ್ರಯತ್ನಗಳು ಮಾರುಕಟ್ಟೆಗೆ ಬರುವಂತೆ ಮಾಡಿ ಎಂದು ಮೋದಿ ಸಲಹೆ ನೀಡಿದರು.

ಹೊಸ ಗೊಂಬೆಗಳ ಆವಿಷ್ಕಾರ
ಗೊಂಬೆ ಉದ್ಯಮವನ್ನು ಇ-ಮಾರುಕಟ್ಟೆ ಮುಖಾಂತರ ವಿಶ್ವಕ್ಕೆ ತಲುಪಿಸಬೇಕೆನ್ನುವ ಆಲೋಚನೆಯನ್ನು ಮಾಡಿದ್ದೀರಾ ಎಂದು ಪ್ರಧಾನಿ ಪ್ರಶ್ನಿಸಿದರು. ಹೊಸ ಮಾದರಿಯ ಗೊಂಬೆಗಳ ಆವಿಷ್ಕಾರ ಆಗಬೇಕಿದೆ ಎಂದು ಹುರಿದುಂಬಿಸಿದರು.

ಹೊಸ ಆವಿಷ್ಕಾರ ಮಾಡುತ್ತೇವೆ
ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಪ್ರಧಾನಿಗೆ ವಿವರ ನೀಡಿದ ಪ್ರತಿನಿಧಿ ಕೌಸರ್‌ ಪಾಷಾ, ಚನ್ನಪಟ್ಟಣದಲ್ಲಿ ಸುಮಾರು 2 ಸಾವಿರ ಕರಕುಶಲ ಕರ್ಮಿಗಳು 200 ವರ್ಷಗಳಿಂದ ಗೊಂಬೆ ತಯಾರಿಯಲ್ಲಿ ತೊಡಗಿದ್ದಾರೆ. ಈ ಬೊಂಬೆಗಳು ರಾಸಾಯನಿಕಗಳನ್ನು ಬಳಸದೆ ತಯಾರಾಗುತ್ತವೆ. ಶೇ. 80ರಷ್ಟು ಮಂದಿ ಪುರುಷರು, ಶೇ. 20ರಷ್ಟು ಮಹಿಳೆಯರು ಈ ಉದ್ಯಮದಲ್ಲಿದ್ದಾರೆ. ಈಗ ಕೇಂದ್ರ ಸರಕಾರ ನಮ್ಮ ಬೆಂಬಲಕ್ಕೆ ನಿಂತಿರುವುದು ಹೊಸ ಭರವಸೆ ಮೂಡಿಸಿದೆ ಎಂದರು.

ಟಾಪ್ ನ್ಯೂಸ್

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.