ಸಿದ್ದರಾಮಯ್ಯಗೆ ಸವಾಲು ಹಾಕಿದ ಯಡಿಯೂರಪ್ಪ
ಬರುವ ಚುನಾವಣೆಯಲ್ಲಿ ನಾವು 135 ಸ್ಥಾನ ಗೆಲ್ಲುತ್ತೇವೆ
Team Udayavani, Mar 8, 2021, 5:39 PM IST
ಬೆಂಗಳೂರು : ನಾನು ಸಿದ್ದರಾಮಯ್ಯಗೆ ಸವಾಲು ಹಾಕ್ತೇನೆ. ಬರುವ ಚುನಾವಣೆ ಯಲ್ಲಿ ನಾವು 135 ಸ್ಥಾನ ಗೆದ್ದು, ಸಿದ್ದರಾಮಯ್ಯರನ್ನು ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ. ಇಲ್ಲ ಅಂದರೆ ನೀವು ನನ್ನನ್ನು ಯಡಿಯೂರಪ್ಪ ಅಂತಾ ಕರೀಬೇಡಿ ಎಂದು ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.
ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಬಾಯ್ಕಾಟ್ ಹಿನ್ನೆಲೆ ಮಾತನಾಡಿದ ಸಿಎಂ, ದೇಶದಲ್ಲಿ ಯಾವುದಾದರೂ ವಿರೋಧ ಪಕ್ಷ ಬಜೆಟ್ ಮಂಡನೆ ವೇಳೆ ಬಾಯ್ಕಾಟ್ ಮಾಡಿರುವ ಉದಾಹರಣೆ ಇದೆಯಾ..? ಏನು ನೈತಿಕತೆ ಅಂತಾ ಅವ್ರು ಪ್ರಶ್ನೆ ಮಾಡೋದು.. ಅವರ ತಲೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.