ಕೋವಿಡ್ ಎಫೆಕ್ಟ್: ದೆಹಲಿಯಲ್ಲಿ ಯೆಲ್ಲೋ ಅಲರ್ಟ್-ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ಬಂದ್
ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
Team Udayavani, Dec 28, 2021, 4:17 PM IST
ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದ್ದು, ಶ್ರೇಣಿಕೃತ ಪ್ರತಿಕ್ರಿಯೆ ಕಾರ್ಯಾಚರಣೆ ಯೋಜನೆ(ಜಿಆರ್ ಎಪಿ) ಅಡಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ(ಡಿಸೆಂಬರ್ 28) ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಭೀತಿ: ಚಿತ್ರ ಬಿಡುಗಡೆಯನ್ನು ಮುಂದೂಡಿದ ಶಾಹಿದ್ ಕಪೂರ್
ಕಳೆದ ಕೆಲವು ದಿನಗಳಿಂದ ರಾಜಧಾನಿಯಲ್ಲಿ ಕೋವಿಡ್ 19 ಪಾಸಿಟಿವಿಟಿ ದರ ಶೇ.0.5ಕ್ಕಿಂತ ಹೆಚ್ಚಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಮುಂದಿನ ಆದೇಶದವರೆಗೆ ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ತೆರೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದು, ದೆಹಲಿಯಲ್ಲಿ ಯಾವುದಕ್ಕೆ ನಿರ್ಬಂಧ, ಯಾವುದಕ್ಕೆ ಅನುಮತಿ ನೀಡಲಾಗಿದೆ ಎಂಬ ವಿವರ ಇಲ್ಲಿದೆ…
- ಶಾಪಿಂಗ್ ಕಾಂಪ್ಲೆಕ್ಸ್, ಅಂಗಡಿಗಳನ್ನು ದಿನ ಬಿಟ್ಟು, ದಿನ ತೆರೆಯಲು ಅವಕಾಶ. ಬೆಳಗ್ಗೆ 10ರಿಂದ ರಾತ್ರಿ 8ಗಂಟೆವರೆಗೆ ವ್ಯವಹಾರ ನಡೆಸಲು ಮಾತ್ರ ಅನುಮತಿ.
- ವಾರದ ಸಂತೆಯಲ್ಲಿ ಶೇ.50ರಷ್ಟು ಮಾರಾಟಗಾರರಿಗೆ ಮಾತ್ರ ಅವಕಾಶ.
- ರೆಸ್ಟೋರೆಂಟ್ ಗಳು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆಯೊಂದಿಗೆ ತೆರೆಯಲು ಅನುಮತಿ
- ಬಾರ್ ಗಳು ಕೂಡಾ ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ತೆರೆಯಲು ಅವಕಾಶ.
- ಸಿನಿಮಾ ಹಾಲ್, ಬ್ಯಾಂಕ್ವೆಟ್ ಹಾಲ್ ಗಳು, ಸ್ಪಾ, ಜಿಮ್ಸ್, ಔಟ್ ಡೋರ್ ಯೋಗ ಚಟುವಟಿಕೆ, ಈಜುಕೊಳ, ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಬಂದ್.
- ಖಾಸಗಿ ಕಚೇರಿಗಳು ಶೇ.50ರಷ್ಟು ಸಿಬಂದಿಗಳೊಂದಿಗೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅತ್ತೆ, ಸೊಸೆ ಶವ ಪತ್ತೆ : ದರೋಡೆಕೋರರ ಕೈವಾಡ ಶಂಕೆ ?
ಭಾರತದಲ್ಲಿ 24 ಗಂಟೆಯಲ್ಲಿ 8,813 ಕೋವಿಡ್ ಸೋಂಕು ಪ್ರಕರಣ ಪತ್ತೆ, 29 ಮಂದಿ ಸಾವು
ಬಿಹಾರ ಸಂಪುಟ ಇಂದು ವಿಸ್ತರಣೆ: ನಿತೀಶ್ ಸರ್ಕಾರದಲ್ಲಿ ಲಾಲೂ ಪಕ್ಷದವರದ್ದೇ ರಾಜ್ಯಭಾರ
ಮನೆಯೊಳಕ್ಕೆ ನುಗ್ಗಿದ ಟ್ರಕ್ : ನಿವೃತ್ತ ಸಬ್ಇನ್ಸ್ಪೆಕ್ಟರ್, ಪತ್ನಿ ಸೇರಿ ನಾಲ್ವರ ಸಾವು
ಭಾರತದ 8 ಕಂಪೆನಿಗಳಿಂದ 3 ಲಕ್ಷ ಮಂದಿಗೆ ಉದ್ಯೋಗ