ಅಂತರ್ ಧರ್ಮೀಯ ವಿವಾಹ ಪ್ರೋತ್ಸಾಹ ನಿಯಮ ರದ್ದು ಮಾಡಲು ಉ.ಪ್ರ. ಸರ್ಕಾರ ಚಿಂತನೆ
Team Udayavani, Dec 2, 2020, 7:00 PM IST
ಲಕ್ನೋ: ಲವ್ ಜಿಹಾದ್ ನಿಯಂತ್ರಣಕ್ಕೆ ಸುಗ್ರಿವಾಜ್ಞೆ ಜಾರಿಗೊಳಿಸಿದ ಬಳಿಕ ಉತ್ತರ ಪ್ರದೇಶ ಸರ್ಕಾರ ಮತ್ತೊಂದು ಕ್ರಮ ಕೈಗೊಳ್ಳಲಿದೆ. ಅಂತರ್ ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ನೀಡುವ ಯೋಜನೆ ರದ್ದು ಮಾಡಲು ತೀರ್ಮಾನಿಸಿದೆ. 44 ವರ್ಷಗಳಿಂದ ಅದು ಜಾರಿಯಲ್ಲಿದೆ. 1976ರಿಂದ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹವಾಗುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂದಿನ ಸರ್ಕಾರ ಜಾರಿಗೊಳಿಸಿತ್ತು.
ಉತ್ತರ ಪ್ರದೇಶ ಸರ್ಕಾರದ ರಾಷ್ಟ್ರೀಯ ಏಕತೆಯ ವಿಭಾಗ ಅದನ್ನು ಜಾರಿಗೊಳಿಸಿತ್ತು. ಕಳೆದ ವರ್ಷ 11 ಮಂದಿ ಅಂತರ್ ಧರ್ಮೀಯ ಮತ್ತು ಅಂತರ್ ಜಾತಿಯ ವಿವಾಹವಾಗಿದ್ದರು. ಅವರಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಕ ಧನ ನೀಡಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಡ್ರಗ್ಸ್ ಜಾಲದ ಪ್ರಕರಣ: ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಗೆ ಜಾಮೀನು ಮಂಜೂರು
ಪ್ರಸಕ್ತ ವರ್ಷ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದರೂ, ಅದಕ್ಕೆ ಮೊತ್ತ ಬಿಡುಗಡೆ ಮಾಡಿಲ್ಲ. ಈ ನಿಯಮದ ವ್ಯಾಪ್ತಿಯಲ್ಲಿ ಮದುವೆಯಾದವರು ಮತಾಂತರಗೊಳ್ಳುವಂತಿಲ್ಲ. ಒಂದು ವೇಳೆ ಆ ರೀತಿ ಏನಾದರೂ ಆದರೆ ನಿಯಮದ ಅನ್ವಯ ಪ್ರೋತ್ಸಾಹ ಧನ ಪಡೆಯುವುದರಿಂತ ವಂಚಿತರಾಗುತ್ತಾರೆ ಎಂದು 2017ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ತಂದಿತ್ತು. ಉತ್ತರಾಖಂಡ ಸರ್ಕಾರ ಕೂಡ ಅಂಥ ನಿಯಮ ರದ್ದು ಮಾಡಲು ತೀರ್ಮಾನಿಸಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬೈ : ಬಾಯ್ಫ್ರೆಂಡ್ ಜತೆ ಪತ್ನಿ ಪರಾರಿ: ಪತಿ ದೂರು
ಅತ್ಯಾಚಾರ ಆರೋಪ: ಧನಂಜಯ್ ಮುಂಡೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಸ್ವಾಸ್ ಮೇಲೆ ಹಲ್ಲೆ; 12 ಗಂಟೆ ಕಾಲ ತ್ರಿಪುರಾ ಬಂದ್ ಗೆ ಕರೆ
ಅಧಿಕಾರಿಗೆ ಸಡ್ಡು; ನಂದಿಗ್ರಾಮ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ: ಮಮತಾ ಬ್ಯಾನರ್ಜಿ ಸವಾಲು
ಅಹಮದಾಬಾದ್, ಸೂರತ್ ನಗರಕ್ಕೆ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ