ರೋಷನ್ ಬೇಗ್ ರದ್ದು ಟೀಸರ್ , ಸಿನಿಮಾ 23 ಕ್ಕೆ; ಆರ್.ಅಶೋಕ್ ಲೇವಡಿ
ಕಾಂಗ್ರೆಸ್ ನಡೆ ರೆಸಾರ್ಟ್ ಕಡೆ..ಓಡು,ಓಡು.ಓಡಲೇ...
Team Udayavani, May 21, 2019, 3:19 PM IST
ಬೆಂಗಳೂರು: ಕಾಂಗ್ರೆಸ್ನ ಹಿರಿಯ ನಾಯಕರ ರೋಷನ್ ಬೇಗ್ ಅವರು ಇಂದು ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಸಿನಿಮಾ ಮೇ 23 ಕ್ಕೆ ಬಿಡುಗಡೆ ಆಗಲಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಅವರು ಲೇವಡಿ ಮಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಅಲ್ಪಸಂಖ್ಯಾತ ಸಮುದಾಯದ ಹಿರಿಯ ಸಚಿವಬಿಡುಗಡೆ ಮಾಡಿರುವುದು ಟೀಸರ್. ಕಾಂಗ್ರೆಸ್ ಹಿರೋ ಇಲ್ಲದ ಪಾರ್ಟಿ, ಅಲ್ಲಿ ಬರೀ ವಿಲನ್ಗಳೇ ತುಂಬಿದ್ದಾರೆ. ಸಿದ್ದರಾಮಯ್ಯ ಮುಖ್ಯ ಖಳನಾಯಕ, ದಿನೇಶ್ ಗುಂಡೂರಾವ್ ಸಹ ಖಳ ನಾಯಕ, ಇನ್ ಚಾರ್ಜ್ ಕೆ.ಸಿ ವೇಣುಗೋಪಾಲ್ ಕಾಮೆಡಿಯನ್ ಜೋಕರ್ ಎಂದು ಬೇಗ್ ಹೇಳಿದ್ದಾರೆಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಇರಲು ಬಿಡಿ , ನೋಡಲು ಇಷ್ಟವಿಲ್ಲದ ಶಾಸಕರು ಕಾಂಗ್ರೆಸ್ನಲ್ಲಿ ಇದ್ದಾರೆ ಎಂದರು.
ಮೇ 23 ಕಾಂಗ್ರೆಸ್ನವರಿಗೆ ಓಡು, ಓಡು, ಓಡು…ಎಂದು ರೆಸಾರ್ಟ್ ಕಡೆ ಕಾಂಗ್ರೆಸ್ನವರ ನಡೆ ಆಗುತ್ತದೆ ಎಂದರು. ಮಂಡ್ಯ, ತುಮಕೂರು ಫಲಿತಾಂಶದ ಬಳಿಕ ಸರ್ಕಾರದಲ್ಲಿ ಭೂಕಂಪ ಆಗಲಿದೆ, ಮೈತ್ರಿ ಸರ್ಕಾರವೆಂಬ ಮನೆ ಬೀಳಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?