ಆತ್ಮಹತ್ಯೆಗೆ ಪ್ರಚೋದನೆ: ಆರೋಪಿ ಬಂಧನ
Team Udayavani, Jul 7, 2022, 6:01 PM IST
ಕುಂಬಳೆ: ಕಳೆದ ಮಾ. 30ರಂದು ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನದಂದು ಆದೂರು ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ 15ರ ಹರೆಯದ ವಿದ್ಯಾರ್ಥಿನಿ ಮನೆಯೊಳಗೆ ನೇಣಿಗೆ ಶರಣಾಗಿದ್ದಳು.
ಈಕೆಯನ್ನು ಓರ್ವ ನಿರಂತರವಾಗಿ ಹಿಂಬಾಲಿಸಿ ಬೆದರಿಕೆ ಒಡ್ಡುತ್ತಿರುವುದಾಗಿ ವಿದ್ಯಾರ್ಥಿನಿಯ ಸಹೋದರ ದೂರು ಸಲ್ಲಿಸಿದ್ದರು.
ಆದೂರು ಪೊಲೀಸರು ಬಾಲಕಿಯ ಸಹಪಾಟಿಗಳನ್ನು ಮತ್ತು ಸಹೋದರಿಯರನ್ನು ತನಿಖೆ ನಡೆಸಿ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಬಳಿಕ ನೆಕ್ರಾಜೆ ಆರ್ತಿಪಳ್ಳ ಮೂಲದ ಮುಳಿಯಾರು ಮೂಲಡ್ಕದ ಇರ್ಷಾದ್ (23) ಎಂಬಾತನನ್ನು ಬಂಧಿಸಿದ್ದಾರೆ.
ಈತನ ವಿರುದ್ಧ ಆದೂರು ಪೊಲೀಸರು ಪೋಕ್ಸೋ ಕಾಯ್ದೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಕಾಯ್ದೆಯಡಿ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ವಿಕೃತಿ ಮೆರೆಯಲು ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ
ಯುವಕನನ್ನು ಕೊಂದು ಮೃತದೇಹವನ್ನು ಫ್ಲ್ಯಾಟ್ನಲ್ಲಿ ಬಚ್ಚಿಟ್ಟ ಪ್ರಕರಣ: ಇಬ್ಬರ ಬಂಧನ
ಮಡಿಕೇರಿ; ದೇಶ ಕಾಯುವವನ ಹೆತ್ತವರಿಗೇ ರಕ್ಷಣೆ ಇಲ್ಲ!
ಪ್ರೇಮ ಪ್ರಕರಣ; ತಿರುಗಲು ಬಂದ ವಿದ್ಯಾರ್ಥಿ- ವಿದ್ಯಾರ್ಥಿನಿಗೆ ಚೂರಿ ಇರಿತ: ಆರೋಪಿ ವಶಕ್ಕೆ
ಮಡಿಕೇರಿ: ಮರ ಬಿದ್ದು ವ್ಯಕ್ತಿ ಸಾವು