Udayavni Special

ಅಭೀಷ್ಟ ಈಡೇರುವ ಕೇಂದ್ರವಾಗಲಿ: ಎಡನೀರುಶ್ರೀ

Team Udayavani, Mar 10, 2019, 1:00 AM IST

abista.jpg

ಕಾಸರಗೋಡು: ಭಗವದ್ಭಕ್ತರ ನಿಧಿ ಸಂತರ್ಪಣೆಯ ಫಲಶ್ರುತಿಯೇ ಅತ್ಯಂತ ತ್ವರಿತಗತಿಯಲ್ಲಿ ಈ ಕ್ಷೇತ್ರ ಎದ್ದು ನಿಲ್ಲಲು ಪ್ರಧಾನ ಕಾರಣ. ಸಂಪತ್ತಿನ ಸದ್ವಿನಿಯೋಗವಾದಾಗ ಅದರ ಸಹಸ್ರ ಪಾಲು ಅನುಗ್ರಹ ನಮಗೆ ಪ್ರಾಪ್ತವಾಗುತ್ತದೆ. ಇದುವೇ ನಮ್ಮೆಲ್ಲರ ಜೀವನದ ಔನ್ನತ್ಯಕ್ಕೆ ಕಾರಣ. ಶ್ರಮ ಮತ್ತು ದಾನ ಇದು ಇಲ್ಲಿನ ಶಿವ ಭಕ್ತರು ನೀಡಿದ ಮಹತ್ತರ ಕೊಡುಗೆ. ಅಹರ್ನಿಶಿ ದುಡಿದ ಎಲ್ಲರನ್ನೂ ಶ್ರೀ ಸ್ವಾಮಿ ಅನುಗ್ರಹಿಸಲಿ. ಭಕ್ತರ ಅಭೀಷ್ಟಗಳನ್ನು ಅನುಗ್ರಹಿಸುವ ದಿವ್ಯ ಕೇಂದ್ರವಾಗಿ ಮಲ್ಲಿಕಾರ್ಜುನ ಕ್ಷೇತ್ರ ಮೂಡಿ ಬರಲಿ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ನುಡಿದರು.

ಕಾಸರಗೋಡು ನಗರದ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನವಿತ್ತರು. ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ|ಅನಂತ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶ್ಯಾಮ ಭಟ್‌, ಹಿರಣ್ಯ ವೆಂಕಟೇಶ್ವÌರ ಭಟ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯನಿರ್ವಹಣಾಧಿಕಾರಿ ಎಂ. ಬಾಬು, ಉದ್ಯಮಿ ಗಿರಿಧರ ಕಾಮತ್‌, ಡಾ| ಕೃಷ್ಣ ಭಟ್‌, ನ್ಯಾಯವಾದಿ ಸದಾನಂದ ರೈ, ಕಾಸರಗೋಡು ನಗರಸಭಾ ಸದಸ್ಯರಾದ ಸಂಧ್ಯಾ ವಿ.ಶೆಟ್ಟಿ, ಜಾಹ್ನವಿ, ಮಧೂರು ದೇವಸ್ಥಾನದ ಅರ್ಚಕರಾದ ಶ್ರೀಕೃಷ್ಣ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಂ ಪ್ರಸಾದ್‌, ಜತೆ ಕಾರ್ಯದರ್ಶಿ ವೆಂಕಟ್ರಮಣ ಹೊಳ್ಳ, ಅಧ್ಯಕ್ಷ ಸಿ.ವಿ.ಪೊದುವಾಳ್‌  ಉಪಸ್ಥಿತರಿದ್ದರು.
ವಾಸ್ತು ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ, ಶಿಲ್ಪಿ ಅಣ್ಣಪ್ಪ ಕಾರ್ಕಳ, ಶಿಲ್ಪಿ ಉದಯ ಆಚಾರಿ, ಶ್ರೀ ಕ್ಷೇತ್ರದ ಮಾಜಿ ಪ್ರಧಾನ ಅರ್ಚಕ ರಾಧಾಕೃಷ್ಣ ಅಡಿಗ ಅವರನ್ನು ಗೌರವಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳೀಧರನ್‌ ಸ್ವಾಗತಿಸಿದರು. ಉಪಾಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ದೇವದಾಸ್‌ ನುಳ್ಳಿಪ್ಪಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.
ಪೂರ್ಣಕುಂಭ ಸ್ವಾಗತ:
ಕೇಶವಾನಂದ ಭಾರತೀ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಮಾ.9 ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಬಿಂಬ ಶುದ್ಧಿ, ಕಲಶ ಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ರಾತ್ರಿ ದುರ್ಗಾ ನಮಸ್ಕಾರ ಪೂಜೆ, ಅಂಕುರ ಪೂಜೆ, ರಾತ್ರಿ ಪೂಜೆ, ವಿವಿಧ ಭಜನಾ ಸಂಸ್ಥೆಗಳಿಂದ ಭಜನೆ, ಶಾಸ್ತಿÅàಯ ಸಂಗೀತ, ಹರಿಕಥೆ, ಧಾರ್ಮಿಕ ಸಭೆ,  ‌ “ಕುಂಭಕರ್ಣನ್‌’ ನಾಟಕ ಪ್ರದರ್ಶನಗೊಂಡಿತು.

ಇಂದಿನ ಕಾರ್ಯಕ್ರಮ 
ಬೆಳಗ್ಗೆ 6 ಕ್ಕೆ ಗಣಪತಿ ಹೋಮ, ಅಂಕುರ ಪೂಜೆ, ಚೋರ ಶಾಂತಿ ಹೋಮ, ಸ್ವಶಾಂತಿ ಹೋಮ, ಶ್ವಾನ ಶಾಂತಿ ಹೋಮ, ಖನನಾದಿ ಸಪ್ತಶುದ್ಧಿ, ಅದ್ಭುತ ಶಾಂತಿಹೋಮ, ಹೋಮ ಕಲಶಾಭಿಷೇಕ, 8 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, 11 ಕ್ಕೆ ಶಾಸ್ತಿÅàಯ ಸಂಗೀತ, ಮಧ್ಯಾಹ್ನ 12.30 ಕ್ಕೆ ಯೋಗ ಪ್ರದರ್ಶನ, 1.30 ಕ್ಕೆ ಕೀಬೋರ್ಡ್‌ ಸಂಗೀತ ಸುಧಾ, ಸಂಜೆ 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30 ಕ್ಕೆ ನಾಟ್ಯ ಸಮನ್ವಿತಂ ನಡೆಯಲಿದೆ.

ಟಾಪ್ ನ್ಯೂಸ್

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

Untitled-1

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಆಸ್ಟ್ರೇಲಿಯದ ವೇಗಿ ಜೇಮ್ಸ್‌ ಪ್ಯಾಟಿನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ

ಆಸ್ಟ್ರೇಲಿಯದ ವೇಗಿ ಜೇಮ್ಸ್‌ ಪ್ಯಾಟಿನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.