
ಏಡ್ಸ್ ದಿನಾಚರಣೆ : ಕಿರುಚಿತ್ರ ಬಿಡುಗಡೆ
Team Udayavani, Dec 2, 2020, 11:32 PM IST

ಆರೋಗ್ಯ ಇಲಾಖೆ ಸಿದ್ಧಪಡಿಸಿದ ಕಿರುಚಿತ್ರವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸಿದರು.
ಕಾಸರಗೋಡು: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಇಲಾಖೆ ಸಿದ್ಧಪಡಿಸಿದ ಜನಜಾಗೃತಿ ಕಿರುಚಿತ್ರವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅವರಿಗೆ ಸಿಡಿ ಹಸ್ತಾಂತರಿಸಿದರು.
ಜಿಲ್ಲೆಯ ಆರೋಗ್ಯ ಕಾರ್ಯಕರ್ತರು ಈ 13 ನಿಮಿಷ ಅವಧಿಯ ಕಿರುಚಿತ್ರವನ್ನು ಸಿದ್ಧಪಡಿಸಿ, ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರತೀಶ್ ಕಂಡಿಯೂರು ಕಥೆ, ಚಿತ್ರಕಥೆ, ನಿರ್ದೇಶನ ನಡೆಸಿದ್ದಾರೆ, ಶಾಫಿ ಪೈಕ ಛಾಯಾಗ್ರಹಣ ನಡೆಸಿದ್ದಾರೆ.
ಟಾಪ್ ನ್ಯೂಸ್
