Udayavni Special

ಆ.18: ವಿಧಾನಸೌಧದ ಮುಂಭಾಗ ಕಾಸರಗೋಡು ಕನ್ನಡಿಗರ ಧರಣಿ 

Team Udayavani, Jul 29, 2018, 6:00 AM IST

28ksde17.jpg

ಕಾಸರಗೋಡು: ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ನೋವಿನ ಬಗ್ಗೆ ಕರ್ನಾಟಕ ಸರಕಾರ ಕೇವಲ ಹೇಳಿಕೆಗಳ ಮೂಲಕ ಸಾಂತ್ವನ ಮಾಡುವುದನ್ನು ಕೈಬಿಟ್ಟು ಪ್ರತ್ಯಕ್ಷವಾಗಿ ಪ್ರತಿಕ್ರಿಯಿಸುವಂತ ತುರ್ತು ಕೆಲಸ ಆಗಬೇಕಾಗಿದೆ ಎಂದು ಕನ್ನಡ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಭಾಷಾ ಅಲ್ಪಸಂಖ್ಯಾಕ ಪ್ರದೇಶ ಕಾಸರಗೋಡಿನಲ್ಲಿ ಒಂದರಿಂದ ಹತ್ತನೇ ತರಗತಿ ತನಕ ಕನ್ನಡ ವಿದ್ಯಾರ್ಥಿಗಳು ಮಲಯಾಳ ಕಡ್ಡಾಯ ಕಲಿಯಬೇಕೆಂಬ ನೀತಿಯನ್ನು ಪ್ರತಿಭಟಿಸಿ ಹಾಗೂ ಕನ್ನಡಿಗರ ಇನ್ನಿತರ ಸವಲತ್ತುಗಳನ್ನು ಕೇರಳ ಸರಕಾರ ಕಸಿದು ಕೊಳ್ಳುವುದನ್ನು ವಿರೋಧಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕರ್ನಾಟಕದ ಕನ್ನಡಿಗರ ಬೆಂಬಲ ಪಡೆಯಲು ಜರಗಿದ ಪತ್ರಿಕಾಗೋಷ್ಠಿಯಲ್ಲಿ ವಾಟಾಳ್‌ ನಾಗರಾಜ್‌ ಮೇಲಿನಂತೆ ತಿಳಿಸಿದರು. 

ಈ ಕುರಿತು ಕರ್ನಾಟಕ ಸಚಿವರು,ಸಂಸದರು,ಶಾಸಕರು ಯಾವುದೇ ಮುತುವರ್ಜಿ ವಹಿಸದಿರುವುದು ಖೇದಕರವಾಗಿದೆ. ಶೀಘ್ರ ದಲ್ಲಿಯೇ ಕೇರಳ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟ್ರಪತಿಯವರಿಗೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳನ್ನು ಮನವರಿಕೆ ಮಾಡಲು ಕರ್ನಾಟಕದಿಂದ ಸರ್ವಪಕ್ಷ ನಿಯೋಗ ಹೋಗಬೇಕೆಂದು ಅವರು ಒತ್ತಾಯಿಸಿದರು.ಈ ಬಗ್ಗೆ ಆಗಸ್ಟ್‌ 18 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರು ವಿಧಾನಸೌಧದ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನಾ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಬೃಹತ್‌ ಪ್ರತಿಭಟನೆ 
ಕಾಸರಗೋಡು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ಕಾಸರಗೋಡು ಕನ್ನಡಿಗರು ಮತ್ತು ಕನ್ನಡ ಮುಖಂಡರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಜರಗಲಿದೆ ಎಂದ ವರು ತಿಳಿಸಿದರು.

ಕನ್ನಡ ಸೇನೆಯ ಮುಖಂಡ ರವಿ ಕುಮಾರ್‌ ಬೆಂಗಳೂರು, ಕನ್ನಡ ಹೋರಾಟ ಸಮಿತಿಯ ಮುಖಂಡರಾದ ಭಾಸ್ಕರ ಕಾಸರಗೋಡು,ಮಹಾಲಿಂಗೇಶ್ವರ ಭಟ್‌, ಶಿವರಾಮ ಕಾಸರಗೋಡು,ಗುರುಪ್ರಸಾದ್‌ ಕೋಟೆಕಣಿ, ಸತ್ಯನಾರಾಯಣ ಕಾಸರ ಗೋಡು, ಶ್ರೀಕಾಂತ್‌ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.
 
ಟಾಪ್ ನ್ಯೂಸ್

hfhtyt

‘RSS ಕ್ಯಾನ್ಸರ್​ ಇದ್ದಂತೆ’ ಎಂದ ಜಾವೇದ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ  

ಸಚಿವ ಆರ್.ಅಶೋಕ್

ಕಾಂಗ್ರೆಸ್ ನದ್ದು ಜಾತಿ ಲೆಕ್ಕಾಚಾರ, ನಮ್ಮದು ಜಾತಿ ಇಲ್ಲದ ರಾಜಕಾರಣ: ಅಶೋಕ್

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

fghtry5rt

ಕೇಕ್ ಕತ್ತರಿಸುತ್ತಿದ್ದ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ | ವಿಡಿಯೋ  

Untitled-1

ಕಾಫಿಗೂ ಬಂತು ಸ್ನಾತಕೋತ್ತರ ಪದವಿ!

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

sfsdfer4e

ಮತ್ತೆ ಬಣ್ಣ ಹಚ್ಚುವ ಸುಳಿವು ನೀಡಿದ ಮೋಹಕ ತಾರೆ ರಮ್ಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಮುಖಂಡ ಸುರೇಂದ್ರನ್‌ ವಿಚಾರಣೆ

ಬಿಜೆಪಿ ಮುಖಂಡ ಸುರೇಂದ್ರನ್‌ ವಿಚಾರಣೆ

ನಾರಾಯಣ ದೇಲಂಪಾಡಿ  ಕೇರಳ ರಾಜ್ಯ ಶ್ರೇಷ್ಠ ಶಿಕ್ಷಕ

ನಾರಾಯಣ ದೇಲಂಪಾಡಿ  ಕೇರಳ ರಾಜ್ಯ ಶ್ರೇಷ್ಠ ಶಿಕ್ಷಕ

ಕಾಸರಗೋಡು ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್‌ ಝೋನ್ : ಜಿಲ್ಲಾಧಿಕಾರಿ

ಕಾಸರಗೋಡು ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್‌ ಝೋನ್ : ಜಿಲ್ಲಾಧಿಕಾರಿ

ಕೊನೆಗೂ ಮಗಳ ಕೈಸೇರಿತು ಅಮ್ಮನ ನೆನಪುಗಳ ಬುತ್ತಿ!

ಕೊನೆಗೂ ಮಗಳ ಕೈಸೇರಿತು ಅಮ್ಮನ ನೆನಪುಗಳ ಬುತ್ತಿ!

Untitled-1

ನೀಲಗಿರಿಯಾದ ಮಾಂದಲ್‌ ಪಟ್ಟಿ !

MUST WATCH

udayavani youtube

ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ

udayavani youtube

ಮುಸಲ್ಮಾನರೊಬ್ಬರು ಹಾಡಿದ ‘ಮಹಾಭಾರತ ಕಥಾ’..!

udayavani youtube

ಆಯುರ್ವೇದ – ಅಲೋಪತಿ ಒಂದು ಸಂಕ್ಷಿಪ್ತ ಮಾಹಿತಿ

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

ಹೊಸ ಸೇರ್ಪಡೆ

hfhtyt

‘RSS ಕ್ಯಾನ್ಸರ್​ ಇದ್ದಂತೆ’ ಎಂದ ಜಾವೇದ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ  

salamanna-620×386

ಮಳೆ ಕೊರತೆಯಿಂದ ಬಾಡಿದ ಬೆಳೆ

ಸಚಿವ ಆರ್.ಅಶೋಕ್

ಕಾಂಗ್ರೆಸ್ ನದ್ದು ಜಾತಿ ಲೆಕ್ಕಾಚಾರ, ನಮ್ಮದು ಜಾತಿ ಇಲ್ಲದ ರಾಜಕಾರಣ: ಅಶೋಕ್

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.