ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಮಹಮೂದ್‌


Team Udayavani, Mar 19, 2020, 1:54 AM IST

ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಮಹಮೂದ್‌

ಕಾಸರಗೋಡು: ಕೃಷಿ ವಲಯಕ್ಕೆ 64 ಲಕ್ಷ ರೂ., ಶಿಕ್ಷಣಕ್ಕೆ 69 ಲಕ್ಷ ರೂ., ಆರೋಗ್ಯಕ್ಕೆ 67 ಲಕ್ಷ ರೂ., ಕುಡಿಯುವ ನೀರು ಯೋಜನೆಗೆ 81 ಲಕ್ಷ ರೂ., ಶುಚಿತ್ವ ಕ್ಷೇತ್ರಕ್ಕೆ 90 ಲಕ್ಷ ರೂ. ಕಾದಿರಿಸಿ ಕಾಸರಗೋಡು ನಗರಸಭೆಯ 2020- 2021 ನೇ ಸಾಲಿನ ಮುಂಗಡ ಪತ್ರವನ್ನು ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ಎಲ್‌. ಎ. ಮಹಮೂದ್‌ ಮಂಡಿಸಿದರು.

ಮೂಲಭೂತ ಸೌಕರ್ಯ
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕಾಸರಗೋಡು ನಗರಸಭೆಯ ಹೆಚ್ಚಿನ ಎಲ್ಲ ರಸ್ತೆಗಳನ್ನು ಸಂಚಾರ ಯೋಗ್ಯಗೊಳಿಸಲಾಗಿದೆ. ಸಾರ್ವಜನಿಕರ ನಿರಂತರ ಬೇಡಿಕೆಯ ಕೆ.ಪಿ.ಆರ್‌. ರಾವ್‌ ರಸ್ತೆಯ ನಿರ್ಮಾಣವನ್ನು ಬಿ.ಎಂ.ಬಿ.ಸಿ. ವ್ಯವಸ್ಥೆಯಲ್ಲಿ ಪೂರ್ತಿಗೊಳಿಸಲಾಗಿದೆ. ನಾಯಕ್ಸ್‌ ರಸ್ತೆಯ ಬದಿಯ ಕವರಿಂಗ್‌ ಸ್ಲಾಬ್‌ ಕಾಮಗಾರಿ ಪ್ರಗತಿ ಹಂತದಲ್ಲಿದೆ.

ಲೋಕೋಪಯೋಗಿ ಇಲಾಖೆಯ ಸಹಭಾಗಿತ್ವ ದೊಂದಿಗೆ ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಆಸಕ್ತಿ ವಹಿಸಿ ಕಾರ್ಯ ಗತಗೊಳಿಸಿದ ರಸ್ತೆ ಬದಿಯ ಚರಂಡಿ, ಫುಟ್‌ಪಾತ್‌ ಎಂಬಿವುಗಳ ನಿರ್ಮಾಣ ಅಂತಿಮ ಹಂತದಲ್ಲಿದೆ. ಕೊಪ್ಪಳ ಎಸ್‌.ಸಿ. ಕಾಲನಿ ನಿವಾಸಿಗಳ ಸಂಚಾರ ಸೌಕರ್ಯಕ್ಕಾಗಿ ಕಾಲು ಸೇತುವೆಯ ನಿರ್ಮಾಣ ಪೂರ್ಣ ಗೊಳ್ಳುತ್ತಿದೆ. ತಳಂಗರೆ ಪಡಿಂಞಾರ್‌ ಉದ್ಯಾನವನದ ಎದುರು ಬದಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ ಕಾಮಗಾರಿ ನಡೆಯುತ್ತಿದೆ.

ಕಟ್ಟಡಗಳು
35 ಲಕ್ಷ ರೂ. ವೆಚ್ಚದಲ್ಲಿ ಶಿ ಲಾಡ್ಜ್ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ಮುನಿಸಿಪಲ್‌ ಕಾಂಪ್ಲೆಕ್ಸ್‌ನ ನೂತನ ಕಟ್ಟಡ ಡಿ.ಪಿ. ಆರ್‌. ಕಾರ್ಯ ಪೂರ್ಣಗೊಳಿಸ ಲಾಗಿದೆ. ಪುರಸಭೆಯ ಟೌನ್‌ ಹಾಲ್‌ ನವೀ ಕರಣ, ಅಂಗನವಾಡಿ ಕಟ್ಟಡಗಳ ದುರಸ್ತಿ, ಸಂಧ್ಯಾರಾಗಂ ತೆರೆದ ಸಭಾಂ ಗಣದ ಮೇಲ್ಛಾವಣಿ ನಿರ್ಮಾಣ, ಮೀನು ಮಾರು ಕಟ್ಟೆ ರಸ್ತೆ ನಿರ್ಮಾಣ, ರಸ್ತೆ ಬದಿ ವ್ಯಾಪಾರಿ ಗಳ ಪುನರ್ವಸತಿಗೆ ಸಂಬಂಧಿಸಿ ಕಟ್ಟಡ ನಿರ್ಮಾಣ ಅಂತಿಮ ಹಂತದಲ್ಲಿದೆ. ಸಂಸದ ರಾಜ್‌ ಮೋಹನ್‌ ಉಣ್ಣಿತ್ತಾನ್‌ ಅವರ ಸಂಸದರ ಅಭಿವೃದ್ಧಿ ನಿಧಿ ಯಿಂದ ಗಾಂಧಿ ಪ್ರತಿಮೆ ಸ್ಥಾಪಿಸಲು ಭೂಮಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಕುಟುಂಬಶ್ರೀ
ನಗರದ 38 ಎ.ಡಿ.ಎಸ್‌.ಗಳೂ, ಒಂದು ಸಿ.ಡಿ.ಎಸ್‌. ಕಾರ್ಯಾಚರಿಸುತ್ತಿವೆ. ಮಹಿಳೆಯರನ್ನು ಸಮಾಜದ ಮುಂಚೂ ಣಿಗೆ ಕರೆತರಲು ಅನೇಕ ಕಾರ್ಯಗಳನ್ನು ಪುರಸಭೆ ಜಾರಿಗೆ ತಂದಿದೆ. ಕುಟುಂಬಶ್ರೀ ಘಟಕಗಳು ಸಿದ್ಧಪಡಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು, ಸೊದ್ಯೋಗಿಗಳಿಗೆ ಅಗತ್ಯವಾದ ತರಬೇತಿಗಳನ್ನು ಹಮ್ಮಿ ಕೊಳ್ಳಲು ಸಿಟಿ ಲೈವಿÉಹುಡ್‌ ಸೆಂಟರ್‌ ಆರಂಭಿಸಲಾಗುವುದು. ಪ್ಲಾಸ್ಟಿಕ್‌ಗೆ ಬದಲಿ ಬಳಕೆ ಸಾಮಗ್ರಿ ಒದಗಿಸುವ ನಿಟ್ಟಿನಲ್ಲಿ ಬಟ್ಟೆಯ ಕೈಚೀಲ ಬಳಕೆಗೆ ಬಂದಿದೆ. ನಿರ್ಗತಿಕರ ಪುನರ್ವಸತಿಗಾಗಿ ಆರ್ಥಿಕ ಸಂಪನ್ಮೂಲವನ್ನು ಮೀಸಲಿರಿಸಲಾಗಿದೆ. ಹಸಿವುಮುಕ್ತ ಕೇರಳ ಎಂಬ ಯೋಜನೆ ಯನ್ವಯ ಕುಟುಂಬಶ್ರೀ ಸಹಕಾರ ದೊಂದಿಗೆ ಆಹಾರ ಒದಗಿಸುವ ಯೋಜನೆ ಯೊಂದನ್ನು ಮುಂದಿನ ಹಣಕಾಸು ವರ್ಷ ಜಾರಿಗೆ ತರಲಾಗುವುದು.
ಮಹಿಳೆಯರ ಸೌಕರ್ಯಕ್ಕಾಗಿರುವ ಶಿ ಲಾಡ್ಜ್ ನಿರ್ಮಾಣ ಮುಂದಿನ ವರ್ಷ ಪೂರ್ತಿಗೊಳ್ಳಲಿದೆ.

ಸಮಾಜ ಕಲ್ಯಾಣ
ನಗರದಲ್ಲಿ ಕ್ಷೇಮ ಪಿಂಚಣಿ, ವೃದ್ಧಾಪ್ಯ ವೇತನ, ವಿಧವೆ ಪಿಂಚಣಿ, ವಿಕಲ ಚೇತನರಿಗೆ ಪಿಂಚಣಿ ಎಂಬಿ ಪಿಂಚಣಿ ಗಳನ್ನು ಈ ಹಣಕಾಸು ವರ್ಷದಲ್ಲಿ ಮಂಜೂರು ಮಾಡಿ ನೀಡಲಾಗಿದೆ.

ನಗರದಲ್ಲಿ ಅರ್ಹರೆಲ್ಲರಿಗೂ ಪಿಂಚಣಿ ನೀಡಿ ಸಂಪೂರ್ಣ ಪಿಂಚಣಿದಾಯಕ ಮುನಿಸಿಪಾಲಿಟಿ ಎಂಬ ಹೆಗ್ಗಳಿಕೆ ಪಡೆಯಲು ಕಾರ್ಯಗಳನ್ನು ಮುಂಬ ರುವ ಮುಂಗಡ ಪತ್ರದಲ್ಲಿ ಆಯೋಜಿಸ ಲಾಗುವುದು. ಶಾರೀರಿಕ ಹಾಗೂ ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವವರಿಗೆ ವಿದ್ಯಾರ್ಥಿ ವೇತನ, ಸಹಾಯಕ ಉಪಕರಣಗಳನ್ನು ಒದಗಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಬಡ್ಸ್‌ ಸ್ಕೂಲ್‌ನ ಚಟುವಟಿಕೆ ಗಳನ್ನು ಉತ್ತಮ ಪಡಿಸಲು, ರೂಢಿಯಲ್ಲಿರುವ ಕಾರ್ಯ ಗಳನ್ನು ಬದಲಿಸಿ ಭೌತಿಕ ಸೌಕರ್ಯ ಗಳನ್ನು ಉತ್ತಮ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅಂಗನವಾಡಿ ಕಟ್ಟಡಗಳಿಗೆ ವಿದ್ಯುತ್‌ ಸೌಲಭ್ಯ, ಕುಡಿಯುವ ನೀರು ವ್ಯವಸ್ಥೆ ಮುಂದಿನ ವರ್ಷ ಪೂರ್ತಿಗೊಳಿಸಲಾಗುವುದು. ಅಂಗನವಾಡಿ ನಿರ್ಮಿಸಲು ಭೂಮಿಯನ್ನು ಭೂ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಪರಂಬೋಕು ಜಾಗಗಳನ್ನು ಗುರುತಿಸಲೂ ದಾನಿಗಳಿಂದ ಭೂಮಿಯನ್ನು ಉಚಿತವಾಗಿ ಸ್ವೀಕರಿಸಿಯೂ ಕಟ್ಟಡ ನಿರ್ಮಾಣ ಯೋಜನೆ ಜಾರಿಗೊಳಿಸಲಾಗುವುದು. ಪೂರಕ ಪೌಷ್ಟಿಕ ಆಹಾರ ಒದಗಿಸಲು ಹೆಚ್ಚಿನ ಮೊತ್ತ ಮೀಸಲಿ ರಿಸಲು, ಪಾಲಿಯೇಟಿವ್‌ ಕೇರ್‌ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಎದ್ದೇಳಲಾಗದೆ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಸೌಕರ್ಯ ಒದಗಿಸಲು ಉದ್ದೇಶಿಸಲಾಗಿದೆ. ಅಂಗನವಾಡಿಗಳಿಗೆ ಭೌತಿಕ ಹಿನ್ನೆಲೆ ಸೌಕರ್ಯ ಉತ್ತಮ ಪಡಿಸಲು ಉಪಕರಣಗಳನ್ನು ನೀಡಲಾಗುವುದು.

ಆರೋಗ್ಯ
ಆರೋಗ್ಯ ವಲಯದ ಸಮಗ್ರವಾದ ಉನ್ನತಿಯನ್ನು ಗುರಿಯಾಗಿರಿಸಿಕೊಂಡು ಅನೇಕ ಕಾರ್ಯಗಳನ್ನು ಪುರಸಭೆ ಕೈಗೊಂಡಿದೆ. ಹೋಮಿಯೋ, ಆಯುರ್ವೇದ ವಿಭಾಗಗಳಿಗೆ ಔಷಧಿಗಳನ್ನು ಸರಬರಾಜು ಮಾಡಲು ಹಣಕಾಸು ಮೀಸಲಿರಿಸಲಾಗಿದೆ. ಸೌಕರ್ಯ ಉತ್ತಮ ಪಡಿಸಲು 75 ಲಕ್ಷ ರೂ. ತೆಗೆದಿರಿಸಲಾಗಿದೆ. ವಯೋಮಿತ್ರ-ಪಾಲಿಯೇಟಿವ್‌ ಕೇರ್‌, ಬಡ್ಸ್‌ ಸ್ಕೂಲ್‌ಗ‌ಳಿಗೆ ಅಗತ್ಯವಾದ ಆರ್ಥಿಕ ಮೂಲವನ್ನು ಕಾಯ್ದಿರಿಸಲಾಗಿದೆ. ಪ್ಲಾಸ್ಟಿಕ್‌ ಮರು ಬಳಕೆ ಯೋಜನೆಯ ಅನ್ವಯ ವಿದ್ಯಾನಗರದಲ್ಲಿರುವ ಕೈಗಾರಿಕಾ ಪ್ರಾಂಗಣದ ಕಟ್ಟಡದಲ್ಲಿ ಪ್ಲಾಸ್ಟಿಕ್‌ ಪೆಲ್ಲೆಟ್‌ ನಿರ್ಮಾಣ ಘಟಕ ಆರಂಭಿಸಲಾಗುವುದು.

ಪ್ಲಾಸ್ಟಿಕ್‌ ನಿಷೇಧ ಕಾಯ್ದೆ ಅನ್ವಯ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ. ಪ್ಲಾಸ್ಟಿಕ್‌ಗೆ ಬದಲಿ ವ್ಯವಸ್ಥೆ ಒದಗಿಸುವುದರನ್ವಯ ಬಟ್ಟೆಯ ಕೈಚೀಲ ನಿರ್ಮಾಣ ಘಟಕಗಳನ್ನು ಆರಂಭಿ ಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಟೀಲ್‌ ಪ್ಲೇಟುಗಳು, ಸ್ಟೀಲ್‌ ಗ್ಲಾಸುಗಳು ಹರಿತ ಕ್ರಿಯಾ ಸೇನೆಗೆ ಆದಾಯ ಮೂಲವಾಗಿ ಪರಿಣಮಿಸಿದೆ. ವಾಹನ ಹಾಗೂ ಇನ್ನಿತರ ಸಮಾರಂಭಗಳನ್ನು ಹಸಿರು ಶಿಷ್ಟಾಚಾರ (ಗ್ರೀನ್‌ ಪ್ರೊಟೋಕೋಲ್‌) ಕ್ರಮಕ್ಕೆ ವಿಧೇಯವಾಗಿ ಹಮ್ಮಿಕೊಳ್ಳಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕಲ್ಮಾಡಿ ತೋಡು ನವೀಕರಿಸಲು 10 ಲಕ್ಷ ರೂ. ಮೀಸಲಿರಿ ಸಿದೆ. ನಗರದ ಒಳಚರಂಡಿ, ಕೈತೋಡುಗಳ ಶುಚೀಕರಣ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಅನುಷ್ಠಾನಕ್ಕೆ ತರಲಾಗಿದೆ. ಚೆನ್ನಿಕ್ಕರೆ ಶ್ಮಶಾನ, ಗ್ರಾಸ್‌ ಕ್ರಿಮಟೋರಿಯಂ ಕಾರ್ಯೋನ್ಮುಖಗೊಳಿಸಿ ಸಾರ್ವಜನಿಕರಿಗೆ ಒದಗಿಸುವ ಚಟುವಟಿಕೆ ನಡೆದು ಬರುತ್ತಿದೆ. ಆರೋಗ್ಯ ಶುಚಿತ್ವ ವಲಯದಲ್ಲಿ 1.40 ಕೋಟಿ ರೂ. ಮೀಸಲಿರಿಸಲಾಗಿದೆ.

ಕೃಷಿ ವಲಯ
ನಗರಸಭೆಯ ವ್ಯಾಪ್ತಿಯಲ್ಲಿ 25 ಹೆಕ್ಟರ್‌ ಪ್ರದೇಶವನ್ನು ಕೃಷಿ ಭೂಮಿಯಾಗಿ ಗುರುತಿಸಲಾಗಿದೆ. ಚಾಲ್ತಿಯ ಲ್ಲಿರುವ ಹಣಕಾಸು ವರ್ಷದಲ್ಲಿ ಯೋಜನೆ ಮೊತ್ತದ ಶೇ. 50 ವೆಚ್ಚ ಮಾಡಲಾಗಿದೆ. ಬಂಜರಾಗಿರುವ ಭೂಮಿ ಯಲ್ಲಿ ಕೃಷಿ ಕೈಗೊಳ್ಳಲು ಪ್ರೋತ್ಸಾಹ ನೀಡುವುದು ನಗರಸಭೆಯ ಆದ್ಯತೆಯ ವಿಚಾರವಾಗಿದೆ. ಪ್ರತಿ ಮನೆಯಲ್ಲೂ ಜೈವಿಕ ಮಾಲಿನ್ಯ ಸಂಸ್ಕರಿಸುವುದನ್ನೂ ಆ ಮೂಲಕ ಅಡುಗೆ ಮನೆ ತರಕಾರಿ ತೋಟ, ಜೈವಿಕ ತರಕಾರಿ ಕೃಷಿ ಪ್ರೋತ್ಸಾಹಿಸುವುದು. ಕೃಷಿ ವಯಲಕ್ಕೆ 65 ಲಕ್ಷ ರೂ. ಮೀಸಲಿರಿಸಲಾಗಿದೆ.

ಸಾಂಸ್ಕೃತಿಕ ಉನ್ನತಿ
ಪುರಸಭೆಯ ಪುಸ್ತಕ ಭಂಡಾರಕ್ಕೆ ಹೆಚ್ಚು ಪುಸ್ತಕಗಳನ್ನು ಪಡಕೊಳ್ಳಲು ತೀರ್ಮಾನಿಸಲಾಗಿದೆ. ಮೂರನೇ ಮಹಡಿ ಯಲ್ಲಿ ಡಿಜಿಟಲ್‌ ಲೈಬ್ರರಿ ಆರಂಭಿಸಿ ಸೌಕರ್ಯ ವಿದ್ಯಾರ್ಥಿ ಗಳಿಗೂ ಇತರ ಸಾರ್ವ ಜನಿಕರಿಗೂ ದೊರಕು ವಂತೆ ಮಾಡಲಾಗುವುದು. ಸಂಧ್ಯಾರಾಗ ಬಯಲು ರಂಗ ಮಂದಿರಕ್ಕೆ ಮೇಲ್ಛಾವಣಿ ಹೊದಿಸ‌ಲಾಗುವುದು.

ಕ್ರೀಡೆ
ನಗರ‌ಸಭೆಗೆ ಲೀಸ್‌ ವ್ಯವಸ್ಥೆಯಲ್ಲಿ ದೊರಕಿದ ತಾಳಿಪಡು³ ಮೈದಾನವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಕಿರು ಕ್ರೀಡಾಂಗಣವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಮಾಡಬೇಕಾಗಿದೆ. ನಗರದಲ್ಲಿ ನೋಂದಾಯಿತ ಯೂತ್‌ ಕ್ಲಬ್‌ಗಳಿಗೆ ಕ್ರೀಡೋಪಕರಣ ಒದಗಿಸಲಾಗುವುದು. ಪುರಸಭೆಯ ಕ್ರೀಡಾಂಗಣದ ಬಳಿ ಡಿಟಿಪಿಸಿ ಸಹಯೋಗದೊಂದಿಗೆ ನಿರ್ಮಿಸಿ ಆಂಫಿ ಥಿಯೇಟರ್‌ ಹಾಗೂ ಜತೆಗಿರುವ ಮನೋರಂಜನೆ ಉದ್ಯಾನವನ ಸಾರ್ವಜನಿಕರಿಗೆ ಬಳಕೆಯಾಗುವಂತೆ ಒದಗಿಸಲಾಗುವುದು.

ಕೈಗಾರಿಕೆ
ಕೈಗಾರಿಕಾ ಪ್ರಾಂಗಣದಲ್ಲಿರುವ ಕಟ್ಟಡಗಳಲ್ಲಿ ನೂತನ ಹೂಡಿಕೆದಾರರಿಗೆ ಉದ್ದಿಮೆ ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು. ಹಸಿರು ಕ್ರಿಯಾ ಸೇನೆ ಸಂಗ್ರಹಿಸಿದ ಪ್ಲಾಸ್ಟಿಕ್‌ ಕೈ ಚೀಲಗಳು, ಪ್ಲೇಟುಗಳು ಸಂಸ್ಕರಿಸಲು ಘಟಕ ಕೈಗಾರಿಕಾ ಪ್ರಾಂಗಣದಲ್ಲಿ ಆರಂಭಿಸಲಾಗಿದೆ. ಕೈಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಬಟ್ಟೆಯ ಕೈಚೀಲ ನಿರ್ಮಾಣ ಘಟಕ ಆರಂಭಿಸಲಾಗುವುದು. ಇದಕ್ಕಾಗಿ 3 ಲಕ್ಷ ರೂ. ಮೀಸಲಿರಿಸಲಾಗಿದೆ.

ಶಿಕ್ಷಣ
ನಗರಸಭೆ ನಿಧಿಯಲ್ಲಿ ಸೇರ್ಪಡೆಗೊಳಿಸಿ ಅಡ್ಕತ್ತಬೈಲು ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ ರೂ. ಮೀಸಲಿರಿಸಿದೆ. ಎಲ್ಲ ಸರಕಾರಿ ವಿದ್ಯಾಲಯಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು.

ಸೆಪ್ಟೆಜ್‌ ಪ್ಲಾಂಟ್‌
ಶೌಚ ತ್ಯಾಜ್ಯ ಸಂಸ್ಕರಿಸಲು ಕಲ್ಪಟ್ಟ ಮಾದರಿಯಲ್ಲಿ ಸೆಪ್ಟೆಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ ನಗರದಲ್ಲಿ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಈ ವ್ಯವಸ್ಥೆಯನ್ನು ಮುಖತಃ ಅಧ್ಯಯನ ನಡೆಸಲು ಕೌನ್ಸಿಲ್‌ ಸದಸ್ಯರು ಒಳಗೊಂಡ ತಂಡವೊಂದನ್ನು ಕಳುಹಿಸಲಾಗುವುದು ಎಂದು ಮುಂಗಡ ಪತ್ರದಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.ಎ. ಮಹಮೂದ್‌ ಪ್ರಕಟಿಸಿದ್ದಾರೆ.
ನಗರಸಭಾಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅವರು ಬಜೆಟ್‌ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದರು.

ಹ್ಯಾಂಡ್‌ ವಾಷ್‌
ಕೊರೊನಾ ತಡೆ ಅಂಗವಾಗಿ ಮುಂಗಡ ಪತ್ರ ಅಧಿವೇಶನದ ಸಭಾಂಗಣಕ್ಕೆ ತೆರಳುವ ಪ್ರತಿಯೊಬ್ಬರಿಗೂ ಹ್ಯಾಂಡ್‌ ವಾಷ್‌ ಬಳಿಕವೇ ಪ್ರವೇಶ ನೀಡಲಾಯಿತು.

ಬಜೆಟ್‌ ನಿರಾಶಾದಾಯಕ
ಕಾಸರಗೋಡು ನಗರಸಭೆಯ 2020- 21 ನೇ ಹಣಕಾಸು ವರ್ಷದ ಮುಂಗಡ ಪತ್ರ ನಿರಾಶಾದಾಯಕ ಎಂದು ಪ್ರತಿಪಕ್ಷ ನಾಯಕ ಪಿ.ರಮೇಶ್‌ ಅವರು ಪ್ರತಿಕ್ರಿಯಿಸಿದ್ದಾರೆ. ಮುಂಗಡ ಪತ್ರದಲ್ಲಿ ಮೀನುಗಾರಿಕೆ ಕ್ಷೇತ್ರವನ್ನು ಮತ್ತು ಎಸ್‌. ಸಿ-ಎಸ್‌. ಟಿ. ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಪೂರ್ಣರೂಪದಲ್ಲಿ ಬಜೆಟ್‌ ಪ್ರತಿ ಯನ್ನು ಕನ್ನಡದಲ್ಲಿ ನೀಡದಿರುವ ಮೂಲಕ ಕನ್ನಡ ಭಾಷಿಗರನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ಒಂದಿ ಬ್ಬರು ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಎಲ್ಲ ವ್ಯಾಪಾರಿಗಳಿಗೆ ಲೈಸನ್ಸ್‌ ಶುಲ್ಕವನ್ನು ಹೆಚ್ಚಿಸಿರುವುದು ವ್ಯಾಪಾರಿಗಳಿಗೆಸೆದ ದೊಡ್ಡ ಹೊರೆಯಾಗಿದೆ. ಅಲ್ಲದೆ ವ್ಯಾಪಾರ ನಡೆಸುವುದು ಕಷ್ಟ ಎಂಬಂತಾಗಿದೆ ಎಂದಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.