Udayavni Special

ಕೋವಿಡ್‌ 19 ವೈರಸ್‌: ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್‌ ಸರ್ಪಗಾವಲು

Team Udayavani, Mar 27, 2020, 5:27 AM IST

ಕೋವಿಡ್‌ 19 ವೈರಸ್‌: ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್‌ ಸರ್ಪಗಾವಲು

ಕಾಸರಗೋಡು: ದೇಶಾದ್ಯಂತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ನಗರ, ಪೇಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್‌ ಸರ್ಪಗಾವಲು ಏರ್ಪಡಿಸಲಾಗಿದೆ. ವಿನಾಕಾರಣ ಬೀದಿಗೆ ಬರುವವರಿಗೆ ಲಾಠಿಯ ರುಚಿ ತೋರಿಸ ಲಾಗುತ್ತಿದೆ.

ನಗರದ ಹೊಸಬಸ್‌ ನಿಲ್ದಾಣ, ಕರಂದಕ್ಕಾಡ್‌ ಮೊದಲಾದೆಡೆ ಬ್ಯಾರಿಕೇಡ್‌ ಅಳವಡಿಸಿ ವಾಹನಗಳನ್ನು ತಡೆದು ನಿಲ್ಲಿಸಿ ಸಂಪೂರ್ಣ ಮಾಹಿತಿ ಅಗತ್ಯವಿದ್ದರೆ ಮಾತ್ರ ಮುಂದುವರಿಯಲು ಬಿಡಲಾಗುತ್ತಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಾಬು ನೇತೃತ್ವ ವಹಿಸಿದ್ದಾರೆ.

ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಅಂಗಡಿ, ದಿನಸಿ ಅಂಗಡಿ, ತರಕಾರಿ ಅಂಗಡಿ ಸಹಿತ ನಿತ್ಯೋಪಯೋಗಿ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ಜನರು ಗುಂಪು ಸೇರದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಔಷಧ ಅಂಗಡಿಗಳು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ತೆರೆಯಬಹುದಾಗಿದೆ.

ಪೊಲೀಸರಿಗೂ ಗ್ಲೌಸ್‌, ಮಾಸ್ಕ್
ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸ್‌ ಸಿಬಂದಿ ಗ್ಲೌಸ್‌ ಮತ್ತು ಮಾಸ್ಕ್ ಧರಿಸಿರಬೇಕು ಎಂದು ರಾಜ್ಯ ಪೊಲೀಸ್‌ ಮುಖ್ಯಸ್ಥ (ಡಿಜಿಪಿ) ಲೋಕನಾಥ್‌ ಬೆಹ್ರಾ ಆದೇಶ ನೀಡಿದ್ದಾರೆ. ವಾಹನಗಳತ್ತ ಬಾಗಿ ತಪಾಸಣೆ ನಡೆಸುವ ಕ್ರಮ ಕೈಬಿಡಬೇಕು. ಗ್ಲೌಸ್‌ ಧರಿಸದೇ ಇರುವ ವ್ಯಕ್ತಿಗಳನ್ನು ಸ್ಪರ್ಶಿಸ ಬಾರದು. ವಾಹನಗಳ ಢಿಕ್ಕಿ ತೆರೆಯುವ ವೇಳೆ ಮುಂಜಾಗ್ರತೆ ವಹಿಸಬೇಕು. ವಾಹನಗ ಳಲ್ಲಿರುವವರ ಜತೆಗೆ ಮಾತನಾಡುವಾಗ ನಿಗದಿತ ಅಂತರ ಪಾಲಿಸಬೇಕು. ಮುಂದಿನ ಆದೇಶದ ವರೆಗೆ ಬ್ರಿàದ್‌ ಅನಲೈಸರ್‌ ಬಳಕೆ ಬೇಡ. ವೈರಸ್‌ ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ಕೈಗಳನ್ನು ಆಗಾಗ ಸಾಬೂನು ಯಾ ಸಾನಿಟೈಸರ್‌ ಬಳಸಿ ಶುಚಿಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸಪ್ಲೈಕೋ ಸಮಯ ಪರಿಷ್ಕರಣೆ
ಕೋವಿಡ್‌ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ನಿಷೇ ದಾಜ್ಞೆ ಹಿನ್ನೆಲೆಯಲ್ಲಿ ಸಪ್ಲೈಕೋ ಮಾರಾಟ ಶಾಖೆಗಳ ಚಟುವಟಿಕೆಯ ಸಮಯವನ್ನು ಪುನರ್‌ ರಚಿಸಲಾಗಿದೆ. ಮಾವೇಲಿ ಸ್ಟೋರ್‌, ಮಾವೇಲಿ ಸೂಪರ್‌ ಸ್ಟೋರ್‌, ಪೀಪಲ್ಸ್‌ ಬಝಾರ್‌, ಹೈಪರ್‌ ಮಾರ್ಕೆಟ್‌, ಅಪ್ನಾ ಬಝಾರ್‌ ಸಂಸ್ಥೆಗಳ ಚಟುವಟಿಕೆಗಳ ಸಮಯ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಇರುವುದು. ಮೆಡಿಕಲ್‌ ಸ್ಟೋರ್‌ಗಳ ಸಮಯ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಪುನರ್‌ ರಚಿಸಲಾಗಿದೆ ಎಂದು ವಲಯ ಪ್ರಬಂಧಕ ತಿಳಿಸಿದರು.

ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್
ಸಹಾಯವಾಣಿ
ಡಾ| ಚಂದ್ರಮೋಹನ್‌ 94472 86592, ಹೆಲ್ತ್‌ ಇನ್‌ಸ್ಪೆಕ್ಟರ್‌ ರಿಜೋಯ್‌ – 7907883478, ಜೂನಿಯರ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ ರಾಧಾ – 9400408514, ಬಿಜು – 7994288090, ಭಾಸ್ಕರನ್‌ – 9497167035, ಮೇಶಾìಬಾಲ್‌ 9605184761, ಜೆ.ಪಿ.ಎಚ್‌. ಎನ್‌. ದಿಲೀಪ್‌ ಕುಮಾರ್‌ – 8086116772.

ತುರ್ತು ಸಹಾಯವಾಣಿ
ತುರ್ತು ಸಂದರ್ಭ ಪಾಸ್‌ ಸಂಬಂಧ ಅಗತ್ಯಗಳಿಗೆ ಕರೆ ಮಾಡಬಹುದಾದ ದೂರ ವಾಣಿ ಸಂಖ್ಯೆಗಳು: 04994-255001. ಮನೆಗಳಲ್ಲಿ ನಿಗಾದಲ್ಲಿ ರುವವರಿಗೆ ಆಹಾರದ ಅಗತ್ಯವಿದ್ದರೆ: 04994-255004. ಕಾನೂನು ಉಲ್ಲಂಘನೆ ಸಂಬಂಧ ಪೊಲೀಸರ ಸಹಾಯಕ್ಕೆ: 112, 1090, 04994-257371, 9497980941.
ಕೋವಿಡ್‌ 19 ಸಂಬಂಧ ಸಂಶಯಗಳ ದೂರೀಕರಣ, ತುರ್ತು ಸಹಾಯಕ್ಕೆ ಜಿಲ್ಲಾಧಿಕಾರಿ ಕಚೇರಿಯ ಕೋವಿಡ್‌ 19
ನಿಯಂತ್ರಣ ಘಟಕ: 04994-257700, 9446601700, ಜಿಲ್ಲಾ ಆಸ್ಪತ್ರೆಯ ಕೋವಿಡ್‌ 19 ನಿಯಂತ್ರಣ ಘಟಕ: 0467 2209901, 0467 2209902, 0467 2209904, 0467 2209906, 9946000493, 9946000293.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಕೋವಿಡ್-19 ಸೋಂಕು ಸಂಪೂರ್ಣ ನಿರ್ನಾಮಕ್ಕೆ ಡಿಸೆಂಬರ್‌ ವರೆಗೂ ಮುನ್ನೆಚ್ಚರಿಕೆ ವಹಿಸಿ: ಡಿಸಿಎಂ

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಹನುಮಾನ್ ಜಯಂತಿಯಂದೇ ಬಿಡುಗಡೆಯಾಯ್ತು ರಾಮ ಮಂದಿರ ಟ್ರಸ್ಟ್ ನ ಲೋಗೋ; ಏನೇನಿದೆ ಇದರಲ್ಲಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯ 12 ಮಂದಿಯಲ್ಲಿ ಸೋಂಕು

ಕಾಸರಗೋಡು ಜಿಲ್ಲೆಯ 12 ಮಂದಿಯಲ್ಲಿ ಸೋಂಕು

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

08-April-38

ಸಾರ್ವಜನಿಕರಿಗೆ ಬಾಳೆಗೊನೆ ಉಚಿತ ಹಂಚಿಕೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

08-April-36

ಹೊಲದಲ್ಲೇ ಕೊಳೆಯುತ್ತಿರುವ ಅನಾನಸ್‌ - ಪರಿಶೀಲನೆ

avalu-tdy-05

ಜೇಬ್ ಪ್ಲೀಸ್..!