ಕೊಡಗು: 396 ಮಂದಿಗೆ ಲಸಿಕೆ
Team Udayavani, Jan 17, 2021, 2:38 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಆಸ್ಪತ್ರೆಯಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಜಿ.ಪಂ. ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರ ಉಪಸ್ಥಿತಿಯಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಹೊನ್ನಮ್ಮ ಅವರಿಗೆ ಪ್ರಥಮವಾಗಿ ಲಸಿಕೆ ನೀಡಲಾಯಿತು. ಜಿಲ್ಲೆಯ 5 ಕೇಂದ್ರಗಳಲ್ಲಿ ಮೊದಲ ದಿನ 474 ಮಂದಿಗೆ ಲಸಿಕೆ ಹಾಕುವ ಗುರಿ
ಇದ್ದು, 396 ಮಂದಿ ಲಸಿಕೆ ಸ್ವೀಕರಿಸಿದರು.