ಹಾಡಹಗಲೇ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಣ
Team Udayavani, May 21, 2022, 1:11 AM IST
ಸಾಂದರ್ಭಿಕ ಚಿತ್ರ.
ಕುಂಬಳೆ: ಉಪ್ಪಳದ ಶಾಲಾ ಬಳಿಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಗೆ ಚೂರಿ ತೋರಿಸಿ ಚಿನ್ನಾಭರಣ ಅಪಹರಿಸಿದ ಘಟನೆ ಉಪ್ಪಳದಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ ಯುವಕ ಮತ್ತು ಯುವತಿ ಉಪ್ಪಳದ ಬಶೀರ್ ಅವರ ಮನೆಗೆ ಸ್ಕೂಟರಿನಲ್ಲಿ ಆಗಮಿಸಿ ಮನೆಯ ಮಹಿಳೆಯಲ್ಲಿ ಅತ್ತೆ ಮನೆಯಲ್ಲಿ ಇದ್ದರಾ ಎಂಬುದಾಗಿ ಪ್ರಶ್ನಿಸಿದ್ದರು. ಇದ್ದಾರೆ ಕರೆಯುತೇ¤ನೆ ಎಂಬುದಾಗಿ ಮಹಿಳೆ ಮನೆಯೊಳಗೆ ತೆರಳುತ್ತಿರುವಾಗ ಹಿಂಬಾಲಿಸಿದ ಯುವಕ ಮಹಿಳೆಗೆ ಚೂರಿ ತೋರಿಸಿ ಮೈಮೇಲಿದ್ದ ಎಲ್ಲ ಚಿನ್ನವನ್ನು ನೀಡುವಂತೆ ಬೆದರಿಸಿ ಪಡೆದುಕೊಂಡಿದ್ದ.
ಅಷ್ಟರಲ್ಲಿ ಬಶೀರ್ ಅವರ ಪುತ್ರ ಮಸೀದಿಗೆ ತೆರಳಲು ಮಹಡಿ ಮೇಲಿನಿಂದ ಇಳಿದು ಬರುತ್ತಿರುವುದನ್ನು ಕಂಡು ಆರೋಪಿಗಳು ಬಳೆ ಸಹಿತ ಸ್ಕೂಟರಿನಲ್ಲಿ ಪರಾರಿಯಾದರು. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಂಬಳೆ : ನೇಣು ಬಿಗಿದ ಸ್ಥಿತಿಯಲಿ ಪೊಲೀಸ್ ಅಧಿಕಾರಿಯ ಮೃತದೇಹ ಪತ್ತೆ
ಕುಂಬಳೆ : ಗೋವಾಕ್ಕೆ ತೆರಳಿದ ಪೊಲೀಸ್ : 50 ಲ.ರೂ. ಮೌಲ್ಯದ ಡಾಲರ್ ವ್ಯವಹಾರ ಕೊಲೆಗೆ ಕಾರಣ?
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ
ಒಂದೇ ವಾರದಲ್ಲಿ ಮೂರು ಬಾರಿ ನಡುಗಿದ ಭೂಮಿ: ಕೊಡಗಿನಲ್ಲೇ ಕೇಂದ್ರ ಬಿಂದು
ಕುಂಬಳೆ : ಯುವಕ ಕೊಲೆ ಪ್ರಕರಣ : ಇಬ್ಬರ ವಿಚಾರಣೆ, 3 ಕಾರುಗಳು ವಶ
MUST WATCH
ಹೊಸ ಸೇರ್ಪಡೆ
ಹುಣಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕಿ ಚಿಕಿತ್ಸೆ ಫಲಿಸದೆ ಸಾವು
ಎಂ.ಸಿ ಸುಧಾಕರ್, ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ: ಕೆ.ಹೆಚ್ ಮುನಿಯಪ್ಪ ತೀವ್ರ ಅಸಮಾಧಾನ
ಉದಯಪುರ ಘಟನೆ; ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ; ಸಚಿವ ಆರಗ
ಗೂಡ್ಸ್ ವಾಹನ- ಕಾರು ಮುಖಾಮುಖಿ: ಇಬ್ಬರು ಸ್ಥಳದಲ್ಲೇ ಸಾವು
ಆನೆ ದಂತ ಮಾರಾಟಕ್ಕೆ ಯತ್ನ; ನಾಲ್ವರ ಬಂಧನ, ಪ್ರಮುಖ ಆರೋಪಿ ಎಸ್ಕೇಪ್