ಕನ್ನಡ ಶಾಲೆಗಳಲ್ಲಿ ದಸರಾ ಆಚರಣೆ ಆದೇಶ ರದ್ದು


Team Udayavani, Sep 30, 2019, 5:44 AM IST

KAS-K

ಕಾಸರಗೋಡು: ನಾಡಿನ ಪರಂಪರಾಗತ ಹಬ್ಬ ನವರಾತ್ರಿ ಮತ್ತೆ ಬಂದಿದೆ. ನವರಾತ್ರಿಯ ಸಾಂಸ್ಕೃತಿಕ ಸ್ವರೂಪವೇ ದಸರಾ, ಮಾರ್ನೆಮಿ ವೇಷಗಳು ಮೊದಲಾದವು. ಆದರೆ ಪರಕೀಯ ಸಂಸ್ಕೃತಿಯ ಹೇರಿಕೆಯ ಹಬ್ಬಗಳಿಗೆ ಮಾರುಹೋದ ಇಂದಿನ ಯುವಜನತೆಗೆ ಪರಂಪರೆಯ ಹಬ್ಬಗಳು ಬೇಡವಾಗಿವೆ.

ಹಾಗಿದ್ದರೂ ಕಾಸರಗೋಡಿನ ಹೆಚ್ಚಿನ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ನವರಾತ್ರಿ ಮಹೋತ್ಸವ ನಡೆಯುತ್ತಿದೆ. ಕೋಟೆಕಣಿಯ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ, ಕ.ಸಾ.ಪ. ಕೇರಳ ಗಡಿನಾಡ ಘಟಕ, ರಂಗಸಿರಿ ಸಾಂಸ್ಕೃತಿಕ ವೇದಿಕೆ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮೊದಲಾದ ಸಂಘ ಸಂಸ್ಥೆಗಳಲ್ಲದೆ ಕಾಸರಗೋಡು, ಮಂಜೇಶ್ವರ ಸರಕಾರಿ ಕಾಲೇಜುಗಳಲ್ಲಿ ದಸರಾ ಆಚರಣೆ ನಡೆಯುತ್ತಿದೆ. ಪೈವಳಿಕೆ, ಬಂದಡ್ಕ ಮೊದಲಾದ ಕೆಲವು ಪ್ರದೇಶಗಳಲ್ಲಿ ಊರಹಬ್ಬವನ್ನಾಗಿ ದಸರೆಯನ್ನು ಆಚರಿಸಲಾಗುತ್ತಿದೆ. ಆದರೆ ಕಾಸರಗೋಡಿನಲ್ಲಿರುವ ನೂರ ಎಂಬತ್ತರಷ್ಟು ಕನ್ನಡ ಮಾಧ್ಯಮ ಶಾಲೆಗಳಲ್ಲಿ ದಸರಾ ಆಚರಣೆಯ ಆದೇಶವನ್ನು ರದ್ದುಗೊಳಿಸಿರುವುದು ಕನ್ನಡ ಮಕ್ಕಳನ್ನು ಹಬ್ಬದ ಆಚರಣೆಯಿಂದ ವಂಚಿತರನ್ನಾಗಿ ಮಾಡಿದೆ.

ಕಾಸರಗೋಡಿನ ಕನ್ನಡ ಮಕ್ಕಳಿಗೆ ಕನ್ನಡದ ಕಲೆ ಸಂಸ್ಕೃತಿಯನ್ನು ಪರಿಚಯಿಸುವ ಪಠ್ಯಗಳು ಕೇರಳ ಸರಕಾರದ ಪಠ್ಯಕ್ರಮದಲ್ಲಿಲ್ಲ. ಹಾಗಾಗಿ ಶುದ್ಧ ಸಾಂಸ್ಕೃತಿಕ ಹಬ್ಬವಾಗಿದ್ದು ಮಕ್ಕಳು ಜಾತಿ ಮತ ಭೇದವಿಲ್ಲದೆ ಆಚರಿಸಬಹುದಾದ ದಸರೆಯನ್ನು ಕನ್ನಡ ಮಕ್ಕಳು ಕಲಿಯುವ ಶಾಲೆಗಳಲ್ಲಿ ಆಚರಿಸುವ ಮೂಲಕ ಮಕ್ಕಳಿಗೆ ಕನ್ನಡದ ಪರಂಪರೆಯನ್ನು ಪರಿಚಯಿಸಬಹುದೆಂದು ಕನ್ನಡಾಭಿಮಾನಿಗಳು ಜಿಲ್ಲಾ ಧಿಕಾರಿಗಳ ಗಮನ ಸೆಳೆದಿದ್ದರು. 2014 ರಲ್ಲಿ ಜಿಲ್ಲಾ ಧಿಕಾರಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿದ್ದ ಜಿಲ್ಲಾ ಭಾಷಾ ಅಲ್ಪಸಂಖ್ಯಾಕ ಸಭೆಯಲ್ಲಿ ನವರಾತ್ರಿಯ ಒಂದು ದಿನ ಕನ್ನಡ ಮಾಧ್ಯಮವಿರುವ ಎಲ್ಲ ಶಾಲೆಗಳಲ್ಲಿ ದಸರಾ ಆಚರಿಸಬೇಕೆಂದು ತೀರ್ಮಾನವಾಗಿ ಡಿ.ಡಿ.ಇ. ಯವರು ಆದೇಶ ಹೊರಡಿಸಿದ್ದರು. ಕನ್ನಡ ಸಂಸ್ಕೃತಿಗೆ ಸಂಬಂಧಿ ಸಿದ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳ ಮೂಲಕ ದಸರಾ ಆಚರಣೆಗೆ ಮಾರ್ಗದರ್ಶಿ ಸೂಚನೆಗಳನ್ನೂ ನೀಡಲಾಗಿತ್ತು. ಕನ್ನಡ ಮಾಧ್ಯಮ ಮಾತ್ರವಿರುವ ಶಾಲೆಗಳಲ್ಲಿ ಮಾತ್ರವಲ್ಲ, ಸರಕಾರಿ ಶಾಲೆಗಳ ಸಹಿತ ಕನ್ನಡ ಮಕ್ಕಳು ಕಲಿಯುವ ಎಲ್ಲ ಶಾಲೆಗಳಲ್ಲಿ ದಸರಾ ಆಚರಿಸಬಹುದೆಂದು ಸ್ಪಷ್ಟೀಕರಣ ನೀಡಲಾಗಿತ್ತು. ಇದರ ಫಲವಾಗಿ 2014, 15, 16 ಹಾಗೂ 2017 ರಲ್ಲಿ ದಸರಾ ಆಚರಿಸುವ ಶಾಲೆಗಳ ಸಂಖ್ಯೆ ಹೆಚ್ಚಿದ್ದು ಕನ್ನಡ ಸಂಸ್ಕೃತಿಯ ಉಳಿವಿನ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆಯಾಗಿತ್ತು.

ಕಾಸರಗೋಡು ಕೇರಳಕ್ಕೆ ಸೇರುವ ಮೊದಲೇ ಇಲ್ಲಿನ ಪ್ರಾಚೀನ ಶಾಲೆಗಳಲ್ಲಿ ಶಾರದಾ ಪೂಜೆ ನಡೆಯುತ್ತಿದೆ, ಇದು ಕಾಸರಗೋಡಿನ ಪ್ರಾಚೀನ ಪರಂಪರೆ. ಶಾರದಾ ಪೂಜೆಯನ್ನು ಶಾಲೆಗಳಲ್ಲದೆ ಬೇರೆಲ್ಲಿ ನಡೆಸಬೇಕು ಎಂಬ ಪ್ರಶ್ನೆಗೆ ಔಚಿತ್ಯವಿದೆಯಾದರೂ ಅದು ಒಂದು ಮತಕ್ಕೆ ಸೇರಿದ ಧಾರ್ಮಿಕ ಕಾರ್ಯಕ್ರಮವೆಂದು ಸಮಜಾಯಿಷಿ ನೀಡಬಹುದು. ಆದರೆ ಯಾವುದೇ ಧಾರ್ಮಿಕ ಆಚರಣೆಗಳಿಲ್ಲದ ಶುದ್ಧ ಸಾಹಿತ್ಯಕ ಸಾಂಸ್ಕೃತಿಕ ಹಬ್ಬವಾದ ದಸರೆಯನ್ನು ಶಾಲೆಗಳಲ್ಲಿ ಆಚರಿಸಬಾರದೆಂದು ಬೆದರಿಸುತ್ತಿರುವುದು ಕನ್ನಡ ವಿರೋ ಧಿಗಳ ಅಸಹಿಷ್ಣುತೆಯ ಸೂಚಕವಾಗಿದೆ. ಸರಕಾರದ ಶಿಕ್ಷಣ ಇಲಾಖೆಯನ್ನೇ ಇವರು ನಿಯಂತ್ರಿಸುತ್ತಿದ್ದು ಕನ್ನಡ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯ ತಾರತಮ್ಯವನ್ನು ಮೌನವಾಗಿ ಸಹಿಸಿಕೊಳ್ಳಬೇಕಾಗಿದೆ. ಇಷ್ಟಕ್ಕೂ ಸರಕಾರದಿಂದಲಾಗಲೀ ಮಲಯಾಳ ವಿದ್ಯಾರ್ಥಿಗಳಿಂದಲಾಗಲೀ ಅಧ್ಯಾಪಕರಿಂದಲಾಗಲೀ ದಸರಾ ಆಚರಿಸಲು ಹಣ ಸಹಾಯವನ್ನು ಬಯಸಿರಲಿಲ್ಲ. ದಸರಾ ಆಚರಣೆಯಲ್ಲಿ ಭಾಗವಹಿಸುವಂತೆ ಯಾರನ್ನೂ ಒತ್ತಾಯಿಸಿರಲಿಲ್ಲ.

ತಮ್ಮಷ್ಟಕ್ಕೆ ತಾವು ದಸರಾ ಆಚರಿಸಲು ತಯಾರಿ ಮಾಡುತ್ತಿದ್ದ ಕನ್ನಡ ವಿದ್ಯಾರ್ಥಿಗಳು ದಸರಾ ಆಚರಿಸದಂತೆ ಮಾಡಿದುದರ ಹಿನ್ನೆಲೆಯಲ್ಲಿ ಸಂವಿಧಾನ, ಸಮಾನತೆ, ಸಹಿಷ್ಣುತೆ ಎಂದು ಭಾಷಣ ಮಾಡುವವರ ಇನ್ನೊಂದು ಮುಖ ವ್ಯಕ್ತವಾಗುತ್ತದೆ ಎಂದು ಕನ್ನಡಿಗ ಪೋಷಕರು ಅಳಲು ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಓಣಂ ಆಚರಿಸಲು ಯಾವ ಅಡ್ಡಿಯೂ ಇಲ್ಲ. ಕಾಸರಗೋಡಿನ ಶಾಲೆಗಳಲ್ಲಿ ಓಣಂ ಆಚರಿಸಲು ಕನ್ನಡ ಅಧ್ಯಾಪಕರಿಂದಲೂ ದೇಣಿಗೆ ವಸೂಲು ಮಾಡಲಾಗುತ್ತಿದೆ. ಕನ್ನಡ ವಿದ್ಯಾರ್ಥಿಗಳು ಓಣಂ ಪ್ರಭಾವದಿಂದ ತಮ್ಮ ಮನೆಗಳಲ್ಲೂ ಮಲಯಾಳ ಸಂಸ್ಕೃತಿ ಅನುಸರಿಸುವಂತೆ ಮಾಡಲಾಗುತ್ತಿದೆ. ಹಿರೋಶಿಮಾ ದಿನ, ನಾಗಸಾಕಿ ದಿನ, ಮಾದಕ ವಿರುದ್ಧ ದಿನ, ಓಜೋನ್‌ ದಿನ, ಗಣಿತ ದಿನ ಹೀಗೆ ಎಲ್ಲ ದಿನಗಳನ್ನೂ ಆಚರಿಸಿ ಪತ್ರಿಕೆಗಳಲ್ಲಿ ವರದಿ ಪ್ರಕಟಿಸಲಾಗುತ್ತಿದೆ. ಕಾಸರಗೋಡಿನಲ್ಲಿ ಪರಂಪರೆಯೇ ಇಲ್ಲದ ಓಣಂ ಹಬ್ಬವನ್ನು ಆಚರಿಸಿ ಕನ್ನಡ ಪತ್ರಿಕೆಗಳಲ್ಲಿ ಫೋಟೋ ವರದಿ ನೀಡಿ ಸಂಭ್ರಮಿಸಲು ಪೈಪೋಟಿ ನಡೆಯುತ್ತಿದೆ. ಆದರೆ ಕನ್ನಡ ವಿದ್ಯಾರ್ಥಿಗಳ ಕನ್ನಡದ ಹಬ್ಬವನ್ನು ಅರ್ಧದಿನ ಸರಳವಾಗಿ ಆಚರಿಸಲೂ ಸಾಧ್ಯವಾಗುತ್ತಿಲ್ಲ ಎಂಬುದು ಕಾಸರಗೋಡಿನಲ್ಲಿ ಕನ್ನಡದ ಭವಿಷ್ಯದ ಬಗ್ಗೆ ಕರಾಳ ನೆರಳನ್ನು ಬೀರಿದೆ.

ದಸರಾಕ್ಕೆ ಕಲ್ಲುಹಾಕಿದ ಭಾಷಾ ಅಸಹಿಷ್ಣುಗಳು
ಆದರೆ ಕಳೆದ ವರ್ಷ ಕುಂಬಳೆ ಸಮೀಪದ ಸರಕಾರಿ ಶಾಲೆಯೊಂದರಲ್ಲಿ ಕನ್ನಡ ಮಕ್ಕಳು ಹಾಗೂ ಅಧ್ಯಾಪಕರು ಸೇರಿ ದಸರಾ ಆಚರಣೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾಗ ತೆಂಕಣ ಕೇರಳದ ಮೂಲದ, ಸ್ಥಳೀಯ ಭಾಷೆ ಸಂಸ್ಕೃತಿಯ ಬಗ್ಗೆ ತಿರಸ್ಕಾರವಿರುವ, ಆಡಳಿತ ಪಕ್ಷದ ರಾಜಕೀಯ ಸಂಘಟನೆಗೆ ಸೇರಿದ ಕೆಲವು ಮಂದಿ ಅಧ್ಯಾಪಕರ ಕಾಕದೃಷ್ಟಿ ದಸರೆಯ ಮೇಲೆ ಬಿತ್ತು ಎನ್ನಲಾಗಿದೆ. ದಸರೆಯನ್ನು ಆಚರಿಸಲು ಆದೇಶ ನೀಡಲು ಡಿ.ಡಿ.ಇ. ಯವರಿಗೆ ಅಧಿ ಕಾರವಿಲ್ಲ ಎಂದು ಬೆದರಿಸಿದ್ದಲ್ಲದೆ ಡಿ.ಡಿ.ಇ. ಯವರ ಮೇಲೆ ರಾಜಕೀಯ ಒತ್ತಡ ಹೇರಿ ದಸರಾ ಆಚರಣೆಯ ಆದೇಶವನ್ನೇ ಹಿಂತೆಗೆಯುವಂತೆ ಮಾಡಲಾಯಿತು. ಇದಕ್ಕಿಂತಲೂ ಹಿಂದೆ ದೇಲಂಪಾಡಿ ಸಮೀಪದ ಸರಕಾರಿ ಶಾಲೆಯಲ್ಲಿ ಪರಂಪರಾಗತವಾಗಿ ನಡೆಯುತ್ತಿದ್ದ ಶಾರದಾ ಪೂಜೆಯನ್ನು ಕೂಡ ನಡೆಯಗೊಡದೆ ಸಮೀಪದ ಭಜನಾಮಂದಿರಕ್ಕೆ ಸ್ಥಳಾಂತರಿಸಲಾಗಿತ್ತು.

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.