ಮೂಲ ಸೌಕರ್ಯವೂ ಇಲ್ಲದೆ ಸಂಕಷ್ಟದಲ್ಲಿ ಕುಟುಂಬ

ಭಾರೀ ಗಾಳಿಮಳೆಗೆ ಮುರಿದು ಬಿದ್ದು ಇದ್ದ ಚಿಕ್ಕ ಸೂರೂ ಹೋಯಿತು

Team Udayavani, Sep 28, 2019, 5:21 AM IST

2609PRL1ATARPAL-MANE

ಬಡವರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳು, ಅನುದಾನಗಳಿದ್ದರೂ ತಲುಪುವಲ್ಲಿಗೆ ತಲುಪುವುದಿಲ್ಲ. ಅರ್ಹರು ಇನ್ನೂ ವಂಚಿತರಾಗುತ್ತಾರೆ. ಪ್ರಗತಿಯು ಕೇವಲ ಹೇಳಿಕೆಗಳಾಗದೆ ಈ ಬಗ್ಗೆ ಜನಪ್ರತಿನಿಧಿಗಳು, ಉದ್ಯೋಗಸ್ಥರು ಪ್ರಾಮಾಣಿಕ ವಾಗಿ, ಕ್ರಿಯಾಶೀಲರಾಗಿ ಕಾರ್ಯನಿರ್ವಹಿ ಸಬೇಕು. ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.

ಪೆರ್ಲ : ವಾಸಯೋಗ್ಯ ಮನೆಯಂತೂ ಇಲ್ಲ. ಆದರೆ ಪ್ರಾಥಮಿಕ ಆವಶ್ಯಕತೆಗೆ ಶೌಚಾಲಯಚವೂ ಇಲ್ಲದೇ ಈಗಲೂ ತೆರೆದ ಪ್ರದೇಶಕ್ಕೆ ಹೋಗಬೇಕಾದ ಅಸಹಾಯಕ ಸ್ಥಿತಿ. ದುಡಿಯುವವರು ಯಾರೂ ಇಲ್ಲದೇ ಅತ್ಯಂತ ಶೋಚನೀಯ ಬಡ ಕುಟುಂಬವಾದ ಎಣ್ಮಕಜೆ ಗ್ರಾ.ಪಂ.12ನೇ ವಾರ್ಡು ಬಣುತ್ತಡ್ಕ ಸಮೀಪದ ರಂಗೊಚ್ಚಿ ಪರಿಶಿಷ್ಟ ಜಾತಿಯ ಲಕ್ಷ್ಮೀ, ವೃದ್ಧೆ ಅತ್ತೆ ಚೋಮಾರು ಹಾಗೂ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳ ಜೀವನ ಬಹಳ ಸಂಕಷ್ಟಮಯವಾಗಿದೆ.

ಲಕ್ಷ್ಮೀಯ ಪತಿ ಸಂಜೀವ ಅಬುìದ ರೋಗ ಬಾಧಿಸಿ ಇತ್ತೀಚೆಗೆ ಮೃತಪಟ್ಟಿದ್ದಾರೆ. ಇವರು ವಾಸಿಸುತ್ತಿದ್ದ ಸುಮಾರು 15 ವರ್ಷ ಹಳೆಯ ಹೆಂಚು ಹಾಸಿದ ಮನೆಯ ಮಾಡು ಕಳೆದ ಭಾರೀ ಗಾಳಿಮಳೆಗೆ ಮುರಿದು ಬಿದ್ದು ಇದ್ದ ಚಿಕ್ಕ ಸೂರೂ ಹೋಯಿತು.ಇದೀಗ ಈ ಮೂವರು ಸಮೀಪದಲ್ಲಿ ಮಡಲು,ಟಾರ್ಪಾಲು ಹಾಸಿದ ತಾತ್ಕಾಲಿಕ ಗುಡಿಸಲಿನಲ್ಲಿ ಜೀವನ ಮಾಡುತ್ತಿದ್ದಾರೆ.ವಾಸಿಸುವ ಸ್ಥಳ ಕಾಡುಗಳಿಂದ ತುಂಬಿದ್ದೂ ವಿಷಜಂತುಗಳು ಗುಡಿಸಲಿನ ಒಳಗೆ ಬಾರದಂತೆ ತಡೆಯುವ ಯಾವುದೇ ಸುರಕ್ಷೆಯೂ ಇಲ್ಲ.

ಹತ್ತು ಸೆಂಟ್‌ ಸ್ಥಳ ವಿದ್ದರೂ ಇವರಿಗೆ ಇದುವರೆಗೂ ಹೊಸ ಮನೆ ನಿರ್ಮಾಣಕ್ಕೆ ಅನುದಾನ ಲಭಿಸಲಿಲ್ಲ .ಪ್ರತಿ ಸಲವು ಗ್ರಾಮ ಸಭೆಗೆ ಹೋಗಿ ಮನವಿ ಮಾಡಿದರೂ ಭರವಸೆ ಮಾತ್ರ ಲಭಿಸಿದ್ದು ಎಂದು ಲಕ್ಷ್ಮಿ ಬೇಸರ, ಅಸಹಾಯಕತೆಯಿಂದ ಹೇಳುತ್ತಾರೆ.

ಲಕ್ಷ್ಮೀ ದುಡಿಯುವ ಸ್ಥಿತಿಯಲ್ಲಿ ಇಲ್ಲ. ಹೆಣ್ಣು ಮಗಳು ಸಮೀಪದ ಬಣು³ತ್ತಡ್ಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಇವಳ ವಿದ್ಯಾಭ್ಯಾಸಕ್ಕೂ ನೆರವು ನೀಡುವವರು ಇಲ್ಲ. ಲಕ್ಷ್ಮಿಯು ಪತಿಯ ಅಕಾಲಿಕ ನಿಧನದಿಂದ ಬಳಲಿ ಇನ್ನೂ ಚೇತರಿಸಿಕೊಂಡಿಲ್ಲ.

ಇವರಿಗೆ ಮನೆ ಶೌಚಾಲಯ ಲಭಿಸದ ಬಗ್ಗೆ ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ. ಅವರ ಗಮನ ಸೆಳೆದಾಗ ಅವರು, ಮೊದಲು ಪ್ಲಾನ್‌ ಫಂಡ್‌ನಿಂದ ಅನುದಾನ ನೀಡಲು ಸಾಧ್ಯವಾಗುತ್ತಿತ್ತು. ಅನಂತರ ಲೈಫ್‌ ಭವನ ಯೋಜನೆ ಬಂದ ಮೇಲೆ ಮನೆ ನಿರ್ಮಾಣಕ್ಕೆ ಅನುದಾನ ಲಭಿಸಬೇಕಾದರೆ ಹಲವಾರು ಮಾನದಂಡಗಳು ಇವೆ. ಆದ್ದರಿಂದ ಬಹಳಷ್ಟು ಮಂದಿಗೆ ಮನೆ ನಿರ್ಮಾಣಕ್ಕೆ ಅನುದಾನ ಲಭಿಸುವುದಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರದ ಯೋಜನೆ  ಪಿಎಂಎವೈ ಜಾರಿಯಾಗಿದ್ದು ಅದರ ಜವಾಬ್ದಾರಿ ಇರುವುದು ಗ್ರಾಮ ವಿಸ್ತರಣಾಧಿಕಾರಿಗೆ. ಆದರೆ ಅವರಿಗೆ ಶೌಚಾಲಯ ನಿರ್ಮಿಸಲು ಮುಂದಿನ ಯೋಜನೆಯಲ್ಲಿ ಅನುದಾನ ಇರಿಸಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಸಹಾಯ ಹಸ್ತ
ಮನೆ ಮುರಿದು ಬಿದ್ದ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು ಅದರ ವರದಿ ಬಂದಿಲ್ಲ. ವರದಿ ಬಂದಾಗ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸರಕಾರದ ಪಿಎಂಎವೈ ಯೋಜನೆಯ ಜಾಲತಾಣ ತೆರೆದಿಲ್ಲ . ಇದೀಗ ಮನವಿ ಮಾತ್ರ ಸ್ವೀಕರಿಸುವುದು ಎಂದು ಎಣ್ಮಕಜೆ ಪಂ.ಗ್ರಾಮ ವಿಸ್ತರಣಾಧಿಕಾರಿ ಹೇಳಿದರು. ಈ ಕುಟುಂಬದ ದುರವಸ್ಥೆಯ ಬಗ್ಗೆ ಜಿಲ್ಲಾ ಮೊಗೇರ ಸರ್ವಿಸ್‌ ಸೊಸೈಟಿ ಅಧ್ಯಕ್ಷ ಬಾಬು ಪಚ್ಲಂಪಾರೆ ಅವರ ಗಮನ ಸೆಳೆದಾಗ, ಆ ಬಡ ಕುಟುಂಬಕ್ಕೆ ಸಾಧ್ಯವಾಗುವ ಎಲ್ಲ ಸಹಾಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.