ವಿದ್ಯಾರ್ಥಿನಿಗೆ ಪಾನಿಪೂರಿ ತಿನ್ನಿಸಿದ ವಿದ್ಯಾರ್ಥಿ; ಹೊಡೆದಾಟ
Team Udayavani, Dec 4, 2022, 5:20 PM IST
ಕುಂಬಳೆ: ಪಾನಿಪೂರಿ ಸ್ಟಾಲ್‌ನಲ್ಲಿ ವಿದ್ಯಾರ್ಥಿಯೋರ್ವ ವಿದ್ಯಾರ್ಥಿನಿಗೆ ಪಾನಿಪೂರಿಯನ್ನು ಪರಸ್ಪರ ಬಾಯಿಗೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯುವಕನ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ಡಿ. 1ರಂದು (ಗುರುವಾರ) ಸಂಜೆ ಕುಂಬಳೆ ಪೇಟೆಯಲ್ಲಿ ನಡೆದಿದೆ
ಶಾಲೆ ಬಿಟ್ಟ ಬಳಿಕ ಕುಂಬಳೆ ಶಾಲೆಯ ಒಂದು ತಂಡದ ವಿದಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪೇಟೆಯಲ್ಲಿರುವ ಪಾನಿಪೂರಿ ಸ್ಟಾಲ್‌ಗೆ ಬಂದಿದ್ದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಪಾನಿಪೂರಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಪಾನಿ ಪೂರಿ ತಿನ್ನಿಸುವುದನ್ನು ಕಂಡ ವಿದ್ಯಾರ್ಥಿನಿಯ ಸಂಬಂಧಿಕ ಯುವಕ ವಿದ್ಯಾರ್ಥಿನಿಯ ಸಮೀಪಕ್ಕೆ ಬಂದು ಪ್ರಶ್ನಿಸಿದ್ದ. ಈ ವೇಳೆ ವಿದ್ಯಾರ್ಥಿ ಹಾಗೂ ಯುವಕನ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ತಿರುಗಿತು. ಅಷ್ಟರಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರು ಅಲ್ಲಿಗೆ ಬಂದು ಸೇರಿದ್ದು, ಹೊಡೆದಾಟ ನಡೆಯಿತು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ತಂಡವನ್ನು ಚದುರಿಸಿದರು.