ಕಾಸರಗೋಡು ಅಪರಾಧ ಸುದ್ದಿಗಳು
Team Udayavani, May 16, 2022, 4:53 PM IST
ತಂಬಾಕು ಉತ್ಪನ್ನ ಸಾಗಾಟ : ಬಂಧನ
ಕಾಸರಗೋಡು: ತರಕಾರಿ ಸಾಗಾಟ ಮರೆಯಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸಿದ ಲಾರಿಯನ್ನು ವಶಪಡಿಸಿದ ಪೊಲೀಸರು ಚಾಲಕ ಮಧೂರು ನಿವಾಸಿ ಎ.ಎಂ.ಯೂಸುಫ್ (66)ನನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು ಒಂದೂವರೆ ಕ್ವಿಂಟಾಲ್ ಹೊಗೆಸೊಪ್ಪು ವಶಪಡಿಸಲಾಗಿದೆ. ಕಲ್ಲಿಕೋಟೆಯತ್ತ ಸಾಗುತ್ತಿದ್ದ ಲಾರಿಯನ್ನು ಕಣ್ಣೂರು ಟೌನ್ ಸಿ.ಐ. ಶ್ರೀಜಿತ್ ನೇತೃತ್ವದ ಪೊಲೀಸರು ವಶಪಡಿಸಿದ್ದಾರೆ. 30 ಗೋಣಿ ಚೀಲಗಳಲ್ಲಿ ತಂಬಾಕು ಉತ್ಪನ್ನಗಳನ್ನು ತುಂಬಿಸಿಡಲಾಗಿತ್ತು.
ಜುಗಾರಿ : ನಾಲ್ವರ ಬಂಧನ
ಹೊಸದುರ್ಗ: ಜುಗಾರಿ ದಂಧೆಯಲ್ಲಿ ನಿತರರಾಗಿದ್ದ ನಾಲ್ವರನ್ನು ಬಂಧಿಸಿದ ಅಂಬಲತ್ತರ ಪೊಲೀಸರು ಇವರಿಂದ 2230 ರೂ. ವಶಪಡಿಸಿದ್ದಾರೆ.
ಎಣ್ಣಪ್ಪಾರ ಮುಕ್ಕುಳಿಗುಳಿ ಪನಯಾಲ್‌ಕುನ್° ಗೋಪಾಲನ್(55), ಎಂ.ಶಂಕರನ್(46), ಕೆ.ಜಿ.ಜೋಸ್(52), ಪಿ.ಸಂತೋಷ್ (48)ನನ್ನು ಬಂಧಿಸಲಾಗಿದೆ.
ಬೈಕ್ ಢಿಕ್ಕಿ : ಅಧ್ಯಾಪಕನಿಗೆ ಗಾಯ
ಹೊಸದುರ್ಗ: ಮಾಣಿಕೋತ್ತ್ ಅಂಚೆ ಕಚೇರಿ ಪರಿಸರದಲ್ಲಿ ಬೈಕ್ ಢಿಕ್ಕಿ ಹೊಡೆದು ಮಾಣಿಕೋತ್ತ್ ಮಿಫ್ತಾಹುಲ್ ಉಲೂಂ ಮದ್ರಸ ಅಧ್ಯಾಪಕ ತಳಿಪರಂಬ ನಿವಾಸಿ ಎಂ.ಸಿ.ಮುಹಮ್ಮದ್ (63) ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
29 ಗ್ರಾಂ ಎಂ.ಡಿ.ಎಂ.ಎ. ಸಹಿತ ಇಬ್ಬರ ಬಂಧನ
ಕಾಸರಗೋಡು: ಜೀಪಿನಲ್ಲಿ ಸಾಗಿಸುತ್ತಿದ್ದ 29 ಗ್ರಾಂ ಎಂಡಿಎಂಎ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉದುಮದ ಫ್ಯಾಮಿಲಿ ರೆಸ್ಟಾರೆಂಟ್ ಮಾಲಕ ಈಚಿಲುಂಗಾಲ್ ಹುಸೈನ್ ಹೌಸ್‌ನ ಎನ್.ಮುನೀರ್(28), ಮುಳಿಯಾರು ಮೂಲಡ್ಕದ ಎ.ನಿಸಾಮುದ್ದೀನ್(27)ನನ್ನು ಕುಂಟಾರು ಮಸೀದಿ ಪರಿಸರದಿಂದ ಆದೂರು ಪೊಲೀಸರು ಬಂಧಿಸಿದರು.
ಬೇಕಲ ಡಿವೈಎಸ್‌ಪಿ ಪಿ.ಕೆ.ಸುನಿಲ್ ಕುಮಾರ್ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಡಗು: ಮುಂದುವರಿದ ಭಾರೀ ಮಳೆ: ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಆರ್. ಅಶೋಕ್
ಕರಾವಳಿಯಲ್ಲಿ ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ
ಧಾರಾಕಾರ ಮಳೆ : ನಾಳೆ ಕೊಡಗಿನ ಎಲ್ಲಾ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ
ಕೊಡಗಿನಲ್ಲಿ ಧಾರಾಕಾರ ಮಳೆ : ರಸ್ತೆಗುರುಳಿದ ಮರ,ವಿದ್ಯುತ್ ಕಂಬ, ಬಂಡೆ ಕಲ್ಲು
ಕುಂಬಳೆ : ಅನುಮಾನಾಸ್ಪದವಾಗಿ ಪತ್ತೆಯಾದ ಕಾರಿನೊಳಗೆ ಇತ್ತು ಸುತ್ತಿಗೆ
MUST WATCH
ಹೊಸ ಸೇರ್ಪಡೆ
ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!
ಉಡುಪಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು
ಮೂರು ದಿನವಾದರೂ ಪತ್ತೆಯಾಗಿಲ್ಲ ಕೊಚ್ಚಿಹೋದ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ
ವೃದ್ಧೆ ಕೈಕಾಲು ಕಟ್ಟಿ 10 ಲಕ್ಷ ನಗದು, 100 ಗ್ರಾಂ ಚಿನ್ನ ದೋಚಿದವರ ಸೆರೆ