ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ ; 15 ಮಂದಿಗೆ ಗಾಯ
Team Udayavani, Dec 1, 2022, 6:29 PM IST
ಕಾಸರಗೋಡು: ಮಂಜೇಶ್ವರ ಬಳಿ ಕೆಎಸ್‌ಆರ್‌ಟಿಸಿ (ಕೇರಳ) ಬಸ್ ಪಲ್ಟಿಯಾದ ಪರಿಣಾಮ ಸುಮಾರು 15 ಮಂದಿ ಗಾಯಗೊಂಡಿರುವ ಘಟನೆ (ಡಿ.1) ಗುರುವಾರದಂದು ನಡೆದಿದೆ.
ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್ ಬಳಿ ಪಲ್ಟಿಯಾಗಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.