ಕಾಸರಗೋಡು: ಸೋಮವಾರ 207 ಮಂದಿಗೆ ಕೋವಿಡ್ ಸೋಂಕು ದೃಢ


Team Udayavani, Oct 5, 2020, 11:01 PM IST

ಕಾಸರಗೋಡು: 207 ಪಾಸಿಟಿವ್‌

ಸಾಂದರ್ಭಿಕ ಚಿತ್ರ

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 207 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಂದರ್ಭದಲ್ಲಿ 165 ಮಂದಿ ಗುಣಮುಖರಾಗಿದ್ದಾರೆ. 189 ಮಂದಿಗೆ ಸಂಪರ್ಕದ ಮೂಲಕ ತಗಲಿದೆ. ಬಾಧಿತರಲ್ಲಿ ಐವರು ವಿದೇಶದಿಂದಲೂ ಹಾಗೂ 13 ಮಂದಿ ಇತರ ರಾಜ್ಯಗಳಿಂದ ಬಂದವರು.

ಐವರ ಸಾವು
ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 101ಕ್ಕೇರಿದೆ. 62 ವರ್ಷದ ಕಾಸರಗೋಡು ಸೂರ್ಲು ಆರ್‌.ಡಿ. ನಗರದ ಆಲಂಗೋಡು ರೆಸಿಡೆನ್ಸ್‌ ಕಾಲನಿ ನಿವಾಸಿ, 52 ವರ್ಷ ನೀರ್ಚಾಲು ಚಿಮಿನಿಯಡ್ಕ ನಿವಾಸಿ, 61 ವರ್ಷದ ಚಟ್ಟಂಚಾಲು ಬೆಂಡಿಚ್ಚಾಲ್‌ ಬಾಲನಡ್ಕದ ನಿವಾಸಿ, 52ರ ಹರೆಯದ ಚೆರ್ವತ್ತೂರು ತುರುತ್ತಿ ಮುಳಕ್ಕೀಲ್‌ ನಿವಾಸಿ ಮತ್ತು 59ರ ಹರೆಯದ ಪಡನ್ನಕ್ಕಾಡ್‌ ಕುರುಂದೂರು ನಿವಾಸಿ ಮೃತಪಟ್ಟವರು.

ಕೇರಳದಲ್ಲಿ 5,042 ಪ್ರಕರಣ
ಕೇರಳದಲ್ಲಿ ಸೋಮವಾರ 5,042 ಮಂದಿಗೆ ಸೋಂಕು ದೃಢಪಟ್ಟಿದೆ. 23 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 859ಕ್ಕೇರಿದೆ.

67 ಪೊಲೀಸರಿಗೆ ಚಿಕಿತ್ಸೆ
ಕಾಸರಗೋಡು: ಕಾಸರಗೋಡು ನಗರ ಠಾಣೆಯ 67 ಮಂದಿ ಪೊಲೀಸರನ್ನು ಕೊರೊನಾ ಬಾಧಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಗರ ಠಾಣೆಯ ಪೊಲೀಸರು ಕ್ವಾರಂಟೈನ್‌ನಲ್ಲಿರುವುದರಿಂದ ಈ ಠಾಣೆಯ ಹೊಣೆಯನ್ನು ಆದೂರು ಠಾಣೆಯ ಇನ್‌ಸ್ಪೆಕ್ಟರ್‌ ವಿಶ್ವಂಭರನ್‌ ಮತ್ತು ವಿದ್ಯಾನಗರ ಠಾಣೆಯ ಎಸ್‌ಐ ವಿಜಯನ್‌ ಅವರಿಗೆ ವಹಿಸಲಾಗಿದೆ. ಇತರ ಠಾಣೆಗಳ ಪೊಲೀಸ್‌ ಸಿಬಂದಿಯನ್ನು ನಗರ ಠಾಣೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.

ಅಗ್ನಿ ಶಾಮಕ ದಳದ ನಾಲ್ವರಿಗೆ ಕೋವಿಡ್‌
ಕಾಸರಗೋಡು ಅಗ್ನಿಶಾಮಕ ದಳದ ನಾಲ್ವರಿಗೆ ಕೋವಿಡ್‌ ದೃಢಗೊಂಡಿದೆ. ಅಲ್ಲದೆ ಒಬ್ಬರ ಕುಟುಂಬದ ಮೂವರಿಗೆ ಸೋಂಕು ಬಾಧಿಸಿದೆ. ಈ ಕೇಂದ್ರದಲ್ಲಿ ಒಟ್ಟು 28 ಮಂದಿ ಇದ್ದು, 15 ಮಂದಿ ನಿಗಾದಲ್ಲಿದ್ದಾರೆ.

ಟಾಪ್ ನ್ಯೂಸ್

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಸರಗೋಡು ರೈಲು ನಿಲ್ದಾಣ

ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಸರಗೋಡು ರೈಲು ನಿಲ್ದಾಣ

15 ದಿನಗಳಲ್ಲಿ ಪರಿಹಾರ: ಸಚಿವ ಆರ್‌.ಅಶೋಕ್‌

15 ದಿನಗಳಲ್ಲಿ ಪರಿಹಾರ: ಸಚಿವ ಆರ್‌.ಅಶೋಕ್‌

ರೈತರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ

ರೈತರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ

ಮಡಿಕೇರಿ: ವಿದ್ಯಾರ್ಥಿನಿಯರ ಮೇಲೆ ದಾಳಿ: ಪೋಕ್ಸೋ ಕಾಯ್ದೆಯಡಿ ಕೇಸು

ಮಡಿಕೇರಿ: ವಿದ್ಯಾರ್ಥಿನಿಯರ ಮೇಲೆ ದಾಳಿ: ಪೋಕ್ಸೋ ಕಾಯ್ದೆಯಡಿ ಕೇಸು

ಮಡಿಕೇರಿ : ಬಿಜೆಪಿ ಪ್ರಮುಖರು, ನಗರಸಭಾ ಸದಸ್ಯರನ್ನು ವಶಕ್ಕೆ ಪಡೆದ ಪೊಲೀಸರು

ಮಡಿಕೇರಿ: ಬಿಜೆಪಿ ಪ್ರಮುಖರು, ನಗರಸಭಾ ಸದಸ್ಯರನ್ನು ವಶಕ್ಕೆ ಪಡೆದ ಪೊಲೀಸರು

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.